ಮನೆ ತಂತ್ರಜ್ಞಾನ ಸ್ಮಾರ್ಟ್’ಫೋನ್’ಗಳು ಬ್ಲಾಸ್ಟ್ ಆಗಲು ಕಾರಣವೇನು ಗೊತ್ತಾ? ಈ ಟಿಪ್ಸ್ ಫಾಲೋ ಮಾಡಿದರೆ ಮೊಬೈಲ್ ಸೇಫ್!

ಸ್ಮಾರ್ಟ್’ಫೋನ್’ಗಳು ಬ್ಲಾಸ್ಟ್ ಆಗಲು ಕಾರಣವೇನು ಗೊತ್ತಾ? ಈ ಟಿಪ್ಸ್ ಫಾಲೋ ಮಾಡಿದರೆ ಮೊಬೈಲ್ ಸೇಫ್!

0

ಫೋನ್ ಉರಿಯುತ್ತಿರುವ ವಿಡಿಯೋ ಮತ್ತು ಫೋಟೋಗಳನ್ನು ಮಾಲೀಕರು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ. ಈ ವಿಡಿಯೋಗಳು ಮತ್ತು ಫೋಟೋಗಳನ್ನು ನೋಡಿದ ನಂತರ ಫೋನ್ ಬಳಕೆದಾರರಲ್ಲಿ ಆತಂಕ ಶುರುವಾಗಿದೆ.

ಸ್ಮಾರ್ಟ್’ಫೋನ್’ನಲ್ಲಿರುವ ಲಿಥಿಯಂ-ಐಯಾನ್ ಬ್ಯಾಟರಿಗೆ ಹಾನಿಯಾಗುವುದರಿಂದ ಸ್ಮಾರ್ಟ್’ಫೋನ್’ಗಳು ಸಾಮಾನ್ಯವಾಗಿ ಸ್ಫೋಟಗೊಳ್ಳುತ್ತವೆ. ಫೋನ್ ಸ್ಫೋಬ್ಲಾಸ್ಟ್ ಆಗಲು ಮತ್ತೊಂದು ಪ್ರಮುಖ ಕಾರಣವೆಂದರೆ ಅತಿಯಾದ ಹೀಟ್. ಫೋನ್ ಅತಿಯಾಗಿ ಹೀಟ್ ಆದಾಗ ಬ್ಯಾಟರಿಯನ್ನು ಹಾನಿಗೊಳಿಸುತ್ತದೆ. ಇದು ಬ್ಯಾಟರಿಯೊಳಗೆ ಹೀಟ್ ಆಗಲು ಕಾರಣವಾಗುತ್ತದೆ. ಇದರ ಪರಿಣಾಮವಾಗಿ ಬ್ಯಾಟರಿ ಬ್ಲಾಸ್ಟ್ ಆಗುತ್ತದೆ.

ಅಲ್ಲದೆ, ಬಳಕೆದಾರರು ತಮ್ಮ ಫೋನ್ಗಳನ್ನು ಯಾವತ್ತಿಗೂ ಕೆಳಗೆ ಬೀಳಿಸಬಾರದು. ಈ ರೀತಿಯಾದಾಗ ಮೊಬೈಲ್ ಬ್ಲಾಸ್ಟ್ ಆಗುವ ಸಾಧ್ಯತೆ ಹೆಚ್ಚಿರುತ್ತದೆ ಎಂದು ತಜ್ಞರು ಎಚ್ಚರಿಸಿದ್ದಾರೆ. ದೀರ್ಘಕಾಲ ಫೋನ್ ಬಳಸುವುದರಿಂದ ಬ್ಯಾಟರಿಯೂ ಹಾಳಾಗುತ್ತದೆ. ಇದು ಬ್ಯಾಟರಿಯ ಊತ ಮತ್ತು ಅಧಿಕ ಹೀಟ್ ಆಗಲು ಕಾರಣವಾಗುತ್ತದೆ. ನಿಮ್ಮ ಸ್ಮಾರ್ಟ್’ಫೋನ್ ಬ್ಲಾಸ್ಟ್ ಆಗ್ಬೇಕಾದ್ರೆ ಈ ಟಿಪ್ಸ್ ಅನ್ನು ಫಾಲೋ ಮಾಡಿ.

ಫೋನ್ನಿಂದ ಯಾವುದೇ ಶಬ್ದಗಳು, ಸುಡುವ ವಾಸನೆ ಅಥವಾ ಅತಿಯಾದ ಹೀಟ್ ಆಗುವುದನ್ನು ನೀವು ಗಮನಿಸಿದರೆ, ತಕ್ಷಣವೇ ಫೋನ್ ಅನ್ನು ಬದಿಗಿಡಬೇಕು. ಇನ್ನು ಅಂತಹ ಸಂದರ್ಭಗಳಲ್ಲಿ ಫೋನ್ ಅನ್ನು ಸ್ವಿಚ್ ಆಫ್ ಮಾಡಬೇಕು ಮತ್ತು ಸರ್ವೀಸ್ ಸೆಂಟರ್ ಗೆ ತೆಗೆದುಕೊಂಡು ಹೋಗಬೇಕು.

ಫೋನ್ ಅನ್ನು ಯಾವತ್ತೂ ಬೀಳಿಸಬೇಡಿ. ಗೀರುಗಳು ಮತ್ತು ಫೋನ್ ಮೇಲಾಗುವ ಹಾನಿಗಳನ್ನು ತಪ್ಪಿಸಲು ಈ ರೀತಿಯ ಕ್ರಮಗಳನ್ನು ಪಾಲಿಸಿ.

ಸ್ಮಾರ್ಟ್’ಫೋನ್ ಅನ್ನು ಯಾವತ್ತೂ ಅಧಿಕವಾಗಿ ಬಳಸಬೇಡಿ. ಇದರಿಂದ ನಿಮ್ಮ ಸ್ಮಾರ್ಟ್’ಫೋನ್ ಬ್ಯಾಟರಿ ಹೀಟ್ ಆಗುವ ಸಾಧ್ಯತೆ ಇರುತ್ತದೆ. ಈ ಸಂದರ್ಭದಲ್ಲಿ ನಿಮ್ಮ ಮೊಬೈಲ್ ಜಾಸ್ತಿ ಹೀಟ್ ಆಗದಂತೆ ನೋಡಿಕೊಳ್ಳುವುದು ಉತ್ತಮ.

ಬ್ಯಾಟರಿ: ಯಾವತ್ತೇ ಆಗಲಿ ಫೋನ್ ಅನ್ನು ಹೆಚ್ಚು ಚಾರ್ಜ್ ಮಾಡಬೇಡಿ. ಬ್ಯಾಟರಿ ಚಾರ್ಜ್ ಯಾವತ್ತೂ 0 ಶೇಕಡಾವನ್ನು ತಲುಪುವವರೆಗೆ ಫೋನ್ ಅನ್ನು ಬಳಸಬೇಡಿ. ಇನ್ನು ಬ್ಯಾಟರಿಯನ್ನು ಸಾಮಾನ್ಯವಾಗಿ 20-80% ಶೇಕಡಾದಷ್ಟು ಚಾರ್ಜ್’ನಲ್ಲಿಡಿ.

ಕಂಪೆನಿಯ ಚಾರ್ಜರ್ ಗಳು ಮತ್ತು ಕೇಬಲ್’ಗಳನ್ನೇ : ಬಳಸಿಸ್ಮಾರ್ಟ್’ಫೋನ್ ಕಂಪೆನಿ ನೀಡುವ ಚಾರ್ಜರ್’ಗಳು ಮತ್ತು ಕೇಬಲ್’ಗಳನ್ನು ಮಾತ್ರ ಬಳಸಬೇಕು. ಒಂದು ವೇಳೆ ಬೇರೆ ಚಾರ್ಜರ್’ಗಳನ್ನು ಬಳಸಿದ್ರೆ ನಿಮ್ಮ ಮೊಬೈಲ್ ಬ್ಯಾಟರಿ ಹಾಳಾಗುವ ಸಾಧ್ಯತೆ ಹೆಚ್ಚಿರುತ್ತದೆ.