ಮನೆ ರಾಜಕೀಯ ಅರ್ಕಾವತಿ ಹಗರಣದಲ್ಲಿ ಭಾಗಿಯಾದವರು ಜೈಲಿಗೆ ಹೋಗುತ್ತಾರೆ: ನಳಿನ್ ಕುಮಾರ್ ಕಟೀಲ್

ಅರ್ಕಾವತಿ ಹಗರಣದಲ್ಲಿ ಭಾಗಿಯಾದವರು ಜೈಲಿಗೆ ಹೋಗುತ್ತಾರೆ: ನಳಿನ್ ಕುಮಾರ್ ಕಟೀಲ್

0

ಲಿಂಗಸೂಗುರು: ಅರ್ಕಾವತಿ ಪ್ರಕರಣದಲ್ಲಿ ಸಿದ್ದರಾಮಯ್ಯ ಜೈಲಿಗೆ ಹೋಗುತ್ತಾರೆ ಎಂದು ನಾನು ಹೇಳಿದ್ದೆ. ಜಸ್ಟೀಸ್ ಕೆಂಪಣ್ಣ ಕೊಟ್ಟ ವರದಿಯನ್ನು  ವಿಧಾನಸಭೆಯಲ್ಲಿ ಸಿಎಂ ಓದಿರುವುದಲ್ಲದೇ ಲೋಕಾಯುಕ್ತಕ್ಕೆ ನೀಡಿ ಸಂಪೂರ್ಣ ತನಿಖೆ ಮಾಡಿಸಲಾಗುತ್ತಿದೆ. ಪ್ರಕರಣದಲ್ಲಿ ಭಾಗಿಯಾದವರ ವಿರುದ್ಧ ಕ್ರಮ ಆಗುತ್ತದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ತಿಳಿಸಿದರು.

ಲಿಂಗಸೂಗೂರಿನಲ್ಲಿ ನಡೆದ ವಿಜಯಸಂಕಲ್ಪ ಯಾತ್ರೆಯಲ್ಲಿ ಭಾಗಿಯಾದ ವೇಳೆ ಸುದ್ದಿಗಾರರ ಜತೆ ಮಾತನಾಡಿದರು.

ಸಿದ್ದರಾಮಯ್ಯ ನೇತೃತ್ವದ ಬಹುಮತ ಸರ್ಕಾರ ಇದ್ದಾಗ ಹಗರಣ ಆಗಿತ್ತು. ತಾವು ಸಿಕ್ಕಿ ಬೀಳುತ್ತೇವೆ ಎಂದು ಲೋಕಾಯುಕ್ತವನ್ನು ಮುಚ್ಚಿಸಿದ್ದರು. ಹಲ್ಲಿಲ್ಲದ ಎಸಿಬಿಯನ್ನು ಹುಟ್ಟುಹಾಕಿದರು. ಕೆಂಪಣ್ಣ ವರದಿಯನ್ನು ಮುಚ್ಚಿಡುವ ಕೆಲಸ ಸಿದ್ದರಾಮಯ್ಯ ಮಾಡಿದ್ದರು. ಈಗ ಆ ವರದಿ ದಾಖಲಾತಿಗಳನ್ನು ಇಟ್ಟುಕೊಂಡು ತನಿಖೆ ಮಾಡಿಸುತ್ತೇವೆ. ಹಗರಣದಲ್ಲಿದ್ದವರು ಜೈಲಿಗೆ ಹೋಗುತ್ತಾರೆ ಎಂದು ತಿಳಿಸಿದರು.

ಅಮಿತ್ ಶಾ ಜನಾರ್ದನ ರೆಡ್ಡಿಯನ್ನು ನೋಡಿಕೊಳ್ಳುತ್ತೇನೆ ಎಂದು ಹೇಳಿಲ್ಲ. ನೀವು ಪಕ್ಷದ ಕೆಲಸ ಮಾಡಿ, ರೆಡ್ಡಿ ಬಗ್ಗೆ ನಾವು ಯೋಚಿಸುತ್ತೇವೆ ಎಂದಿದ್ದಾರೆ ಎಂದು ಸ್ಪಷ್ಟಪಡಿಸಿದರು.

ಸಿ.ಟಿ ರವಿ ಮಾಂಸ ತಿಂದು ದೇವಸ್ಥಾನಕ್ಕೆ ತೆರಳಿದ ವಿಚಾರದ ಬಗ್ಗೆ ಅವರು ಈಗಾಗಲೇ ಸ್ಪಷ್ಟನೆ ಕೊಟ್ಟಿದ್ದಾರೆ ಎಂದು ನಳಿನ್ ಕುಮಾರ್ ಹೇಳಿದರು.