ಮನೆ ಅಪರಾಧ ಮೈಸೂರು: ಪ್ರಿಯಕರನ ಜೊತೆ ಸೇರಿ ಪತಿಯನ್ನೇ ಹತ್ಯೆಗೈದ ಪತ್ನಿ

ಮೈಸೂರು: ಪ್ರಿಯಕರನ ಜೊತೆ ಸೇರಿ ಪತಿಯನ್ನೇ ಹತ್ಯೆಗೈದ ಪತ್ನಿ

0

ಮೈಸೂರು: ಅನೈತಿಕ ಸಂಬಂಧ ಪ್ರಶ್ನಿಸಿದ ಪತಿಯನ್ನೇ ಪ್ರಿಯಕರನ ಜತೆ ಸೇರಿ ಪತ್ನಿ ಹತ್ಯೆ ಮಾಡಿರುವ ಘಟನೆ ಮೈಸೂರಿನಲ್ಲಿ ನಡೆದಿದೆ.

ಮೈಸೂರಿನ ಹೂಟಗಳ್ಳಿ ನಿವಾಸಿ ಮಂಜು ಕೊಲೆಯಾದ ದುರ್ದೈವಿ.

ಮೈಸೂರಿನ ಬೋಗಾದಿ ನಿವಾಸಿ ಲಿಖಿತಾ ಜೊತೆ 12 ವರ್ಷಗಳ ಹಿಂದೆ ಮಂಜು ಮದುವೆಯಾಗಿದ್ದರು. ಇವರಿಗೆ ಇಬ್ಬರು ಮಕ್ಕಳಿದ್ದಾರೆ.

ಈ ಹಿಂದೆ ಪ್ರಿಯಕರನ ಜೊತೆ ಲಿಖಿತಾ ಮನೆಬಿಟ್ಟು ಹೋಗಿದ್ದು, ಬಳಿಕ ರಾಜಿ ಪಂಚಾಯಿತಿ ಮೂಲಕ ಮತ್ತೆ ಪತಿ ಮನೆ ಸೇರಿಸಿಕೊಂಡಿದ್ದಳು. ಈ ವೇಳೆ ಹೆಂಡತಿಯ ನಡವಳಿಕೆ ಬಗ್ಗೆ ಗಂಡ ಆಗಾಗ್ಗೆ ಪ್ರಶ್ನೆ ಮಾಡುತ್ತಿರುವುದಾಗಿ ತಿಳಿದು ಬಂದಿದೆ.

ಇದರಿಂದ  ಕೋಪಗೊಂಡ ಲಿಖಿತ ತಡರಾತ್ರಿ ಪ್ರಿಯಕರನ ಜೊತೆ ಸೇರಿ ತನ್ನ ಗಂಡ ಮಂಜು ಅವರನ್ನು ಉಸಿರುಗಟ್ಟಿಸಿ ಕೊಲೆ ಮಾಡಿದ್ದಾಳೆ.

ಪ್ರಕರಣದ ತನಿಖೆ ಕೈಗೊಂಡ ಮೈಸೂರಿನ ವಿಜಯನಗರ ಪೋಲೀಸರು ಲಿಖಿತಾಳನ್ನು ವಶಕ್ಕೆ ಪಡೆದಿದ್ದಾರೆ.