ಮನೆ ಅಪರಾಧ ಉಪ ತಹಶೀಲ್ದಾರ್ ಮನೆ ಮೇಲೆ ಎಸಿಬಿ ದಾಳಿ: 450 ಗ್ರಾಂ. ಚಿನ್ನ ಪತ್ತೆ

ಉಪ ತಹಶೀಲ್ದಾರ್ ಮನೆ ಮೇಲೆ ಎಸಿಬಿ ದಾಳಿ: 450 ಗ್ರಾಂ. ಚಿನ್ನ ಪತ್ತೆ

0

ಗದಗ: ನಗರದ ಪಂಚಾಕ್ಷರಿ ಬಡಾವಣೆಯಲ್ಲಿರುವ ಉಪತಹಶೀಲ್ದಾರ್ ಬಿ.ಎಸ್.ಅಣ್ಣಿಗೇರಿ ಮನೆ ಮೇಲೆ ಎಸಿಬಿ ಪೊಲೀಸರು ಬುಧವಾರ ದಾಳಿ ನಡೆಸಿದ್ದು, 450 ಗ್ರಾಂ ಚಿನ್ನ, 5 ಕೆ.ಜಿ. ಬೆಳ್ಳಿ ಹಾಗೂ ಅಂದಾಜು 25 ಎಕರೆ ಜಮೀನು, 12 ಸೈಟ್ ಗಳ ದಾಖಲೆಗಳು ಪತ್ತೆಯಾಗಿವೆ. ₹1. 50 ಲಕ್ಷ ನಗದು ಪತ್ತೆಯಾಗಿರುವ ಬಗ್ಗೆ ಮಾಹಿತಿ ಲಭಿಸಿದೆ.

ಬಿ.ಎಸ್ ಅಣ್ಣಿಗೇರಿ ಅವರ ತಾಯಿ ವಾಸವಿದ್ದ ನೆಲಮಹಡಿ ಮನೆಯಲ್ಲಿ ದಾಖಲೆಗಳು ಪತ್ತೆಯಾಗಿವೆ.ಇದೇ ವೇಳೆ, ನಗರದ ಆಲೂರು ವೆಂಕಟರಾವ್ ವೃತ್ತದ ಬಳಿ ಇರುವ ಅಳಿಯ ರಾಕೇಶ್ ರೇವಣ್ಣವರ್ ಗೆ ಸೇರಿದ ಕಚೇರಿಯಲ್ಲೂ ಎಸಿಬಿ ಅಧಿಕಾರಿಗಳು ಪರಿಶೀಲನೆ ನಡೆಸಿದ್ದಾರೆ.

ಎಸಿಬಿ ಅಧಿಕಾರಿಗಳು ಉಪ ತಹಶೀಲ್ದಾರ್ ಅಳಿಯನನ್ನು ಮನೆಯಿಂದ ಟಾಂಗಾಕೂಟ್‌ನಲ್ಲಿರುವ ರಿಯಲ್ ಎಸ್ಟೇಟ್ ಕಚೇರಿಗೆ ಕರೆತಂದು ದಾಖಲೆಗಳ ಪರಿಶೀಲನೆ ನಡೆಸಿದ್ದಾರೆ.

ಎಸಿಬಿ ಡಿವೈಎಸ್ಪಿ ಎಂ. ಮಲ್ಲಾಪೂರ ನೇತೃತ್ವದಲ್ಲಿ ದಾಳಿ ನಡೆದಿದೆ. ಗದಗ, ಧಾರವಾಡ ಎಸಿಬಿ ತಂಡದಿಂದ ಶೋಧ ಮುಂದುವರಿದಿದೆ.