ಮನೆ ಅಪರಾಧ ಪತ್ನಿಯನ್ನು ಕೊಡಲಿಯಿಂದ ಕೊಂದು, ಮಗುವನ್ನು ನೀರಿನ ತೊಟ್ಟಿಗೆ ಎಸೆದು ಕೊಂದ ಪಾಪಿ

ಪತ್ನಿಯನ್ನು ಕೊಡಲಿಯಿಂದ ಕೊಂದು, ಮಗುವನ್ನು ನೀರಿನ ತೊಟ್ಟಿಗೆ ಎಸೆದು ಕೊಂದ ಪಾಪಿ

0

ಹೈದರಾಬಾದ್​​​: ವ್ಯಕ್ತಿಯೋರ್ವ ತನ್ನ ಪತ್ನಿ, ಮಗುವನ್ನು ತನ್ನ ಮಗಳ ಮುಂದೆಯೇ ಹತ್ಯೆ ಮಾಡಿರುವ ಘಟನೆ ರಂಗಾರೆಡ್ಡಿ ಜಿಲ್ಲೆಯ ಅಬ್ದುಲ್ಲಾಪುರಮೆಟ್​ ನ ಅನಾಜ್​ ಪುರ ಎಂಬಲ್ಲಿ ನಡೆದಿದೆ.

ಮೃತರನ್ನು ಕಂಡಿ ಕಂಟಿ ಲಾವಣ್ಯ(23) ಮತ್ತು ಕ್ರಿಯಾಂಶ್ (ಒಂದೂವರೆ ತಿಂಗಳು) ಎಂದು ಗುರುತಿಸಲಾಗಿದೆ. ಎರ್ಪುಳ ಧನರಾಜ್​ ಕೊಲೆಗೈದ ಆರೋಪಿ.

ಪೊಲೀಸರು ನೀಡಿದ ಮಾಹಿತಿ ಪ್ರಕಾರ, ಅನಾಜ್​ ಪುರದ ನಿವಾಸಿಯಾದ ಎರ್ಪುಳ ಧನರಾಜ್​ ಕಳೆದ ನಾಲ್ಕು ವರ್ಷಗಳ ಹಿಂದೆ ಬಂಡರವೀರ್ಯಾಲದ ಕಂಡಿಕಂಟಿ ಲಾವಣ್ಯ ಎಂಬವರನ್ನು ಮದುವೆಯಾಗಿದ್ದ. ಈತನಿಗೆ ಆದ್ಯ (2.5 ವರ್ಷ) ಮತ್ತು ಕ್ರಿಯಾಂಶ್​ ಎಂಬ ಪುಟ್ಟ ಮಕ್ಕಳಿದ್ದರು.

ಧನ್​ರಾಜ್​ ತಾಯಿ ಮೃತಪಟ್ಟಿದ್ದರು. ತಂದೆ ಬಾಲಯ್ಯ ಜೊತೆ ದಂಪತಿ ವಾಸವಿದ್ದರು. ಧನರಾಜ್​ ಕೆಲವು ದಿನಗಳ ಹಿಂದಷ್ಟೇ ತನ್ನ ಮಗುವಿನ 21 ದಿನ ಆಚರಣೆ ಮಾಡಿದ್ದನು. ಬಳಿಕ ತನ್ನ ಹೆಂಡತಿಯನ್ನು ತವರಿಗೆ ಕಳುಹಿಸಿದ್ದನು.

ಬುಧವಾರ ಬೆಳಿಗ್ಗೆ ಧನರಾಜ್​ ತನ್ನ ಹೆಂಡತಿಗೆ ಕರೆ ಮಾಡಿ ಬಂಡರವೀರ್ಯಾಲಕ್ಕೆ ಬರುತ್ತಿದ್ದೇನೆ, ತನ್ನ ಮಗುವಿನ ಲಸಿಕೆ ಹಾಕಿಸುವ ಬಗ್ಗೆ ವ್ಯವಸ್ಥೆ ಮಾಡಬೇಕೆಂದು ಹೇಳಿದ್ದಾನೆ. ಆ ಬಳಿಕ ಬೆಳಿಗ್ಗೆ 11 ಗಂಟೆಗೆ ತನ್ನ ಅತ್ತೆ ಮನೆಗೆ ಹೋಗಿ ತನ್ನ ಹೆಂಡತಿಯೊಂದಿಗೆ ಅನಾಜ್​ ಪುರಕ್ಕೆ ವಾಪಸಾಗಿದ್ದಾನೆ.

ಬಳಿಕ ಧನರಾಜ್​ ಹೆಂಡತಿಯಲ್ಲಿ ಕ್ಯಾತೆ ತೆಗೆದಿದ್ದು, ಈ ವೇಳೆ ಧನರಾಜ್​ ಬಿಯರ್​ ಬಾಟಲಿಯಿಂದ ಲಾವಣ್ಯಳ ಮೇಲೆ ಹಲ್ಲೆ ಮಾಡಿದ್ದಾನೆ. ಕೊಡಲಿಯಿಂದಲೂ ಹಲ್ಲೆ ಮಾಡಿದ್ದು, ಆಕೆ ಸ್ಥಳದಲ್ಲೇ ಮೃತಪಟ್ಟಿದ್ದಾಳೆ. ತನ್ನ ಒಂದೂವರೆ ತಿಂಗಳ ಮಗುವನ್ನು ನೀರಿನ ತೊಟ್ಟಿಗೆ ಎಸೆದು ಹತ್ಯೆ ಮಾಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಆರೋಪಿ ಧನರಾಜ್​ ತನ್ನ ಎರಡೂವರೆ ವರ್ಷ ಮಗಳ ಮುಂದೆಯೇ ಬರ್ಬರ ಕೃತ್ಯ ಎಸಗಿದ್ದಾನೆ. ಅಪ್ಪ ಕ್ರೌರ್ಯವನ್ನು ಕಂಡು ಹೆದರಿದ ಬಾಲಕಿ ಮನೆಯಿಂದ ಹೊರಗೊಡಿ ಬಂದು ಪ್ರಾಣ ಉಳಿಸಿಕೊಂಡಿದ್ದಾಳೆ.

ಪಕ್ಕದ ಮನೆಯವರು ಬಾಲಕಿಯನ್ನು ತಮ್ಮ ಮನೆಗೆ ಕರೆದುಕೊಂಡು ಹೋಗಿದ್ದಾರೆ. ಧನರಾಜ್​ ತನ್ನ ಮಗಳನ್ನು ಕೊಲ್ಲಲು ಎಲ್ಲೆಡೆ ಹುಡುಕಿದ್ದಾನೆ. ಆದರೆ ಎಲ್ಲೂ ಕಾಣದ ಬಳಿಕ ಸ್ಥಳದಿಂದ ತನ್ನ ಬೈಕ್’​ನಲ್ಲಿ ಪರಾರಿಯಾಗಿದ್ದಾನೆ.

ಅನುಮಾನಗೊಂಡ ನೆರೆಹೊರೆಯವರು ಮನೆಗೆ ಹೋಗಿ ನೋಡಿದಾಗ ಲಾವಣ್ಯ ರಕ್ತದ ಮಡುವಿನಲ್ಲಿ ಬಿದ್ದಿರುವುದು ಕಂಡುಬಂದಿದೆ. ಅಲ್ಲೇ ಮಗು ಕೂಡಾ ಪಕ್ಕದ ನೀರಿನ ತೊಟ್ಟಿಯಲ್ಲಿ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದೆ.

ಈ ಬಗ್ಗೆ ಮಾಹಿತಿ ಪಡೆದ ಅಬ್ದುಲ್ಲಪುರಮೆಟ್​​ ಪೊಲೀಸರು ಸ್ಥಳಕ್ಕಾಗಮಿಸಿ ಪರಿಶೀಲನೆ ನಡೆಸಿ, ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ಒಸ್ಮಾನಿಯಾ ಆಸ್ಪತ್ರೆಗೆ ರವಾನಿಸಿದ್ದಾರೆ. ಆರೋಪಿ ತಲೆಮರೆಸಿಕೊಂಡಿದ್ದು, ಪೊಲೀಸರು ಶೋಧ ನಡೆಸುತ್ತಿದ್ದಾರೆ.

ಹಿಂದಿನ ಲೇಖನಒಂಟಿಕೊಪ್ಪಲ್ ಪಂಚಾಂಗವೂ ಮೈಸೂರಿನ ಹಿರಿಮೆಯನ್ನು ಹೆಚ್ಚಿಸಿದೆ: ಎನ್ ಎಂ ನವೀನ್ ಕುಮಾರ್
ಮುಂದಿನ ಲೇಖನಮತ ಎಣಿಕೆ ಕೇಂದ್ರಕ್ಕೆ ಜಿಲ್ಲಾಧಿಕಾರಿ ಭೇಟಿ: ಸಿದ್ಧತೆಗಳ ಪರಿಶೀಲನೆ