ಮನೆ ರಾಜ್ಯ ಪೊಲೀಸರ ಕ್ರಮ ಖಂಡಿಸಿ, ಕಲಾಪದಿಂದ ಹೊರಗುಳಿದ ವಕೀಲರು

ಪೊಲೀಸರ ಕ್ರಮ ಖಂಡಿಸಿ, ಕಲಾಪದಿಂದ ಹೊರಗುಳಿದ ವಕೀಲರು

0

ಶ್ರೀರಂಗಪಟ್ಟಣ: ರಾಮನಗರದಲ್ಲಿ ೪೦ ಕ್ಕೂ ಹೆಚ್ಚು ವಕೀಲರ ವಿರುದ್ದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿರುವ ಕ್ರಮವನ್ನು ಖಂಡಿಸಿ ಶ್ರೀರಂಗಪಟ್ಟಣ ವಕೀಲರು ನ್ಯಾಯಾಲಯ ಕಲಾಪದಿಂದ ಹೊರಗುಳಿದು ಆಕ್ರೋಶ ವ್ಯಕ್ತಪಡಿಸಿದರು.


ಶ್ರೀರಂಗಪಟ್ಟಣ ವಕೀಲರ ಸಂಘದ ಅಧ್ಯಕ್ಷ ಸತ್ಯನಾರಾಯಣ ಅವರ ನೇತೃತ್ವದಲ್ಲಿ ಕಚೇರಿಯಲ್ಲಿ ಸಂಘದ ಸದಸ್ಯರೆಲ್ಲರೂ ಸಭೆ ನಡೆಸಿ ಚರ್ಚೆ ಮಾಡಿದ ಬಳಿಕ ಕಲಾಪದಿಂದ ಹೊರ ಉಳಿಯುವ ನಿರ್ಣಯ ಕೈಗೊಂಡರು.
ರಾಮನಗರ ವಕೀಲರ ಸಂಘದ ಸಭೆ ನಡೆಯುತ್ತಿದ್ದ ವೇಳೆ ಎಸ್‌ಡಿಪಿಐ ಕಾರ್ಯಕರ್ತರು ವಕೀಲರ ಸಂಘದ ಕಚೇರಿಗೆ ನುಗ್ಗಿರುವ ಬಗ್ಗೆ ವಕೀಲರ ಸಂಘದ ಸದಸ್ಯರು ದೂರು ನೀಡಲು ಹೋದವರ ೪೦ಕ್ಕೂ ಹೆಚ್ಚು ವಕೀಲರ ವಿರುದ್ದ ಪ್ರಕರಣ ದಾಖಲಿಸಿ ಒಂದು ಸಮಾಜದ ಪರ ನಿಲ್ಲುವ ಪೊಲೀಸ್ ಇನ್ಪೆಕ್ಟರ್ ವಿರುದ್ದ ಕ್ರಮ ಕೈಗೊಳ್ಳಬೇಕು ಎಂದು ಸಂಘದ ಅಧ್ಯಕ್ಷ ಸತ್ಯನಾರಾಯಣ ಒತ್ತಾಯ ಮಾಡಿದರು.
ಸಂಘದ ಪ್ರಧಾನ ಕಾರ್ಯದರ್ಶಿ ಪವನ್‌ಗೌಡ, ಉಪಾಧ್ಯಕ್ಷ ಮಂಜುನಾಥ್, ಸಹ ಕಾರ್ಯದರ್ಶಿ ಕೃಷ್ಣೇಗೌಡ,ಸಹಕಾರ ಸಂಘದ ಅಧ್ಯಕ್ಷ ಸಿ.ಕೆ.ಸೋಮು,ಹಿರಿಯ ವಕೀಲರಾದ ನಿಂಗೇಗೌಡ, ಸಿ. ಪುಟ್ಟಸ್ವಾಮಿ,ಸಿದ್ದೇಶ್, ನಾರಾಯಣಸ್ವಾಮಿ, ಸಿದ್ದರಾಜು, ಶಿವರಾಜು,ಜಯಸ್ವಾಮಿ ಸೇರಿದಂತೆ ಇತರ ಸದಸ್ಯರು ಉಪಸ್ಥಿತರಿದ್ದರು.

ಹಿಂದಿನ ಲೇಖನ34 ಮಂದಿಗೆ ಉದ್ಯೋಗ ಕಲ್ಪಿಸಲು ಗೈಲ್ ಜತೆ ಮಾತುಕತೆ: ಎಂ ಬಿ ಪಾಟೀಲ
ಮುಂದಿನ ಲೇಖನನೀರಿನ ಮಿತ ಬಳಕೆ, ನೀರಿನ ಸದ್ಬಳಕೆ ಮಾಡಬೇಕು: ಡಾ. ಧನಂಜಯ ಬಿ.ಎನ್