ಮೈಸೂರು: ಸಕಾಲಕ್ಕೆ ಆಂಬುಲೆನ್ಸ್ ಸೇವೆ ಸಿಗದೇ ಹಸುಳೆ ಮೃತಪಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ಆಂಬುಲೆನ್ಸ್ ಶುಶ್ರೂಷಕ ಮಹೇಶ್ ಅವರನ್ನು ಅಮಾನತು ಮಾಡಲಾಗಿದೆ.
ಜಿಲ್ಲಾ ಆರೋಗ್ಯಾಧಿಕಾರಿ ಡಾ.ಕೆ.ಎಚ್.ಪ್ರಸಾದ್ ಈ ಕುರಿತು ಮಾಹಿತಿ ನೀಡಿ, ಆಂಬುಲೆನ್ಸ್’ನಲ್ಲಿ ಆಮ್ಲಜನಕ ಲಭ್ಯವಿದ್ದರೂ ಅವರು ಸ್ಪಂದಿಸಿರಲಿಲ್ಲ. ಕರ್ತವ್ಯಲೋಪದ ಕುರಿತು ಆಂಬುಲೆನ್ಸ್ ಸೇವೆ ನೀಡುವ ಸಂಸ್ಥೆಗೆ ಮಾಹಿತಿ ನೀಡಿ ಅಮಾನತ್ತು ಮಾಡಲಾಗಿದೆ. ಹಾಲು ಕುಡಿಸುವಾಗ ವ್ಯತ್ಯಾಸವಾಗಿ ಶ್ವಾಸಕೋಶದ ಸಮಸ್ಯೆ ಏರ್ಪಟ್ಟು ಹಸುಳೆ ಮೃತಪಟ್ಟಿದೆ ಎಂದು ಪ್ರತಿಕ್ರಿಯಿಸಿದರು.














