ಮನೆ ರಾಜಕೀಯ ಕಾಂಗ್ರೆಸ್ ಪಕ್ಷ ಸೇರಿದ ನಿರ್ದೇಶಕ, ನಟ ಎಸ್ ನಾರಾಯಣ್

ಕಾಂಗ್ರೆಸ್ ಪಕ್ಷ ಸೇರಿದ ನಿರ್ದೇಶಕ, ನಟ ಎಸ್ ನಾರಾಯಣ್

0

ಬೆಂಗಳೂರು: ಕನ್ನಡದ ಖ್ಯಾತ ಚಲನಚಿತ್ರ ನಿರ್ಮಾಪಕ, ನಿರ್ದೇಶಕ, ನಟ ಎಸ್. ನಾರಾಯಣ್ ಹಾಗೂ ರಾಜ್ಯ ಶಿಕ್ಷಕರ ಸಂಘದ ಅಧ್ಯಕ್ಷ ತಿಮ್ಮಯ್ಯ ಪುರ್ಲೆ ಅವರು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರ ಸಮ್ಮುಖದಲ್ಲಿ ಕ್ವೀನ್ಸ್ ರಸ್ತೆಯ ಕೆಪಿಸಿಸಿ ಕಚೇರಿಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಬುಧವಾರ ಸೇರ್ಪಡೆಯಾದರು.

ಎಸ್ ನಾರಾಯಣ್ ಹಲವು ದಿನಗಳಿಂದ ರಾಜಕೀಯ ಪಕ್ಷ ಸೇರಿಕೊಳ್ಳುವ ಆಸೆಯಲ್ಲಿದ್ದರು ಎನ್ನಲಾಗಿದೆ. ಇದರ ಜೊತೆಗೆ ಅವರು ಎಂದಿನಂತೆ ಚಿತ್ರರಂಗದಲ್ಲಿಯೂ ಸಕ್ರಿಯರಾಗಿದ್ದಾರೆ.

ನಿರ್ದೇಶಕ ಎಸ್.ನಾರಾಯಣ್ ಅವರು 50ನೇ ಸಿನಿಮಾ ಕೆಲಸದಲ್ಲಿದ್ದಾರೆ. ಇವರು ಮಾಡಿದ 49 ಸಿನಿಮಾಗಳಲ್ಲಿ 18 ಸಿನಿಮಾಗಳದು ನೂರು ದಿನಗಳ ಪ್ರದರ್ಶನ. 9 ಸಿನಿಮಾಗಳು 25 ವಾರಗಳ ಪ್ರದರ್ಶನ, 13 ಸಿನಿಮಾಗಳು 50 ದಿನಗಳ ಪ್ರದರ್ಶನ ಕಂಡಿವೆ. ‘ಚಂದ್ರಚಕೋರಿ’ 500 ದಿನಗಳ ಕಾಲ ನಿರಂತರ ಪ್ರದರ್ಶನ ಕಂಡಿದೆ. ನಟರೂ ಆಗಿರುವ ಎಸ್. ನಾರಾಯಣ್ ಸ್ಯಾಂಡಲ್ವುಡ್ನ ಶಿಸ್ತಿನ ಸಿಪಾಯಿ ಎನಿಸಿಕೊಂಡವರು.

ಹಿಂದಿನ ಲೇಖನಉಪ ತಹಶೀಲ್ದಾರ್ ಮನೆ ಮೇಲೆ ಎಸಿಬಿ ದಾಳಿ: 450 ಗ್ರಾಂ. ಚಿನ್ನ ಪತ್ತೆ
ಮುಂದಿನ ಲೇಖನಹಿಜಾಬ್ ಕುರಿತು ಹೈಕೋರ್ಟ್ ನೀಡಿರುವ ತೀರ್ಪು ಪ್ರಶ್ನಿಸಿ ಸಲ್ಲಿಸಿರುವ ಮೇಲ್ಮನವಿ  ತುರ್ತು ವಿಚಾರಣೆ ಇಲ್ಲ: ಸುಪ್ರೀಂಕೋರ್ಟ್