ಬೀದರ್: ಬಸವಕಲ್ಯಾಣದ ತ್ರಿಪುರಾಂತ ಮುಖ್ಯರಸ್ತೆಯಲ್ಲಿ ಕ್ಷುಲ್ಲಕ ಕಾರಣಕ್ಕೆ ಯುವಕರ ನಡುವೆ ನಡೆದ ಜಗಳ ಓರ್ವನ ಕೊಲೆಯಲ್ಲಿ ಅಂತ್ಯವಾಗಿದೆ.
ತ್ರಿಪುರಾಂತ ನಿವಾಸಿ ಆನಂದ ಫುಲೆ (26) ಮೃತ ಯುವಕ.
ತ್ರಿಪುರಾಂತ ಮುಖ್ಯ ರಸ್ತೆಯಲ್ಲಿ ಆನಂದ ಮತ್ತು ದಿಗಂಬರ ದಾಸೂರೆ ಸೇರಿ ಕೆಲ ಯುವಕರ ನಡುವೆ ಜಗಳ ನಡೆದಿದ್ದು, ಈ ವೇಳೆ ಆನಂದ ಮೇಲೆ ಎದುರಾಳಿ ಗುಂಪಿನ ವ್ಯಕ್ತಿಯೊಬ್ಬ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿದ್ದಾನೆ. ಹಲ್ಲೆಯಿಂದ ಗಂಭೀರವಾಗಿ ಗಾಯಗೊಂಡಿದ್ದ ಆನಂದ ಫುಲೆಗೆ ನಗರದ ಸರ್ಕಾರಿ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಕೊಡಿಸಿ ಹೆಚ್ಚಿನ ಚಿಕಿತ್ಸೆಗಾಗಿ ಉಮ್ಮರಗಾ ಆಸ್ಪತ್ರೆಗೆ ಸಾಗಿಸಲಾಗಿತ್ತು. ಆದರೆ ಮಾರ್ಗ ಮಧ್ಯೆಯೇ ಅವರು ಕೊನೆಯುಸಿರೆಳೆದಿದ್ದಾರೆ.
ಪ್ರಕರಣದಲ್ಲಿ ಗಾಯಗೊಂಡ ದಿಗಂಬರ ಎಂಬವರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಸುದ್ದಿ ತಿಳಿದ ಹುಮನಾಬಾದ ಎಎಸ್’ಪಿ ಶಿವಾಂಶು ರಾಜಪುತ್, ಸಿಪಿಐ ಸುಶೀಲಕುಮಾರ ಸೇರಿದಂತೆ ಪೊಲೀಸ್ ಅಧಿಕಾರಿಗಳ ತಂಡ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದು, ಹಲ್ಲೆ ನಡೆಸಿದ ಆರೋಪಿಗಳ ಬಂಧನಕ್ಕಾಗಿ ಬಲೆ ಬೀಸಿದ್ದಾರೆ.
ಘಟನೆಗೆ ನಿಖರ ಕಾರಣ ತಿಳಿದುಬಂದಿಲ್ಲ. ಪೊಲೀಸರು ತನಿಖೆ ಮುಂದುವರೆಸಿದ್ದಾರೆ.
ಮತದಾರನಿಗೆ YSR ಕಾಂಗ್ರೆಸ್ ಶಾಸಕನಿಂದ ಕಪಾಳ ಮೋಕ್ಷ…
ಮೋದಿ ಇಂದು ಪಟ್ನಾ ಸಾಹಿಬ್ ಗುರುದ್ವಾರಕ್ಕೆ ಭೇಟಿ ನೀಡಿದ್ರು
ರಾಜಕೀಯ ಕೊನೆಗಾಲದಲ್ಲಿ ನನ್ನ ಕೈ ಹಿಡಿದವರು ದೇವೇಗೌಡರು ಜೆಡಿಎಸ್ ಶಾಸಕ ಎ.ಮಂಜು ಹೇಳಿಕೆ.
HSRP ನಂಬರ್ ಪ್ಲೇಟ್ ಅಳವಡಿಸಿಲ್ವಾ ? ಹಾಗಿದ್ರೆ ದಂಡ ಬೀಳೋದು ಖಚಿತ…!
ಹ್ಯಾಪಿ ಮದರ್ಸ್ ಡೇ…….
ಹ್ಯಾಪಿ ಮದರ್ಸ್ ಡೇ…..
ಅಕ್ಷಯ ತೃತೀಯದಂದು ಚಿನ್ನ ಬೆಳ್ಳಿ ಮಾರಾಟದಲ್ಲಿ ಹೊಸ ದಾಖಲೆ..!
ಹೆಚ್ಚು ಹೊತ್ತು ಮೆಟ್ರೋದಲ್ಲಿ ಇದ್ದ ಕಾರಣ ದಂಡ ವಿಧಿಸಲಾಗಿದೆ…
ಲೆಮನ್ ಜ್ಯೂಸ್ ಆರೋಗ್ಯಕ್ಕೆ ಉತ್ತಮ..!
Important: No API Key Entered.
Many features are not available without adding an API Key. Please go to the YouTube Feed settings page to add an API key after following these instructions.