ಮನೆ ರಾಜ್ಯ ವರ್ಲ್ಡ್ ಪ್ರೀಮಿಯರ್ 10 ಕೆ ರನ್ ಗೆ ಚಾಲನೆ ನೀಡಿದ ಸಿಎಂ ಬೊಮ್ಮಾಯಿ

ವರ್ಲ್ಡ್ ಪ್ರೀಮಿಯರ್ 10 ಕೆ ರನ್ ಗೆ ಚಾಲನೆ ನೀಡಿದ ಸಿಎಂ ಬೊಮ್ಮಾಯಿ

0

ಬೆಂಗಳೂರು (Bengaluru)-ಟಿ. ಸಿ.ಎಸ್‌ ಸಂಸ್ಥೆ ಆಯೋಜಿಸಿದ್ದ ವರ್ಲ್ಡ್ ಪ್ರೀಮಿಯರ್ 10 ಕೆ ರನ್ – ಗೆ ಕಂಠೀರವ ಸ್ಟುಡಿಯೋದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಚಾಲನೆ ನೀಡಿದರು.

ಈ ವೇಳೆ ಮಾತನಾಡಿದ ಅವರು, ಎಲ್ಲರ ಜೀವನದಲ್ಲಿ ಈ ಓಟ ಹೊಸ ಚೈತನ್ಯವನ್ನು ತರಲಿದೆ. 10 ಕೆ ರನ್ ನಲ್ಲಿ 17 ಸಾವಿರಕ್ಕಿಂತ ಹೆಚ್ಚು ಜನ ಭಾಗವಹಿಸಿ ಹಿರಿಯರು, ವಿಕಲಚೇತನರು ತಮ್ಮ ಆರೋಗ್ಯ,  ದೇಶಕ್ಕಾಗಿ ಹಾಗೂ ಜೀವನದ ಉತ್ಸಾಹಕ್ಕಾಗಿ ಓಡುತ್ತಿದ್ದಾರೆ. ಕಾರ್ಯಕ್ರಮ ಆಯೋಜಿಸಿ ಟಿ.ಸಿ.ಎಸ್ ಉತ್ತಮ ಕೆಲಸ ಮಾಡಿದೆ ಎಂದರು.

ಅನೇಕ ಸರ್ಕಾರೇತರ ಸಂಸ್ಥೆಗಳು ಈ ವೇದಿಕೆಯ ಮೂಲಕ ತಮ್ಮ ಸಾಮಾಜಿಕ ಕೆಲಸಕ್ಕೆ ದೇಣಿಗೆಯನ್ನು ಸಂಗ್ರಹಕ್ಕೆ ಅವಕಾಶ ಕಲ್ಪಿಸಿಕೊಟ್ಟು ಸಾಮಾಜಿಕ ಹೊಣೆಗಾರಿಕೆಯನ್ನು ಟಿ.ಸಿ.ಎಸ್ ಸಂಸ್ಥೆ ತೋರಿದೆ ಎಂದರು.

ಹಿಂದಿನ ಲೇಖನಉಚಿತ ಆರೋಗ್ಯ ತಪಾಸಣಾ ಶಿಬಿರಕ್ಕೆ ಸಚಿವ ಕೆ.ಗೋಪಾಲಯ್ಯ ಚಾಲನೆ
ಮುಂದಿನ ಲೇಖನನ್ಯೂಯಾರ್ಕ್ ನ ಸೂಪರ್‌ ಮಾರ್ಕೆಟ್ ನಲ್ಲಿ ಗುಂಡಿನ ದಾಳಿ: 10 ಮಂದಿ ಸಾವು