ಮಲೆನಾಡು ಸ್ಟೈಲ್ನಲ್ಲಿ ಬೆಳ್ಳುಳ್ಳಿ ಚಟ್ನಿ ಮಾಡಿ, ಇದಕ್ಕೆ ಬೇಕಾಗುವ ಸಾಮಾಗ್ರಿಗಳು, ಸಾಸಿವೆ, ತುಪ್ಪ, ಬೆಣ್ಣೆ, ಉದ್ದಿನ ಬೇಳೆ, ಬೆಳ್ಳುಳ್ಳಿ, ಇಂಗು.
ಇದರ ಮಸಾಲ ಪೇಸ್ಟ್ ಮಾಡಲು, ತೆಂಗಿನ ತುರಿ, ಸಾಸಿವೆ, ಟೊಮೆಟೊ, ಒಣಗಿದ ಕೆಂಪು ಮೆಣಸಿನ ಕಾಯಿ ಬೇಕಾಗುತ್ತದೆ. ಹಾಗೆಯೇ ಹುಣಸೆ ಹಣ್ಣಿನ ರಸ, ಅರಿಶಿಣ, ಉಪ್ಪು ಮತ್ತು ಬೆಲ್ಲ.
ಮೊದಲಿಗೆ ಒಂದು ಪಾತ್ರೆಗೆ ತುಪ್ಪ , ಸಾಸಿವೆ, ಉದ್ದಿನ ಬೇಳೆ, ಇಂಗನ್ನು ಹಾಕಿ. ಇದು ಚೆನ್ನಾಗಿ ಬಿಸಿ ಆಗಬೇಕು, ಘಮ ಘಮ ಅಂತ ವಾಸನೆ ಬರಬೇಕು.
ಬೆಳ್ಳುಳ್ಳಿ ಕಂದು ಬಣ್ಣಕ್ಕೆ ಬರುವ ತನಕ ಚೆನ್ನಾಗಿ ಹುರಿಯಿರಿ. ಆಗ ಚಟ್ನಿಗೆ ಒಳ್ಳೆ ರುಚಿ ಬರುತ್ತದೆ. ತುಪ್ಪ ನಿಮಗೆ ಬೇಕಾಗುವಷ್ಟು ಪ್ರಮಾಣದಲ್ಲಿ ಹಾಕಿ.
ಮಸಾಲ ಪೇಸ್ಟ್ ತಯಾರಿಸಲು ಸಖತ್ ಈಸಿ. ತೆಂಗಿನಕಾಯಿ, ಸಾಸಿವೆ, ಟೊಮೆಟೊ, ಕೆಂಪು ಮೆಣಸಿನಕಾಯಿಯನ್ನು ಮಿಕ್ಸಿಗೆ ಹಾಕಿ, ಅದಕ್ಕೆ ಬೇಕಾಗುವಷ್ಟು ನೀರನ್ನು ಹಾಕಿ ಚೆನ್ನಾಗಿ ರುಬ್ಬಿ. ನುಣ್ಣಗೆ ಆಗಬೇಕು ಇದು. ಆಗ ಚಟ್ನಿಗೊಂದು ರುಚಿ.
ಒಂದು ಬಾಣಲೆಗೆ ಹುಣಸೆ ಹಣ್ಣಿನ ನೀರು, ಉಪ್ಪು, ಅರಿಶಿಣ, ಉಪ್ಪು ಮತ್ತು ಬೆಲ್ಲವನ್ನು ಹಾಕಬೇಕು. ಇದನ್ನು ಚೆನ್ನಾಗಿ ಕುದಿಯಲು ಬಿಡಿ. ಈಗ ಎಲ್ಲವನ್ನು ಮಿಕ್ಸ್ ಮಾಡಿ ಕುದಿಸಿ.
ಈಗಾಗಲೇ ತಯಾರಿಸಲಾದ ಮಸಾಲ ಪೇಸ್ಟ್ ನ್ನು ಆ ನೀರಿನೊಂದಿಗೆ ಮಿಶ್ರಣ ಮಾಡಿ. ಹುರಿದ ಬೆಳ್ಳುಳ್ಳಿಯನ್ನು ಇದಕ್ಕೆ ಚೆನ್ನಾಗಿ ಮಿಶ್ರಣ ಮಾಡಿ. ಎಣ್ಣೆ ಬೇರ್ಪಡುವ ತನಕ ಬೇಯಿಸಿದರೆ ಮಲೆನಾಡು ಸ್ಟೈಲ್ ನಲ್ಲಿ ಬೆಳ್ಳುಳ್ಳಿ ಚಟ್ನಿ ರೆಡಿ!