ಮೈಸೂರು: ಒಂಟಿಕೊಪ್ಪಲ್ ಪಂಚಾಂಗವೂ ದೇಶವಿದೇಶಗಳಲ್ಲಿ ಜನಪ್ರಿಯವಾಗಿರುವುದು ಮೈಸೂರಿನ ಹಿರಿಮೆಯನ್ನು ಹೆಚ್ಚಿಸಿದೆ. ಧಾರ್ಮಿಕ ಸಂಪ್ರಾದಯವನ್ನು ಪರಿಪಾಲಿಸುವವರು ಪಂಚಾಂಗದ ಮಾಹಿತಿಯನ್ನು ಪಡೆದುಕೊಳ್ಳಲು ಮುಂದಾಗಬೇಕು ಎಂದು ಕಾಂಗ್ರೆಸ್ ಮುಖಂಡ ಎನ್ ಎಂ ನವೀನ್ ಕುಮಾರ್ ಹೇಳಿದರು.
ಕುವೆಂಪು ನಗರದ ನವಿಲು ರಸ್ತೆಯಲ್ಲಿರುವ ಶ್ರೀ ಗುರು ರಾಘವೇಂದ್ರ ದೇವಸ್ಥಾನದ ಅವರಣದಲ್ಲಿ ಶ್ರೀ ಗುರು ರಾಘವೇಂದ್ರ ಸೇವಾ ಟ್ರಸ್ಟ್ ವತಿಯಿಂದ ಹಿಂದೂ ಸಂಪ್ರದಾಯದ ಪ್ಲವನಾಮ ಸಂವತ್ಸರದ ನೂತನ ವರ್ಷಾಚರಣೆಯಾದ ಚಾಂದ್ರಮಾನ ಯುಗಾದಿ ಹಬ್ಬವನ್ನು ಸ್ವಾಗತಿಸಿ ಬ್ರಾಹ್ಮಣ ಸಮುದಾಯದವರಿಗೆ ಒಂಟಿಕೊಪ್ಪಲ್ ಪಂಚಾಂಗವನ್ನು ವಿತರಿಸಿದರು.
ನಂತರ ಮಾತನಾಡಿದ ಅವರು, ಸೌರಮಂಡಲದ ಆಧಾರಿತದ ಮೇಲೆ ಭೂಮಿಯಲ್ಲಿ ನಡೆಯುವ ಬದಲಾವಣೆಯನ್ನು ತಿಳಿಸುವುದೇ ಪಂಚಾಂಗ. ಯುಗಾದಿ ವರ್ಷಾಚರಣೆ ಬೇವುಬೆಲ್ಲವು ಕಹಿಸಿಹಿಯ ಸಂಕೇತ ಕಷ್ಟಸುಖಗಳ ಸಮಬಾಳಿನ ಜೀವನವನ್ನು ಸರಿಯಾದ ಸಂಧರ್ಭದಲ್ಲಿ ನಡೆಸಬೇಕಾದರೆ ಪಾಂಚಾಂಗದ ನಿರ್ಧಾರ ಮುಖ್ಯವಾಗುತ್ತದೆ. ಸಂವತ್ಸರ ಮಾಸ, ತಿಥಿ ನಕ್ಷತ್ರ ರಾಶಿಯ ಕಾಲದ ಘಳಿಗೆಯ ಮಾಹಿತಿ ಮೊದಲು ತಿಳಿದುಕೊಳ್ಳಬಹುದು. ಭಾರತದ ಇತಿಹಾಸದ ಕೆಲವು ವಿಷಯಗಳು ಪಂಚಾಂಗದಲ್ಲಿ ಮಾಹಿತಿ ನೀಡುತ್ತದೆ ಎಂದರು.
ಇದೇ ಸಂದರ್ಭದಲ್ಲಿ ಶ್ರೀ ಗುರು ರಾಘವೇಂದ್ರ ಸೇವಾ ಟ್ರಸ್ಟ್ ಅಧ್ಯಕ್ಷರಾದ ಎಸ್ ಬಿ ವಾಸದೇವಮೂರ್ತಿ, ಪ್ರಕಾಶ್ , ದೇವಸ್ಥಾನದ ಪ್ರಧಾನ ಅರ್ಚಕರಾದ ಶ್ರೀಧರ್ ವಿಠಲ್, ಸುರೇಶ್, ವಿನಯ್ ಕಣಗಾಲ್, ವೆಂಕಟೇಶ್ ಬಾಬು, ಪ್ರಸಾದ್, ರಾಜೇಶ್, ಪ್ರವೀಣ್, ಭರತ್, ಹಾಗೂ ಇನ್ನಿತರರು ಹಾಜರಿದ್ದರು.