ನವದೆಹಲಿ: ಕೊಯಮುತ್ತೂರು ಮತ್ತು ಮಂಗಳೂರು ಬ್ಲಾಸ್ಟ್ ಪ್ರಕರಣಕ್ಕೆ ಸಂಬಧಿಸಿದಂತೆ ತಮಿಳುನಾಡು, ಕೇರಳ ಮತ್ತು ಕರ್ನಾಟಕದ 40 ಪ್ರದೇಶಗಳ ಮೇಲೆ ಏಕಕಾಲಕ್ಕೆ ರಾಷ್ಟ್ರೀಯ ತನಿಖಾ ದಳ (ಎನ್’ಐಎ) ಅಧಿಕಾರಿಗಳು ದಾಳಿ ಮಾಡಿದ್ದಾರೆ.
ದಾಳಿಯಲ್ಲಿ ಎಲೆಕ್ಟ್ರಾನಿಕ್ ಡಿವೈಸ್ಗಳು ಮತ್ತು ಕೆಲವು ದಾಖಲೆಗಳನ್ನು ವಶಪಡಿಸಿಕೊಂಡಿದ್ದಾರೆ.
ತಮಿಳುನಾಡಿನ ಕೊಯಮುತ್ತೂರನ ಕೊಟ್ಟಯ್ ಈಶ್ವರನ್ ದೇವಸ್ಥಾನ ಎದುರುಗಡೆ ಸ್ಪೋಟಗೊಂಡ ಕಾರ್ ಬ್ಲಾಸ್ಟ್’ನಲ್ಲಿ ಜಮೀಶ್ ಮುಬೀನ್ ಎಂಬುವನು ಸಾವನ್ನಪ್ಪಿದ್ದನು. ಜಾಗತಿಕ ಭಯೋತ್ಪಾದಕ ಸಂಘಟನೆಯಾದ ಇಸ್ಲಾಮಿಕ್ ಸ್ಟೇಟ್ ಜೊತೆ ಜಮೀಶ್ ಮುಬೀನ್ ನಂಟು ಹೊಂದಿದ್ದು. ಈತ ಆತ್ಮಾಹುತಿ ಬಾಂಬ್’ಗೆ ಧಾರ್ಮಿಕ ಕೇಂದ್ರಗಳು ಮತ್ತು ಸ್ಮಾರಕಗಳನ್ನು ಟಾರ್ಗೆಟ್ ಮಾಡಿದ್ದನು ಎಂದು ಎನ್‌ಐಎ ಹೇಳಿದೆ.
ಈ ಪ್ರಕರಣದಲ್ಲಿ 6 ಮಂದಿಯನ್ನು ಬಂಧಿಸಲಾಗಿದೆ. ಅಧಿಕಾರಿಗಳು ಸ್ಫೋಟವನ್ನು “ಲೋನ್ ವುಲ್ಫ್” ದಾಳಿ ಎಂದು ಕರೆದಿದ್ದಾರೆ.
ಇನ್ನೂ ಮಂಗಳೂರಿನಲ್ಲಿ ನಡೆದ ಆಟೋ ಬಾಂಬ್ ಬ್ಲಾಸ್ಟ್ ಪ್ರಕರಣದಲ್ಲಿ ಆಟೋ ಚಾಲಕ ಮತ್ತು ಆರೋಪಿ ಮೊಹ್ಮದ್ ಶಾರಿಕ್ ಇಬ್ಬರು ಗಾಯಗೊಂಡಿದ್ದರು. ಸ್ಫೋಟ ಪ್ರಕರಣದ ತನಿಖೆಯ ಸಂದರ್ಭದಲ್ಲಿ, ಶಾರಿಕ್ ಮತ್ತು ಆತನ ಸಹಚರರು ಕರ್ನಾಟಕದ ಅರಣ್ಯಗಳಲ್ಲಿ ಇಸ್ಲಾಮಿಕ್ ಸ್ಟೇಟ್ ಕ್ಯಾಂಪ್ ಸ್ಥಾಪಿಸಲು ಬಯಸಿದ್ದರು ಎಂದು ಎನ್ಐಎಗೆ ತಿಳಿದುಬಂದಿದೆ.
ಅಲ್ಲದೇ ಮಂಗಳೂರು ಸುತ್ತಮುತ್ತಲಿನ ಕಾಡಿನಲ್ಲಿ ಮೊಹ್ಮದ್ ಶಾರಿಕ್ ಮತ್ತು ಆತನ ಸಹಚರರು ಇಸ್ಲಾಮಿಕ್ ಸ್ಟೇಟ್ ಕ್ಯಾಂಪ್’ನ್ನು ಹೂಡಿದ್ದು, ಅಲ್ಲಿ ಮೊಹ್ಮದ್ ಶಾರಿಕ್ ತರಬೇತಿ ಪಡೆದಿದ್ದನು ಎಂದು ಎನ್‌ಐಎ ಹೇಳಿದೆ.