ಮನೆ ಮನರಂಜನೆ ಆಸ್ಕರ್ ಪಡೆದ ‘ನಾಟು ನಾಟು’ ಹಾಡು: ಪ್ರಧಾನಿ ಅಭಿನಂದನೆ

ಆಸ್ಕರ್ ಪಡೆದ ‘ನಾಟು ನಾಟು’ ಹಾಡು: ಪ್ರಧಾನಿ ಅಭಿನಂದನೆ

0

ಬೆಂಗಳೂರು: ಆರ್‌ಆರ್‌ಆರ್‌ ಸಿನಿಮಾದ ‘ನಾಟು ನಾಟು‘ ಹಾಡು ಆಸ್ಕರ್‌ ಪ್ರಶಸ್ತಿ ಗೆದ್ದ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಚಿತ್ರ ತಂಡಕ್ಕೆ ಅಭಿನಂದನೆ ಸಲ್ಲಿಸಿದ್ದಾರೆ.

ಈ ಬಗ್ಗೆ ಟ್ವೀಟ್‌ ಮಾಡಿರುವ ಪ್ರಧಾನಿ ಮೋದಿ ಅವರು, ಅಸಾಧಾರಣ…. ಇದು ಮುಂದಿನ ವರ್ಷಗಳಲ್ಲಿ ನೆನಪಿನಲ್ಲಿ ಉಳಿಯುವ ಹಾಡು. ಈ ಪ್ರತಿಷ್ಠಿತ ಗೌರವ ಪಡೆದ ಕೀರವಾಣಿ, ಚಂದ್ರಬೋಸ್‌ ಹಾಗೂ ಇಡೀ ತಂಡಕ್ಕೆ ಅಭಿನಂದನೆಗಳು. ಇಡೀ ಭಾರತ ಹೆಮ್ಮೆ ಪಟ್ಟುಕೊಳ್ಳುತ್ತದೆ ಎಂದು ಅವರು ಬರೆದುಕೊಂಡಿದ್ದಾರೆ.

ಅತ್ಯುತ್ತಮ ಮೂಲ ಹಾಡು ವಿಭಾಗದಲ್ಲಿ ನಾಟು ನಾಟು ಪ್ರಶಸ್ತಿ ಬಾಚಿಕೊಂಡಿದೆ. ಇದು ಈ ಚಿತ್ರಕ್ಕೆ ಲಭಿಸಿದ ಮೂರನೇ ಅಂತಾರಾಷ್ಟ್ರೀಯ ಗೌರವವಾಗಿದೆ. ಈ ಹಿಂದೆ ‌ಗೋಲ್ಡನ್‌ ಗ್ಲೋಬ್‌ ಹಾಗೂ ಕ್ರಿಟಿಕ್‌ ಚಾಯ್ಸ್‌ ಅವಾರ್ಡ್‌’ಗೆ ಈ ಹಾಡು ಪಾತ್ರವಾಗಿತ್ತು.

ಚಂದ್ರಬೋಸ್‌ ಬರೆದಿರುವ ಈ ಹಾಡಿಗೆ ಎಂ.ಎಂ ಕೀರವಾಣಿಯವರು ಸಂಗೀತ ಸಂಯೋಜನೆ ಮಾಡಿದ್ದಾರೆ.