ಮನೆ ಮನರಂಜನೆ ಮಾರ್ಚ್‌ 10ರಂದು ‘ಮಂಡಲ’ ಚಿತ್ರ ತೆರೆಗೆ

ಮಾರ್ಚ್‌ 10ರಂದು ‘ಮಂಡಲ’ ಚಿತ್ರ ತೆರೆಗೆ

0

ವಿಜ್ಞಾನ ಕಥೆಯ ‘ಮಂಡಲ’ ತೆರೆಗೆ ಬರಲು ದಿನಗಣನೆ ನಡೆದಿದೆ. ಈಗಾಗಲೇ ಫಸ್ಟ್‌’ಲುಕ್‌’ನಿಂದ ಮನಗೆದ್ದಿರುವ ಚಿತ್ರ ವಿಜ್ಞಾನ ಕಥಾ ಹಂದರದ ಜೊತೆಗೆ ಕೌಟುಂಬಿಕ ಸನ್ನಿವೇಶಗಳನ್ನೂ ಒಳಗೊಂಡಿದ್ದು, ಮಾರ್ಚ್‌ 10ರಂದು ಚಿತ್ರ ತೆರೆ ಕಾಣಲಿದೆ.

ಅಜಯ್‌ ಸರ್ಪೇಷ್ಕರ್‌ ಈ ಚಿತ್ರದ ನಿರ್ದೇಶಕರು. ಸಾಫ್ಟ್‌’ವೇರ್‌ ಉದ್ಯೋಗಿಯಾಗಿದ್ದ ಅವರು ಸಿನಿಮಾ ಮೇಲಿನ ಪ್ರೀತಿಯಿಂದಾಗಿ ಕೆಲಸಕ್ಕೆ ಗುಡ್‌ಬೈ ಹೇಳಿದರು.

ಅನಂತ್ ನಾಗ್, ಪ್ರಕಾಶ್ ಬೆಳವಾಡಿ, ಶರ್ಮಿಳಾ ಮಾಂಡ್ರೆ, ಸಂಯುಕ್ತಾ ಹೊರನಾಡು, ಕಿರಣ್ ಶ್ರೀನಿವಾಸ, ಸುಧಾ ಬೆಳವಾಡಿ, ನೀನಾಸಂ ಅಶ್ವಥ್, ಮನ್ ದೀಪ್ ರಾಯ್, ಕಿರಣ್ ನಾಯಕ್, ಸಮನ್ವಿತಾ ಶೆಟ್ಟಿ, ನರೇಶ್ ನರಸಿಂಹನ್ ಈ ಚಿತ್ರದ ಮುಖ್ಯ ಭೂಮಿಕೆಯಲ್ಲಿದ್ದಾರೆ.

ಜೆಸ್ಸಿ ಕ್ಲಿಂಟನ್ ಸಂಗೀತ ನಿರ್ದೇಶನ, ರಾಮಿಶೆಟ್ಟಿ ಪವನ್ ಸಂಕಲನ, ಮನೋಹರ್ ಜೋಶಿ ಛಾಯಾಗ್ರಹಣ,ನಿತಿನ್ ಲುಕೋಸೆ ಸೌಂಡ್ ಡಿಸೈನ್, ಒಲಿವರ್ ಎಲ್ವಿಸ್ ಹಾಗೂ ಮನೋಜ್ ಬೆಳ್ಳೂರು ವಿಎಫ್‌’ಎಕ್ಸ್‌ ಈ ಚಿತ್ರಕ್ಕಿದೆ.