ಮನೆ ಕಾನೂನು ಹೈಕೋರ್ಟ್ ನಿಂದ ಇಂದು ‘ಹಿಜಾಬ್ ತೀರ್ಪು’, ಸೂಕ್ತ ಬಂದೋಬಸ್ತ್: ಆರಗ ಜ್ಞಾನೇಂದ್ರ

ಹೈಕೋರ್ಟ್ ನಿಂದ ಇಂದು ‘ಹಿಜಾಬ್ ತೀರ್ಪು’, ಸೂಕ್ತ ಬಂದೋಬಸ್ತ್: ಆರಗ ಜ್ಞಾನೇಂದ್ರ

0

ಬೆಂಗಳೂರುಇಂದು ಹೈಕೋರ್ಟ್ ನಿಂದ ಹಿಜಾಬ್ ವಿವಾದ ಬಗ್ಗೆ ಏನೇ ತೀರ್ಪು ಬಂದರೂ ನಾವು ಕೋರ್ಟ್ ತೀರ್ಪಿಗೆ, ಸಂವಿಧಾನಕ್ಕೆ ತಲೆಬಾಗಲೇ ಬೇಕು. ತೀರ್ಪು ಬಳಿಕ ವಿವಾದಗಳಾಗುವುದಿಲ್ಲ ಎಂಬ ನಂಬಿಕೆಯಿದೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿದ್ದಾರೆ.

ಬೆಂಗಳೂರಿನಲ್ಲಿಂದು ಸುದ್ದಿಗಾರರ ಜೊತೆ ಮಾತನಾಡಿದ ಅವರು, ಸೂಕ್ಷ್ಮ, ಅತಿಸೂಕ್ಷ್ಮ ಜಿಲ್ಲೆಗಳು ಸೇರಿದಂತೆ ರಾಜ್ಯಾದ್ಯಂತ ಇಂದು ಬಂದೋಬಸ್ತ್ ಗಳನ್ನು, ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿದ್ದೇವೆ. ಎಲ್ಲಾ ಪೊಲೀಸ್ ಅಧಿಕಾರಿಗಳು ಸ್ಥಳದಲ್ಲಿರಬೇಕೆಂದು ಸೂಚನೆ ನೀಡಲಾಗಿದೆ, ಕೆಎಸ್ಆರ್ ಪಿ ತುಕಡಿಗಳನ್ನು ನಿಯೋಜಿಸಲಾಗಿದೆ ಎಂದರು.

ಸೂಕ್ಷ್ಮ ಪ್ರದೇಶಗಳಲ್ಲಿ ಸೆಕ್ಷನ್ ಗಳನ್ನು ಜಾರಿಗೆ ತರಬೇಕೆಂದು ಎಸ್ಪಿ, ಕಮಿಷನರ್ ಗಳಿಗೆ ಸೂಚಿಸಿದ್ದೇನೆ, ಏನೂ ತೊಂದರೆಯಾಗುವುದಿಲ್ಲ. ಶಾಂತಿ-ಸುವ್ಯವಸ್ಥೆಗೆ ಅಗತ್ಯವಿರುವ ಕಡೆಗಳಲ್ಲಿ ಬಂದೋಬಸ್ತ್ ಗಳನ್ನು ಮಾಡಿದ್ದೇವೆ. ಜಿಲ್ಲಾಧಿಕಾರಿಗಳಿಗೂ ಸ್ಪಷ್ಟ ಸೂಚನೆ ನೀಡಲಾಗಿದೆ ಎಂದರು.

ಇಂದು ಹೈಕೋರ್ಟ್ ನಿಂದ ಹಿಜಾಬ್ ತೀರ್ಪು ಹೊರಬರುವ ಹಿನ್ನೆಲೆಯಲ್ಲಿ ಹೈಕೋರ್ಟ್ ನ ಮುಖ್ಯ ನ್ಯಾಯಮೂರ್ತಿ ರಿತು ರಾಜ್ ಅವಸ್ತಿಯವರ ನಿವಾಸದ ಮುಂದೆ ತೀವ್ರ ಭದ್ರತೆ ಒದಗಿಸಲಾಗಿದೆ.