ಮನೆ ಯೋಗಾಸನ ಅಷ್ಟಾಂಗ ಯೋಗ ಎಂದರೇನು, ರೂಢಿಗೆ ಬಂದಿದ್ದು ಹೇಗೆ?

ಅಷ್ಟಾಂಗ ಯೋಗ ಎಂದರೇನು, ರೂಢಿಗೆ ಬಂದಿದ್ದು ಹೇಗೆ?

0

ಯೋಗ ದೇಹದಲ್ಲಿ ಹೊಸ ಚೈತನ್ಯವನ್ನು ನೀಡುತ್ತದೆ. ಮಾನಸಿಕ ಮತ್ತು ದೈಹಿಕ ಆರೋಗ್ಯವನ್ನು ಉತ್ತಮಗೊಳಿಸುತ್ತದೆ. ಯೋಗದಲ್ಲಿ ಅನೇಕ ಪ್ರಕಾರಗಳಿವೆ, ಮುದ್ರೆಗಳಿವೆ, ಆಸನಗಳಿವೆ. ಅದರಲ್ಲಿ ಒಂದು ಅಷ್ಟಾಂಗ ಯೋಗ.

ಈ ಅಷ್ಟಾಂಗ ಯೋಗವು ಪತಂಜಲಿ ಯೋಗ ಸೂತ್ರದಲ್ಲಿ ಬರುತ್ತದೆ. 8 ಅಂಗಗಳಿಗೆ ಸಂಬಂಧಿಸಿದ ಯೋಗವಾಗಿದೆ. ಅಷ್ಟಾಂಗ ಎಂಬ ಪದವು “ಅಷ್ಟ” ಮತ್ತು “ಅಂಗ” ಎಂಬ ಎರಡು ಸಂಸ್ಕೃತ ಪದಗಳನ್ನು ಒಳಗೊಂಡಿದೆ. “ಅಷ್ಟ” ಎಂಟು ಸಂಖ್ಯೆಯನ್ನು ಸೂಚಿಸುತ್ತದೆ, ಆದರೆ “ಅಂಗ” ಎಂದರೆ ಅಂಗ ಅಥವಾ ದೇಹದ ಭಾಗ. ಆದ್ದರಿಂದ, ಅಷ್ಟಾಂಗವು ಯೋಗದ ಎಂಟು ಅಂಗಗಳನ್ನು ಒಳಗೊಂಡಿದೆ.

ಅಷ್ಟಾಂಗ ಯೋಗದ 8 ಅಂಗಗಳು

• ಯಮ

• ನಿಯಮ

• ಆಸನ

• ಪ್ರಾಣಾಯಾಮ

• ಪ್ರತ್ಯಾಹಾರ

• ಧಾರಣ

• ಧ್ಯಾನ

• ಸಮಾಧಿ

ಯಮ ಮತ್ತು ನಿಯಮ

ಯಮ ಮತ್ತು ನಿಯಮ ಎಂದರೆ ಯೋಗ ಮಾಡುವಾಗ ಪಾಲನೆ ಮಾಡಬೇಕಾದ ನಿಯಮಗಳನ್ನು ತಿಳಿಸುವುದಾಗಿದೆ. ಸಾಮಾಜಿಕವಾಗಿ ಮತ್ತು ವಯಕ್ತಿಕವಾಗಿ ಯಾವ ರೀತಿಯ ಆರೋಗ್ಯಕರ ಜೀವನಶೈಲಿಯನ್ನು ಅಳವಡಿಸಿಕೊಳ್ಳಬೇಕು, ಯಾವೆಲ್ಲಾ ನಿಯಮಗಳನ್ನು ಪಾಲಿಸಬೇಕು ಎನ್ನುವ ಬಗ್ಗೆ ಈ ಯಮ ಮತ್ತು ನಿಯಮ ತಿಳಿಸಿಕೊಡುತ್ತದೆ.

ಆಸನ

ಆಸನಗಳು ದೈಹಿಕ ಆರೋಗ್ಯವನ್ನು ಹೇಗೆ ಕಾಪಾಡಿಕೊಳ್ಳಬೇಕು ಎನ್ನುವ ಬಗ್ಗೆ ತಿಳಿಸುತ್ತದೆ. ಅದೇ ರೀತಿ ಆರೋಗ್ಯವನ್ನು ಕಾಪಾಡಿಕೊಳ್ಳಲು ದೈಹಿಕವಾಗಿ ಮಾಡಬೇಕಾದ ಆಸನಗಳ ಬಗ್ಗೆ ಅಷ್ಟಾಂಗ ಯೋಗದ ಮೂರನೇ ಹಂತವಾದ ಆಸನದಲ್ಲಿ ಹೇಳಲಾಗುತ್ತದೆ.

ಪ್ರಾಣಾಯಮ

ಆಸನಗಳನ್ನು ಮಾಡುವಾಗ ಮುಖ್ಯವಾಗಿ ಗಮನಿಸಬೇಕಾಗಿರುವುದು ಉಸಿರಾಟದ ಏರಿಳಿತವನ್ನು. ಅದಕ್ಕೆ ಪ್ರಾಣಾಯಾಮದ ಅಭ್ಯಾಸ ನೆರವಾಗುತ್ತದೆ. ಪ್ರಾಣಾಯಾಮ ಎಂದರೆ ಉಸಿರಾಟದ ಏರಿಳಿತದ ಬಗೆಗಿನ ತಂತ್ರವನ್ನು ಅಳವಡಿಸಿಕೊಳ್ಳಲು ಮಾಡಬೇಕಾದ ಅಭ್ಯಾಸವಾಗಿದೆ.

ಪ್ರಾಣಾಯಾಮವನ್ನು ವಜ್ರಾಸನ, ಪದ್ಮಾಸನಗಳತಹ ಆಸನಗಳಲ್ಲಿ ಕುಳಿತು ಅಭ್ಯಸಿಸಬಹುದಾಗಿದೆ.

ಪ್ರತ್ಯಾಹಾರ

ಇಂದ್ರಿಯಗಳನ್ನು ನಿಯಂತ್ರಿಸುವ ಬಗ್ಗೆ ಪ್ರತ್ಯಾಹಾರದಲ್ಲಿ ಹೇಳಲಾಗುತ್ತದೆ. ಪ್ರತ್ಯಾಹಾರ ಎಂದರೆ ಮುಖ್ಯವಾಗಿ ರುಚಿ, ವಾಸನೆ, ಕಣ್ಣು, ಕಿವಿ, ಸ್ಪರ್ಶ ಈ ಐದು ಪಂಚೇಂದ್ರಿಯಗಳನ್ನು ನಿಯಂತ್ರಣದಲ್ಲಿರಿಸಿ ಏಕಾಗ್ರತೆಯನ್ನು ಸಾಧಿಸುವ ಹಂತವಾಗಿದೆ. ಹೀಗಾಗಿ ಅಷ್ಟಾಂಗ ಯೋಗದಲ್ಲಿ ಪ್ರತ್ಯಾಹಾರ ಮಹತ್ವದ ಪಾತ್ರವಹಿಸುತ್ತದೆ.

ಧಾರಣ

ಧಾರಣ ಎಂದರೆ ಏಕಾಗೃತೆ. ಪ್ರತ್ಯಾಹಾರಕ್ಕಿಂತ ಮುಂದಿನ ಹಂತ ಇದಾಗಿದೆ. ಇಂದ್ರಿಯಗಳನ್ನು ನಿಯಂತ್ರಣದಲ್ಲಿ ಇಟ್ಟುಕೊಂಡು ಒಂದೇ ವಸ್ತುವಿನ ಮೇಲೆ ಏಕಾಗೃತೆಯನ್ನು ಸಾಧಿಸುವುದನ್ನು ಧಾರಣ ಎಂದು ಕರೆಯಲಾಗುತ್ತದೆ.

ಈ ಧಾರಣ ಶಕ್ತಿಯಿಂದ ದೇಹದಲ್ಲಿ ಮಾನಸಿಕ ಚಂಚಲತೆಯನ್ನು ನಿಯಂತ್ರಣ ಮಾಡಬಹುದಾಗಿದೆ.

ಸಮಾಧಿ

ಅಷ್ಟಾಂಗ ಯೋಗದಲ್ಲಿ ಕೊನೆಯ ಸ್ಥಿತಿ ಅದುವೇ ಸಮಾಧಿ. ಇದು ಯೋಗದ ಕೊನೆಯ ಹಂತ ಕೂಡ ಆಗಿದೆ. ಬಾಹ್ಯದ ಜಂಜಾಟಗಳಿಂದ ಸಂಪೂರ್ಣವಾಗಿ ಮುಕ್ತವಾಗಿ ಒಂದೇ ವಸ್ತುವಿನ ಮೇಲೆ ಅಥವಾ ಉಸಿರಾಟದ ಮೇಲೆ ಏಕಾಗೃತೆಯನ್ನು ಹೊಂದುವ ಸ್ಥಿತಿಯಾಗಿದೆ.

ಸಮಾಧಿಯ ಸ್ಥಿತಿಗೆ ಹೋದ ಮೇಲೆ ಹೊರಗಿನ ಯಾವುದೇ ಆಗುಹೋಗುಗಳಾಗಲೀ, ಬಾಹ್ಯ ಪ್ರಪಂಚದ ಅರಿವಾಗಲೀ ಇರುವುದಿಲ್ಲ.

ಸ್ವಯಂ ಸಾಕ್ಷಾತ್ಕಾರ ಅಥವಾ ಆತ್ಮಾವಲೋಕನ ಮಾಡಿಕೊಳ್ಳುವ ನಿಟ್ಟಿನಲ್ಲಿ ಅಷ್ಟಾಂಗ ಯೋಗ ಪತಂಜಲಿಯ ಕಾಲದಲ್ಲಿ ರೂಢಿಗೆ ಬಂದಿತು. ನಂತರದ ದಿನಗಳಲ್ಲಿ ಇದನ್ನು ಆರೋಗ್ಯ ವೃದ್ಧಿಸಿಕೊಳ್ಳುವ ಸಾಧನವಾಗಿ ಇಂದಿನ ದಿನಗಳಲ್ಲೂ ಬಳಕೆಯಾಗುತ್ತಿದೆ ಎನ್ನುತ್ತಾರೆ ಅಹಲ್ಯಾ.

ಧ್ಯಾನ

ಧಾರಣದ ಮುಂದಿನ ಹಂತ ಧ್ಯಾನ. ಅಂದರೆ ಒಂದೇ ವಸ್ತುವಿನ ಮೇಲೆ ದೀರ್ಘಕಾಲದವರೆಗೆ ಏಕಾಗೃತೆಯನ್ನು ಇಟ್ಟುಕೊಳ್ಳುವ ಸ್ಥಿತಿ.

ಧ್ಯಾನ ಮಾನಸಿಕವಾಗಿ ಧೈರ್ಯ, ನೆಮ್ಮದಿಯನ್ನು ನೀಡುತ್ತದೆ. ಅದಕ್ಕೆ ಹೇಳುವುದು ದಿನಕ್ಕೆ ಕನಿಷ್ಠ 15 ರಿಂದ 20 ನಿಮಿಷವಾದರೂ ಧ್ಯಾನ ಮಾಡಬೇಕು ಎಂದು. ಸಂಪೂರ್ಣ ಧ್ಯಾನಸ್ಥ ಸ್ಥಿತಿ ಮನಸ್ಸಿನ ಮೇಲೆ ಪೂರ್ಣ ಹಿಡಿತವನ್ನು ಸಾಧಿಸಲು ಸಹಾಯ ಮಾಡುತ್ತದೆ.