ಮನೆ ಆರೋಗ್ಯ ದಿನವಿಡೀ ನಿಮ್ಮ ಮೈಂಡ್​ ಫ್ರೆಶ್​ ಆಗಿರಬೇಕಂದ್ರೆ, ಬೆಳಗ್ಗೆ ಈ ಆಹಾರಗಳನ್ನು ತಿನ್ನಬೇಡಿ

ದಿನವಿಡೀ ನಿಮ್ಮ ಮೈಂಡ್​ ಫ್ರೆಶ್​ ಆಗಿರಬೇಕಂದ್ರೆ, ಬೆಳಗ್ಗೆ ಈ ಆಹಾರಗಳನ್ನು ತಿನ್ನಬೇಡಿ

0

ಬೆಳಗ್ಗೆ ಎದ್ದ ತಕ್ಷಣ ಆರೋಗ್ಯಯುತ, ಪ್ರೋಟೀನ್ ಯುಕ್ತ ಆಹಾರದೊಂದಿಗೆ ದಿನ ಆರಂಭಿಸಿದರೆ ಭವಿಷ್ಯದಲ್ಲಿ ದೇಹ ರೋಗಗಳ ಮೂಟೆಯಾಗುವುದನ್ನು ತಪ್ಪಿಸಬಹುದು ಎಂಬುದು ಹಲವು, ಪೌಷ್ಟಿಕ ತಜ್ಞರ ಸಲಹೆ. ಆದರೆ ಇದನ್ನು ಎಷ್ಟು ಮಂದಿ ಅನುಸರಿಸುತ್ತಿದ್ದಾರೆ? ಬೆಳಗ್ಗೆ ಎದ್ದ ತಕ್ಷಣ ಕೆಲವರಿಗೆ ಟೀ , ಕಾಫಿ ಕುಡಿಯುವ ಅಭ್ಯಾಸವನ್ನು ರೂಢಿಸಿಕೊಂಡಿರುತ್ತಾರೆ. ಈ ಅಭ್ಯಾಸ ಆರೋಗ್ಯಕ್ಕೆ ಒಳ್ಳೆಯದಲ್ಲ. ಇದರಿಂದ ಅನಾರೋಗ್ಯ ಸಂಭವಿಸುತ್ತದೆ ಎಂದು ಹೇಳಿದರೂ ಮಾಡಿಕೊಂಡ ಅಭ್ಯಾಸವನ್ನು ಕೆಲವರಿಗೆ ಬಿಡಲು ಸಾಧ್ಯವಿಲ್ಲ. ಈ ಅಭ್ಯಾಸದಿಂದ ಅಸಿಡಿಟಿ, ಜೀರ್ಣಕ್ರಿಯೆ ಮತ್ತು ಕರುಳಿನ ಮೇಲೆ ಪ್ರಭಾವ ಬೀರುತ್ತದೆ ಎಂದು ಹೇಳಲಾಗುತ್ತದೆ.

Join Our Whatsapp Group

ಇದರ ಜೊತೆ ಇನ್ನು ಕೆಲವರು ಟೀ, ಕಾಫಿ ಜೊತೆಗೆ ಬಿಸ್ಕೇಟ್, ಬ್ರೆಡ್ ತಿನ್ನುವ ಅಭ್ಯಾಸವನ್ನು ಸಹ ರೂಢಿಸಿಕೊಂಡಿರುತ್ತಾರೆ. ಆದರೆ ಇದು ಒಂದು ಒಳ್ಳೆಯ ಸಂಯೋಜನೆ ಅಲ್ಲ ಎಂದು ತಿಳಿದು ಬಂದಿದೆ.

ಬೆಳಗ್ಗೆ ಟೀ ಜೊತೆಗೆ ಬಿಸ್ಕೇಟ್ ತಿನ್ನುವುದು ಆರೋಗ್ಯ ಸಂಬಂಧಿಸಿದ ಸಮಸ್ಯೆಗಳಿಗೆ ಆಹ್ವಾನ ನೀಡಿದಂತಾಗುತ್ತದೆ ಎಂದು ಹೇಳಲಾಗುತ್ತದೆ. ಈ ಅಭ್ಯಾಸ ಒಳ್ಳೆಯ ಆಯ್ಕೆಯಲ್ಲವಾದ್ದರಿಂದ ಮೊದಲು ಇದನ್ನು ತೊರೆಯಬೇಕು ಎಂದು ಅನೇಕ ಆರೋಗ್ಯ ತಜ್ಞರು ಹೇಳುತ್ತಾರೆ.

ಸಂಸ್ಕರಿಸಿದ ಹಿಟ್ಟಿನ ಬಳಕೆ

ಬಿಸ್ಕೇಟ್ ಅನ್ನು ಸಂಸ್ಕರಿಸಿದ ಹಿಟ್ಟಿನಿಂದ ಮಾಡಲಾಗುತ್ತದೆ. ಈ ಮೊದಲೇ ಸಂಸ್ಕರಿಸಿದ ಆಹಾರಗಳು ಆರೋಗ್ಯಕ್ಕೆ ಒಳ್ಳೆಯದಲ್ಲ ಎಂದು ಹೇಳಲಾಗಿದೆ.

ಬಿಸ್ಕೇಟ್ ಅನ್ನು ಮೈದಾ ಹಿಟ್ಟು ಅಥವಾ ಸಂಸ್ಕರಿಸಿದ ಹಿಟ್ಟಿನಿಂದ ತಯಾರು ಮಾಡಲಾಗುತ್ತದೆ. ಆದ್ದರಿಂದ ಬೆಳ್ಳಂಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಟೀ ಜೊತೆಗೆ ಬಿಸ್ಕೇಟ್ ಅನ್ನು ತಿನ್ನುವುದರಿಂದ ಖಂಡಿತವಾಗಿಯೂ ಕರುಳಿನ ಸಮಸ್ಯೆ ತಲೆದೋರುತ್ತದೆ ಎಂದು ತಿಳಿದು ಬಂದಿದೆ.

ಅನಾರೋಗ್ಯಯುತ ಪದಾರ್ಥಗಳು

ಬಿಸ್ಕೇಟ್ ನಲ್ಲಿ ಆರೋಗ್ಯಯುತ ಪದಾರ್ಥಗಳಿವೆ ಎಂದು ಹೇಳಲಾಗುತ್ತದೆ. ಆದರೆ ಇದರಲ್ಲಿ ಆರೋಗ್ಯ ಅಂಶವಿರುವ ಪದಾರ್ಥಗಳಿಗಿಂತ ಅನಾರೋಗ್ಯ ಸಂಬಂಧಿಸಿದ ಮೈದಾದಂತಹ ಪದಾರ್ಥಗಳಿವೆ. ಜೊತೆಗೆ ಪ್ರಿಸರ್ವೇಟಿವ್ ಹಾಗೂ ಎಮಲ್ಸಿಫೈಯರ್ ನಂತಹ ಪದಾರ್ಥಗಳು ಹೆಚ್ಚಾಗಿ ಬಳಕೆಯಾಗಿರುತ್ತವೆ. ಇದರಿಂದ ಇದು ಒಳ್ಳೆಯದಲ್ಲ ಎಂದು ಹೇಳಲಾಗುತ್ತದೆ.

ಅಸಿಡಿಟಿ, ಉಬ್ಬರ

ಟೀ ಮತ್ತು ಬಿಸ್ಕೇಟ್ ಸೇವನೆಯು ಅಸಿಡಿಟಿ, ಹೊಟ್ಟೆ ಉಬ್ಬರದಂತಹ ಸಮಸ್ಯೆಗಳಿಗೆ ಮೂಲ ಕಾರಣ ಎಂದೇ ಹೇಳಲಾಗುತ್ತದೆ. ಅಸಿಡಿಟಿ ಇತ್ತೀಚಿನ ದಿನಗಳಲ್ಲಿ ಎಲ್ಲರಲ್ಲಿ ಕಂಡು ಬರುತ್ತಿರುವ ಸಾಮಾನ್ಯ ಆರೋಗ್ಯ ಸಮಸ್ಯೆಯಾದರೂ ಇದನ್ನು ಕಡೆಗಣಿಸುವಂತಿಲ್ಲ.

ಇನ್ನು ಇದು ಅತಿಯಾದರೆ ಅಲ್ಸರ್ ನಂತಹ ಖಾಯಿಲೆಗಳಿಗೂ ಎಳೆಯುತ್ತದೆ. ಇದರಿಂದ ಹೊಟ್ಡೆ ಉಬ್ಬರದಂತಹ ಸಮಸ್ಯೆಯು ಯಥೇಚ್ಚವಾಗುತ್ತದೆ.

ಟೀ, ಬಿಸ್ಕೇಟ್ ನಿಂದಾಗಿ ಅಧಿಕ ರಕ್ತದೊತ್ತಡ ಹೆಚ್ಚಾಗುವುದಲ್ಲದೇ, ಡಯಾಬಿಟಿಸ್ ಉಂಟಾಗಲು ಮೂಲ ಕಾರಣವಾಗುತ್ತದೆ. ಇನ್ನು ತೂಕ ಏರಿಕೆ ಮತ್ತು ಇಳಿಕೆಯೂ ದೊಡ್ಡ ಸಮಸ್ಯೆಯಾಗಿದ್ದು, ಇದರಲ್ಲಿ ಟೀ ಪಾತ್ರವು ಅಧಿಕವಾಗಿದೆ ಎಂದು ಹೇಳಬಹುದು.

ಬಿಸ್ಕೇಟ್ ತಿನ್ನುವುದು ಇತಿಮಿತಿಯಾಗಿರಲಿ

ಬಿಸ್ಕೇಟ್ ಅನ್ನು ಅತಿಯಾಗಿ ಟೀ ಜೊತೆ ತಿನ್ನಬಾರದು. ಇತಿ ಮಿತಿಯಾಗಿದ್ದರೆ ಆರೋಗ್ಯದ ತೊಂದರೆಯಿಂದ ದೂರ ಇರಬಹುದು.

ಬಿಸ್ಕೇಟ್ ತಿನ್ನುವುದರಿಂದಲೇ ಎಲ್ಲಾ ಖಾಯಿಲೆಗಳು ಬರುತ್ತದೆ ಎಂದು ಹೇಳಲಾಗುವುದಿಲ್ಲ. ಆದರೆ ಆರೋಗ್ಯಯುತ ಪದಾರ್ಥಗಳನ್ನು ಒಳಗೊಂಡಿರುವ ಬಿಸ್ಕೇಟ್ ಗಳಿಗೆ ಮೊದಲು ಆದ್ಯತೆ ನೀಡಬೇಕು.

ಯಾವುದೇ ಬಿಸ್ಕೇಟ್ ಕೊಂಡುಕೊಳ್ಳುವ ಮುನ್ನ ಇದರಲ್ಲಿ ಯಾವ ರೀತಿಯ ಪದಾರ್ಥಗಳನ್ನು ಬಳಸಿದ್ದಾರೆ ಎಂಬುದರ ಕಡೆಗೆ ಗಮನ ಹರಿಸಬೇಕು. ಬಿಸ್ಕೇಟ್ ನಲ್ಲಿ ನಾರಿನಾಂಶ ಹೆಚ್ಚಾಗಿ ಇರುವಂತೆ ನೋಡಿಕೊಳ್ಳಬೇಕು.

ಬಿಸ್ಕೇಟ್ ಬದಲು ಏನು ಬಳಸಬೇಕು?

ಬಿಸ್ಕೇಟ್ ಬದಲು ಮಖಾನಾ, ಬಾದಾಮಿಯನ್ನು ತಿನ್ನಬಹುದು. ಏಕೆಂದರೆ ಮಖಾನಾ (ಕಮಲದ ಬೀಜಗಳು) ಪ್ರೋಟೀನ್ ನ ಆಗರ. ಇದರಲ್ಲಿ ಮ್ಯಾಂಗನೀಸ್, ಪೊಟ್ಯಾಷಿಯಂ, ಮೆಗ್ನೀಷಿಯಂ ಸೇರಿದಂತೆ ಹಲವು ಖನಿಜಾಂಶಗಳನ್ನು ಒಳಗೊಂಡಿದೆ.

ಮಖಾನಾ ತಿನ್ನುವುದರಿಂದ ಹೃದಯ, ಕಿಡ್ನಿ ಆರೋಗ್ಯ ಉತ್ತಮವಾಗಿರುತ್ತದೆ. ಎಲುಬುಗಳನ್ನು ಗಟ್ಟಿಗೊಳಿಸುತ್ತದೆ. ತೂಕ ಇಳಿಕೆಗೂ ಸಹಕಾರಿಯಾಗಿದೆ. ಹಾರ್ಮೋನ್ ಸಮತೋಲನ, ಜೀರ್ಣಾಂಗ ವ್ಯವಸ್ಥೆ ಸುಧಾರಣೆ, ಫಲವತ್ತತೆ ತೊಂದರೆ ದೂರ ಮಾಡುತ್ತದೆ.

ಹಾಗಾಗಿ ಮಖಾನಾ ವನ್ನು ಹುರಿದು ಪ್ರತಿದಿನ ಬೆಳಗ್ಗೆ ಹಾಗೂ ಸಂಜೆ ತಿನ್ನಬಹುದು. ಇನ್ನು ಬಾದಾಮಿಯಲ್ಲಿ ಮೆಗ್ನೇಷಿಯಂ, ವಿಟಮಿನ್ ಇ, ನಾರಿನಾಂಶ, ಕ್ಯಾಲ್ಷಿಯಂ ಹೆಚ್ಚಳವಾಗಿದೆ. ಇದರಿಂದ ಎಲುಬು, ಕೂದಲು, ತೂಕ ಇಳಿಕೆಗೆ ಮುಖ್ಯವಾಗಿದೆ.

ಹಿಂದಿನ ಲೇಖನಮೈಸೂರಿನ ಪಾರಂಪರಿಕ ಕಾಡಾ ಕಚೇರಿ ಕಟ್ಟಡಕ್ಕೆ ಧಕ್ಕೆ: ತಜ್ಞರ ಆಕ್ರೋಶ
ಮುಂದಿನ ಲೇಖನಹನೂರು ಹೆದ್ದಾರಿಯಲ್ಲಿ ಕಾಡಾನೆ ದಾಳಿ: ಕೂದಲೆಳೆ ಅಂತರದಲ್ಲಿ ಪಾರಾದ  ಬೈಕ್ ಸವಾರರು