ಮನೆ Uncategorized ನಟಿ  ರುಕ್ಮಿಣಿ ವಸಂತ್  ಬಿಕಿನಿ ಧರಿಸಿದ್ರಾ? ಸೋಶಿಯಲ್ ಮೀಡಿಯಾದಲ್ಲಿ ಧೂಳೆಬ್ಬಿಸುತ್ತಿರುವ ಫೋಟೋಗಳ ಅಸಲಿ ಸತ್ಯ ಇಲ್ಲಿದೆ

ನಟಿ  ರುಕ್ಮಿಣಿ ವಸಂತ್  ಬಿಕಿನಿ ಧರಿಸಿದ್ರಾ? ಸೋಶಿಯಲ್ ಮೀಡಿಯಾದಲ್ಲಿ ಧೂಳೆಬ್ಬಿಸುತ್ತಿರುವ ಫೋಟೋಗಳ ಅಸಲಿ ಸತ್ಯ ಇಲ್ಲಿದೆ

0

ದಕ್ಷಿಣ ಭಾರತ ಚಿತ್ರರಂಗದಲ್ಲಿ ಈಗ ಭಾರಿ ಬೇಡಿಕೆಯಲ್ಲಿರುವ, ತಮ್ಮ ಹೋಮ್ಲಿ ಲುಕ್ ಹಾಗೂ ಶಕ್ತಿಶಾಲಿ ನಟನೆಯ ಮೂಲಕ ಕನ್ನಡ ಪ್ರೇಕ್ಷಕರ ಮನಗೆದ್ದಿರುವ ನಟಿ ರುಕ್ಮಿಣಿ ವಸಂತ್ ಅವರದ್ದೇ ಎನ್ನಲಾದ ಒಂದು ಗ್ಲಾಮರಸ್ ವಿಡಿಯೋ ಇಂಟರ್ನೆಟ್ನಲ್ಲಿ ದೊಡ್ಡ ಸಂಚಲನ ಸೃಷ್ಟಿಸಿದೆ. ಈ ವಿಡಿಯೋದಲ್ಲಿ ಅವರು ಈಜುಕೊಳದ ಬಳಿ ಹಸಿರು ಬಣ್ಣದ ಬಿಕಿನಿ ಧರಿಸಿ ಫೋಟೋಶೂಟ್‌ಗೆ ಪೋಸ್ ನೀಡುತ್ತಿರುವಂತೆ ಕಾಣಿಸುವ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗಿವೆ.

ಸಾಮಾನ್ಯವಾಗಿ ಸಾಂಪ್ರದಾಯಿಕ ಉಡುಪುಗಳಲ್ಲಿ ಕಾಣಿಸಿಕೊಳ್ಳುವ ನಟಿಯ ಈ ರೀತಿಯ “ಬೋಲ್ಡ್ ಲುಕ್” ನೋಡಿ ಅಭಿಮಾನಿಗಳು ಕೂಡ ಅಚ್ಚರಿಗೊಂಡಿದ್ದಾರೆ. ಆದರೆ ಈ ವೈರಲ್ ವಿಡಿಯೋ ಹಿಂದೆ ಇರುವ ನಿಜವಾದ ಸತ್ಯ ಸಂಪೂರ್ಣ ವಿಭಿನ್ನವಾಗಿದೆ.

ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿರುವ ವಿಡಿಯೋ ಕ್ಲಿಪ್‌ನಲ್ಲಿ, ರುಕ್ಮಿಣಿ ವಸಂತ್ ಅವರಂತೆಯೇ ಕಾಣುವ ಮಹಿಳೆಯೊಬ್ಬರು ಸ್ವಿಮ್ಮಿಂಗ್ ಪೂಲ್ ಕಡೆಗೆ ನಡೆದುಕೊಂಡು ಹೋಗುತ್ತಿರುವುದು ಕಾಣಿಸುತ್ತದೆ. ಸುತ್ತಮುತ್ತ ದೊಡ್ಡ ಕ್ಯಾಮೆರಾ ಸೆಟ್‌ಅಪ್ ಹಾಗೂ ತಂತ್ರಜ್ಞರ ತಂಡ ಇರುವುದರಿಂದ, ಇದು ಒಂದು ಸಿನಿಮಾ ಶೂಟ್ ಅಥವಾ ಅಂತರರಾಷ್ಟ್ರೀಯ ಬ್ರ್ಯಾಂಡ್ ಫೋಟೋಶೂಟ್ ಇರಬಹುದು ಎಂದು ನೆಟ್ಟಿಗರು ಊಹಿಸಿದ್ದರು.

ಈ ವಿಡಿಯೋವನ್ನು ಹಲವರು “ರುಕ್ಮಿಣಿ ಅವರ ಮೊದಲ ಬಿಕಿನಿ ಶೂಟ್” ಎಂದು ಹೇಳಿಕೊಂಡು ವ್ಯಾಪಕವಾಗಿ ಶೇರ್ ಮಾಡಿದ್ದರು.ಈ ವಿಷಯ ಮುನ್ನೆಲೆಗೆ ಬರುತ್ತಿದ್ದಂತೆಯೇ, ಇದು ಗಂಭೀರ ಸೈಬರ್ ಅಪರಾಧ ಎಂಬುದು ಬೆಳಕಿಗೆ ಬಂದಿದೆ. ವೈರಲ್ ಆಗುತ್ತಿರುವ ಚಿತ್ರಗಳು ಮತ್ತು ವಿಡಿಯೋಗಳು ಸಂಪೂರ್ಣವಾಗಿ ನಕಲಿ ಎಂದು ಪತ್ತೆಯಾಗಿದೆ.

ಇವುಗಳನ್ನು ಕೃತಕ ಬುದ್ಧಿಮತ್ತೆ (AI) ತಂತ್ರಜ್ಞಾನ ಬಳಸಿ ಸೃಷ್ಟಿಸಿರುವ “ಡೀಪ್‌ಫೇಕ್” ವಿಡಿಯೋಗಳು ಎಂದು ಖಚಿತವಾಗಿದೆ. ಯಾರೋ ಕಿಡಿಗೇಡಿಗಳು ತಂತ್ರಜ್ಞಾನವನ್ನು ದುರುಪಯೋಗಪಡಿಸಿಕೊಂಡು, ಮತ್ತೊಬ್ಬರ ದೇಹಕ್ಕೆ ನಟಿಯ ಮುಖವನ್ನು ಕೃತಕವಾಗಿ ಅಳವಡಿಸಿದ್ದಾರೆ. ಈ ವಿಡಿಯೋಕ್ಕೂ ನಟಿಗೆ ಯಾವುದೇ ಸಂಬಂಧವಿಲ್ಲ ಎಂದು ಸ್ಪಷ್ಟವಾಗಿದೆ. ಈ ಕುರಿತು ನಟಿಯ ಕಡೆಯಿಂದ ಇನ್ನೂ ಯಾವುದೇ ಅಧಿಕೃತ ಪ್ರತಿಕ್ರಿಯೆ ಬಂದಿಲ್ಲ.

ರುಕ್ಮಿಣಿ ವಸಂತ್  ಅವರು ತಮ್ಮ ಸರಳ ಮತ್ತು ಸಾಂಪ್ರದಾಯಿಕ ಲುಕ್‌ನಿಂದಲೇ ಹೆಚ್ಚು ಪ್ರಸಿದ್ಧರಾಗಿದ್ದಾರೆ. ಸಿನಿಮಾಗಳಲ್ಲಿ ಕೇವಲ ಗ್ಲಾಮರ್ ಪಾತ್ರಗಳಿಗೆ ಸೀಮಿತವಾಗಲು ಅವರು ಇಷ್ಟಪಡುವುದಿಲ್ಲ.ಒಂದು ಸಂದರ್ಶನದಲ್ಲಿ ಅವರು ಹೇಳಿದ್ದಂತೆ, ತಮ್ಮ ಸಿನಿಮಾ ಪಯಣವನ್ನು ಯಾವುದೇ ಲೇಬಲ್ ಮೂಲಕ ಅಳೆಯುವುದಿಲ್ಲ, ಬದಲಿಗೆ ಉತ್ತಮ ಕಥೆಗಳು ಮತ್ತು ಪಾತ್ರಗಳು ಮುಖ್ಯ ಎಂದು ಹೇಳಿದ್ದಾರೆ.

‘ಸಪ್ತ ಸಾಗರದಾಚೆ ಎಲ್ಲೋ’ ಚಿತ್ರದ ಆಡಿಷನ್‌ಗೆ ಅವರು ಸ್ವತಃ ನಿರ್ದೇಶಕರಿಗೆ ಸೋಶಿಯಲ್ ಮೀಡಿಯಾ ಮೂಲಕ ಸಂದೇಶ ಕಳುಹಿಸಿದ್ದರು ಎಂಬುದು ಅವರ ಯಶಸ್ಸಿನ ಒಂದು ವಿಶೇಷ ಅಂಶವಾಗಿದೆ. ಸದ್ಯ ಅವರು ರಿಷಬ್ ಶೆಟ್ಟಿ ನಿರ್ದೇಶನದ ‘ಕಾಂತಾರ: ಚಾಪ್ಟರ್ 1’ ಚಿತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಜೊತೆಗೆ ರಾಕಿಂಗ್ ಸ್ಟಾರ್ ಯಶ್ ಅಭಿನಯದ ಬಹುನಿರೀಕ್ಷಿತ ‘ಟಾಕ್ಸಿಕ್’ ಹಾಗೂ ಜೂನಿಯರ್ ಎನ್‌ಟಿಆರ್ ಮತ್ತು ಪ್ರಶಾಂತ್ ನೀಲ್ ಕಾಂಬಿನೇಶನ್‌ನ ‘ಡ್ರ್ಯಾಗನ್’ ಚಿತ್ರಗಳಲ್ಲಿಯೂ ಪ್ರಮುಖ ಪಾತ್ರಗಳಲ್ಲಿ ನಟಿಸುತ್ತಿದ್ದಾರೆ.

ಇಂತಹ ದೊಡ್ಡ ಸಿನಿಮಾಗಳಲ್ಲಿ ಬ್ಯುಸಿಯಾಗಿರುವ ನಟಿಯ ಹೆಸರನ್ನು ಹಾಳು ಮಾಡಲು ನಕಲಿ ಡೀಪ್‌ಫೇಕ್ ವಿಡಿಯೋಗಳನ್ನು ಹರಿಬಿಡಲಾಗುತ್ತಿದೆ ಎಂದು ಸೈಬರ್ ತಜ್ಞರು ಎಚ್ಚರಿಕೆ ನೀಡಿದ್ದಾರೆ. ಇಂತಹ ವಿಡಿಯೋಗಳನ್ನು ನಂಬಬಾರದು ಹಾಗೂ ಶೇರ್ ಮಾಡಬಾರದು ಎಂದು ಅವರು ಸಲಹೆ ನೀಡಿದ್ದಾರೆ.