ಮನೆ ರಾಜ್ಯ ಬೆಂಗಳೂರು, ದಾವಣಗೆರೆಯಲ್ಲಿ ಕಾಂಗ್ರೆಸ್ ನಿಂದ  ‘ಮಾಡಾಳ್ ಮಿಸ್ಸಿಂಗ್ ಪೋಸ್ಟರ್’ ಅಭಿಯಾನ

ಬೆಂಗಳೂರು, ದಾವಣಗೆರೆಯಲ್ಲಿ ಕಾಂಗ್ರೆಸ್ ನಿಂದ  ‘ಮಾಡಾಳ್ ಮಿಸ್ಸಿಂಗ್ ಪೋಸ್ಟರ್’ ಅಭಿಯಾನ

0

ಬೆಂಗಳೂರು:  ಬಿಜೆಪಿ ಶಾಸಕ ಮಾಡಾಳ್ ವಿರೂಪಾಕ್ಷಪ್ಪ  ಪುತ್ರ ಮಾಡಾಳ್ ಪ್ರಶಾಂತ್ ಮನೆಯಲ್ಲಿ 8 ಕೋಟಿ ರೂ. ಹಣ ಪತ್ತೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ನಿಂದ ‘ಮಾಡಾಳ್ ಮಿಸ್ಸಿಂಗ್ ಪೋಸ್ಟರ್’ ಅಭಿಯಾನ ನಡೆಯುತ್ತಿದೆ.

ಬೆಂಗಳೂರಿನ ಹಲವೆಡೆ ಪೋಸ್ಟರ್‌ಗಳು ರಾರಾಜಿಸುತ್ತಿದ್ದು, ಮೈಸೂರು ಸ್ಯಾಂಡಲ್ ಸೋಪ್ ಹಗರಣದ ಪ್ರಮುಖ ಆರೋಪಿ ಮಾಡಾಳ್ ವಿರೂಪಾಕ್ಷಪ್ಪ ನಾಪತ್ತೆಯಾಗಿದ್ದಾರೆ. ಅವರು ಎಲ್ಲಿಯಾದರೂ ಕಂಡಲ್ಲಿ ಪೊಲೀಸ್ ಕಂಟ್ರೋಲ್ ರೂಮಿಗೆ ಕರೆ ಮಾಡುವ ಮೂಲಕ‌ ಲೋಕಾಯುಕ್ತ ತನಿಖೆಗೆ ಸಹಕರಿಸಿ ಎಂದು ಪೋಸ್ಟರ್‌ ಅಂಟಿಸಲಾಗಿದೆ.

ಪ್ರಕರಣದ ಎ1 ಆರೋಪಿ  ಬಿಜೆಪಿ ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಕಳೆದ 6 ದಿನಗಳಿಂದ ನಾಪತ್ತೆಯಾಗಿದ್ದು, ಇವರ ಹುಡುಕಾಟಕ್ಕೆ ಲೋಕಾಯುಕ್ತ ಮೂರು ವಿಶೇಷ ತಂಡಗಳನ್ನು ರಚಿಸಿದೆ. ಈ ಮಧ್ಯೆ ಬೆಂಗಳೂರು ಮತ್ತು  ದಾವಣಗೆರೆಯಲ್ಲಿ ಕಾಂಗ್ರೆಸ್ ಯೂತ್ ಕಾಂಗ್ರೆಸ್ ಪೋಸ್ಟರ್​​​ ಅಭಿಯಾನ‌ ನಡೆಸುತ್ತಿದೆ.

ಲೋಕಾಯುಕ್ತ ಪ್ರಕರಣದಲ್ಲಿ A1 ಆರೋಪಿಯಾಗಿರುವ ಶಾಸಕ‌ ಮಾಡಾಳ್ ವಿರೂಪಾಕ್ಷಪ್ಪ 6ನೇ ದಿನವಾದರೂ ಪತ್ತೆ ಇಲ್ಲ. ಅವರನ್ನು ಹುಡುಕಿಕೊಡಿ ಎಂದು ದಾವಣಗೆರೆಯಲ್ಲಿ ಯೂತ್ ಕಾಂಗ್ರೆಸ್ ಅಧ್ಯಕ್ಷ ನಿಖಿಲ್ ಕೊಂಡಜ್ಜಿ ನೇತೃತ್ವದಲ್ಲಿ ಅಭಿಯಾನ ನಡೆಸಲಾಯಿತು. ನಗರದ ಪ್ರಮುಖ ಬೀದಿಗಳಲ್ಲಿ ಮಿಸ್ಸಿಂಗ್ ಪೋಸ್ಟರ್ ಅಂಟಿಸಿ ಯೂತ್ ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು. ಕಾಣೆಯಾದವರ ಪಟ್ಟಿ ಮಾದರಿಯಲ್ಲಿ ಪೋಸ್ಟರ್ ಅಂಟಿಸಿದ ಕಾಂಗ್ರೆಸ್, ಕೊನೆ ಬಾರಿ ಕಾಣಿಸಿಕೊಂಡಿದ್ದು ಸಿಎಂ ಕಚೇರಿಯಲ್ಲಿ. ಪತ್ತೆಯಾದರೆ ಪೊಲೀಸ್​ ಹೆಲ್ಪ್​’ಲೈನ್’​ಗೆ ಕರೆ ಮಾಡುವಂತೆ ಪೋಸ್ಟರ್ ​ನಲ್ಲಿ ಬರೆಯಲಾಗಿದೆ.