ಮುಂಬೈ: ಮಾರ್ಚ್ 8 ರಂದು ವನಿತಾ ಪ್ರೀಮಿಯರ್ ಲೀಗ್ ನ ಆರ್’ಸಿಬಿ ಮತ್ತು ಗುಜರಾತ್ ಜೈಂಟ್ಸ್ ತಂಡಗಳ ನಡುವೆ ನಡೆಯಲಿರುವ ಹಣಾಹಣಿಗೆ ಎಲ್ಲಾ ಪ್ರೇಕ್ಷಕರಿಗೂ ಉಚಿತ ಪ್ರವೇಶ ಸಿಗಲಿದೆ.
ಸೋಮವಾರ ನಡೆದ ಮುಂಬೈ ಇಂಡಿಯನ್ಸ್ ಮತ್ತು ಆರ್ಸಿಬಿ ಪಂದ್ಯದ ನಡುವಿನಲ್ಲಿ, ಮಾರ್ಚ್ 8 ರಂದು ಮಹಿಳೆಯರ ದಿನದ ಹಿನ್ನಲೆಯಲ್ಲಿ ಬ್ರಬೌರ್ನ್ ಸ್ಟೇಡಿಯಂನಲ್ಲಿ ನಡೆಯಲಿರುವ ಆರ್’ಸಿಬಿ ಮತ್ತು ಗುಜರಾತ್ ಜೈಂಟ್ಸ್ ನಡುವಿನ ವನಿತಾ ಪ್ರೀಮಿಯರ್ ಲೀಗ್’ನ ಪಂದ್ಯಕ್ಕೆ ಎಲ್ಲಾ ಪ್ರೇಕ್ಷಕರಿಗೂ ಉಚಿತ ಪ್ರವೇಶ ನೀಡುವುದು ಎಂದು ಬಿಗ್ ಸ್ರೀನ್ ನಲ್ಲಿ ನೀಡಲಾಗಿದ್ದ ಬರಹವೊಂದು ವೈರಲ್ ಆಗಿತ್ತು. ಇದೀಗ ಡಬ್ಲೂಪಿಎಲ್ ನ ಅಧಿಕೃತ ಟ್ವಿಟರ್, ಇನ್ಸ್ಟಾಗ್ರಾಮ್ ಖಾತೆಯೂ ಕೂಡ ಈ ಮಾಹಿತಿಯನ್ನು ಹಂಚಿಕೊಂಡಿದೆ.
ಕೆಲ ದಿನಗಳ ಹಿಂದೆ, ಬಿಸಿಸಿಐ ಹಂಚಿಕೊಂಡ ಮಾಹಿತಿ ಪ್ರಕಾರ ಭಾರತದ ವನಿತೆಯರಲ್ಲಿ, ಮಹಿಳೆಯರಲ್ಲಿ ವನಿತಾ ಕ್ರಿಕೆಟ್ ಬಗ್ಗೆ ಆಸಕ್ತಿ ಹೆಚ್ಚಿಸುವ ಸಲುವಾಗಿ ಡಬ್ಲೂಪಿಎಲ್ ನ ಎಲ್ಲಾ ಪಂದ್ಯಗಳಿಗೂ ಸ್ತ್ರೀಯರಿಗೆ ಉಚಿತ ಪ್ರವೇಶ ಇರುವುದಾಗಿ ಹೇಳಿಕೊಂಡಿತ್ತು.