ಮನೆ ಆರೋಗ್ಯ ಟೊಮೇಟೊ ಮತ್ತು ಸೌತೆಕಾಯಿ ಒಟ್ಟಿಗೆ ತಿನ್ನಬಾರದಂತೆ!

ಟೊಮೇಟೊ ಮತ್ತು ಸೌತೆಕಾಯಿ ಒಟ್ಟಿಗೆ ತಿನ್ನಬಾರದಂತೆ!

0

ಆರೋಗ್ಯದ ದೃಷ್ಟಿಯಲ್ಲಿ ನೋಡಿದರೆ ಟೊಮೇಟೊ ಮತ್ತು ಸೌತೆಕಾಯಿ ದೇಹಕ್ಕೆ ಅದ್ಭುತ ಪ್ರಯೋಜನ ಗಳನ್ನು ಕೊಡುತ್ತವೆ. ಇವೆರಡು ಸಹ ತಮ್ಮದೇ ಆದ ಆಯಾಮದಲ್ಲಿ ಪೌಷ್ಟಿಕ ಸತ್ವಗಳನ್ನು, ಆರೋಗ್ಯದ ಮೇಲೆ ಉತ್ತಮ ಪ್ರಭಾವಗಳನ್ನು ಹೊಂದಿರುತ್ತವೆ.

ಟೊಮೇಟೊ ಮತ್ತು ಸೌತೆಕಾಯಿ ಬೇರೆ ಬೇರೆ ತಿಂದರೆ ಇವುಗಳ ಸಂಪೂರ್ಣ ಆರೋಗ್ಯ ಪ್ರಯೋಜನ ಗಳನ್ನು ನಾವು ಪಡೆದುಕೊಳ್ಳಬಹುದು.

ತಜ್ಞರು ಏನು ಹೇಳುತ್ತಾರೆ?

• ಪೌಷ್ಟಿಕ ತಜ್ಞರಾದ ತಾನ್ಯಾ ಎಸ್ ಕಪೂರ್ ಹೇಳುವ ಪ್ರಕಾರ ಸೌತೆಕಾಯಿಗಳು ತಮ್ಮಲ್ಲಿ ಹೆಚ್ಚಿನ ಪ್ರಮಾಣ ದಲ್ಲಿ ನೀರಿನ ಅಂಶ ಮತ್ತು ಪೌಷ್ಟಿಕ ಸತ್ವಗಳನ್ನು ಒಳಗೊಂಡಿರುತ್ತದೆ.

• ಆದರೆ ನಮ್ಮ ದೇಹಕ್ಕೆ ರೋಗ ನಿರೋಧಕ ಶಕ್ತಿಯನ್ನು ಒದಗಿಸುವ ವಿಟಮಿನ್ ಸಿ ಅಂಶ ಹೀರಿಕೊಳ್ಳಲು ಇದು ಬಿಡುವುದಿಲ್ಲ ಎನ್ನುವ ಮಾತಿದೆ.

• ಹಾಗಾಗಿ ವಿಟಮಿನ್ ಸಿ ಪ್ರಮಾಣದಲ್ಲಿ ಹೆಚ್ಚಾಗಿರುವ ಟೊಮೇಟೊ ಹಣ್ಣು ಮತ್ತು ಸೌತೆಕಾಯಿಗಳನ್ನು ಒಟ್ಟಿಗೆ ಸೇವನೆ ಮಾಡಬಾರದು ಎಂದು ಹೇಳುತ್ತಾರೆ.

ಗ್ಯಾಸ್ಟ್ರಿಕ್ ಮತ್ತು ಹೊಟ್ಟೆ ಉಬ್ಬರ ಉಂಟಾಗುತ್ತದೆ!

• ಏಕೆಂದರೆ ಇವುಗಳ ಜೀರ್ಣ ಪ್ರಕ್ರಿಯೆ ಬೇರೆಯೇ ಆಗಿರು ತ್ತದೆ. ಹಾಗಾಗಿ ಇವುಗಳನ್ನು ಒಟ್ಟಿಗೆ ಸೇವನೆ ಮಾಡಿದರೆ ಹೊಟ್ಟೆಯಲ್ಲಿ ಗ್ಯಾಸ್ಟ್ರಿಕ್ ಮತ್ತು ಹೊಟ್ಟೆ ಉಬ್ಬರ ಉಂಟಾ ಗುತ್ತದೆ ಎಂದು ಹೇಳಬಹುದು.

• ಇದರ ಜೊತೆಗೆ ವಾಕರಿಕೆ, ವಾಂತಿಸಹ ಆಗಬಹುದು. ದಿನ ಕಳೆ ದಂತೆ ದೇಹದ ಮೆಟಬಾಲಿಸಂ ಸಹ ಕಡಿಮೆಯಾ ಗುತ್ತಾ ಹೋಗುತ್ತದೆ.

ಹಾಗಾದ್ರೆ ಟೊಮೇಟೊ ಜೊತೆ ಸೌತೆಕಾಯಿ ಬೇಡ್ವಾ?

• ನಾವು ಮನೆಯಲ್ಲಿ ಯಾವುದಾದರು ಸಲಾಡ್, ಸೂಪ್, ಸಬ್ಜಿ, ಪಲ್ಯ ಇತ್ಯಾದಿಗಳನ್ನು ಮಾಡುವಾಗ ಎಲ್ಲಾ ಬಗೆಯ ತರಕಾರಿಗಳನ್ನು ಬಳಸುತ್ತೇವೆ.

• ಇವುಗಳು ನಮ್ಮ ದೇಹದಲ್ಲಿ ಜೀರ್ಣವಾಗುವ ಸಮಯ ಬೇರೆ ಬೇರೆ ಇರುತ್ತದೆ. ಕೆಲವೊಂದು ತರಕಾರಿಗಳು ಬೇಗನೆ ಜೀರ್ಣವಾದರೆ ಇನ್ನು ಕೆಲವು ಸ್ವಲ್ಪ ಸಮಯ ತೆಗೆದು ಕೊಳ್ಳುತ್ತವೆ.

ಟೊಮೇಟೊ ಮತ್ತು ಸೌತೆಕಾಯಿ ವಿಚಾರದಲ್ಲಿ

• ಅದೇ ರೀತಿ ಟೊಮೇಟೊ ಮತ್ತು ಸೌತೆಕಾಯಿ ವಿಚಾರದಲ್ಲಿ ಫರ್ಮೆಂಟೇಶನ್ ಪ್ರಕ್ರಿಯೆ ಸಮಯ ಎರಡಕ್ಕೂ ಬೇರೆ ಬೇರೆ ಇರುತ್ತದೆ.

• ಸೌತೆಕಾಯಿ ಒಂದು ಹಗುರವಾದ ಆಹಾರವಾಗಿದ್ದು, ಹೊಟ್ಟೆಯಲ್ಲಿ ಬಹಳ ಬೇಗನೆ ಜೀರ್ಣವಾಗುತ್ತದೆ. ಆದರೆ ಟೊಮೆಟೊ ಹಾಗಲ್ಲ. ಟೊಮೆಟೊ ಬೀಜಗಳು ದೇಹದಲ್ಲಿ ಅಷ್ಟು ಸುಲಭವಾಗಿ ಜೀರ್ಣವಾಗುವುದಿಲ್ಲ ಎನ್ನುವ ಮಾತಿದೆ.

ಇವೆರಡು ಜೀರ್ಣಾಂಗ ವ್ಯವಸ್ಥೆಗೆ ಹೇಗೆ?

• ಫರ್ಮೆಂಟೇಶನ್ ಪ್ರಕ್ರಿಯೆಯಲ್ಲಿ ಮುಖ್ಯವಾಗಿ ಆಹಾರಗಳಿಂದ ನೀರಿನ ಅಂಶ ಮತ್ತು ಗ್ಯಾಸ್ ಬಿಡುಗಡೆ ಯಾಗುತ್ತದೆ.

• ಇದು ಕೆಲವೊಮ್ಮೆ ಜೀರ್ಣಾಂಗ ವ್ಯವಸ್ಥೆ ಚುರುಕಾಗಿ ಕಾರ್ಯ ನಿರ್ವಹಿಸುವಂತೆ ಮಾಡಬಹುದು ಅಥವಾ ತುಂಬಾ ತಡವಾಗಿ ಕಾರ್ಯನಿರ್ವಹಣೆ ಮಾಡುವಂತೆ ಮಾಡಬಹುದು.

• ಯಾವಾಗ ಜೀರ್ಣ ಪ್ರಕ್ರಿಯೆ ತಡವಾಗುತ್ತದೆ ಆಗ ಹೊಟ್ಟೆ ಯಲ್ಲಿ ಗ್ಯಾಸ್, ಹೊಟ್ಟೆ ಉಬ್ಬರ ಉಂಟಾಗುತ್ತದೆ. ಇದು ಆರೋಗ್ಯದ ಸಮಸ್ಯೆಗಳನ್ನು ಮತ್ತಷ್ಟು ಹೆಚ್ಚಿಸಬಹುದು. ಹಾಗಾಗಿ ಟೊಮೆಟೊ ಮತ್ತು ಸೌತೆಕಾಯಿ ಎರಡನ್ನು ಸಹ ಬೇರೆ ಬೇರೆ ಸೇವಿಸುವುದು ಒಳ್ಳೆಯದು.