ಮೈಸೂರು: ಕಾರು ಅಪಘಾತದಲ್ಲಿ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದ ವ್ಯಕ್ತಿ ಬದುಕಿದ್ದರೂ ಗ್ರಾಮ ಲೆಕ್ಕಿಗನೊಬ್ಬ ಡೆತ್ ಸರ್ಟಿಫಿಕೇಟ್ ನೀಡಿರುವ ಪ್ರಕರಣ ಬೆಳಕಿಗೆ ಬಂದಿದ್ದು, ಪ್ರಕರಣ ದಾಖಲಾಗಿದೆ.
ಪ್ರಶಾಂತ್ ಡೆತ್ ಸರ್ಟಿಫಿಕೇಟ್ ನೀಡಿದ ತಲಕಾಡು ಗ್ರಾಮ ಲೆಕ್ಕಿಗ.
ಆಸ್ಪತ್ರೆಯಲ್ಲಿ ಮರಣ ಹೊಂದುವ ಮುನ್ನಾ ದಿನಕ್ಕೆ ಡೆತ್ ಸರ್ಟಿಫಿಕೇಟ್ ನೀಡಿರುವ ವಿ.ಎ.ಪ್ರಶಾಂತ್ ಮೇಲೆ ಕಾನೂನು ಕ್ರಮ ಕೈಗೊಳ್ಳುವಂತೆ ಮೃತನ ವ್ಯಕ್ತಿ ಪುತ್ರ ನರೇಂದ್ರ ಎಂಬುವರು ಜಿಲ್ಲಾಧಿಕಾರಿಗಳ ಕಚೇರಿಗೆ ದೂರು ನೀಡಿ, ತಲಕಾಡು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
ತಲಕಾಡಿನ ಟಿ.ರಂಗೇಗೌಡ ಎಂಬುವರು ಕಾರು ಅಪಘಾತದಲ್ಲಿ ಗಾಯಗೊಂಡು ಚಿಕಿತ್ಸೆ ಫಲಕಾರಿಯಾಗದೆ 8-12-2018 ಮೃತಪಟ್ಟಿದ್ದರು. ನರೇಂದ್ರ ರವರು ತಮ್ಮ ತಂದೆ ವಿಧಿವಶರಾದ ಹಿನ್ನಲೆ ಮೈಸೂರು ಮಹಾನಗರ ಪಾಲಿಕೆಯಲ್ಲಿ ಡೆತ್ ಸರ್ಟಿಫಿಕೇಟ್ ಪಡೆದಿದ್ದಾರೆ. ಪಾಲಿಕೆಯಲ್ಲಿ ನೀಡಿದ ಸರ್ಟಿಫಿಕೇಟ್ ನಲ್ಲಿ 8-12-2018 ದಿನಾಂಕ ನಮೂದಾಗಿದೆ. ಆದರೆ ಗ್ರಾಮ ಲೆಕ್ಕಿಗ ಪ್ರಶಾಂತ್ ರವರು ತಲಕಾಡು ನಾಡಕಚೇರಿಯಲ್ಲಿ 7-12-2018 ರಂದೇ ಮೃತಪಟ್ಟಿರುವುದಾಗಿ ಡೆತ್ ಸರ್ಟಿಫಿಕೇಟ್ ನೀಡಿ ಎಡವಟ್ಟಿಗೆ ಕಾರಣರಾಗಿದ್ದಾರೆ.