ಮನೆ ಆರೋಗ್ಯ ದೇಶದಲ್ಲಿ ಕೋವಿಡ್ ರೂಪಾಂತರಿ ಎಕ್ಸ್‌’ಬಿಬಿ 1.16 ತಳಿಯ 349 ಪ್ರಕರಣ ದೃಢ

ದೇಶದಲ್ಲಿ ಕೋವಿಡ್ ರೂಪಾಂತರಿ ಎಕ್ಸ್‌’ಬಿಬಿ 1.16 ತಳಿಯ 349 ಪ್ರಕರಣ ದೃಢ

0

ನವದೆಹಲಿ: ದೇಶದಲ್ಲಿ ಕೋವಿಡ್ ಪ್ರಕರಣಗಳ ಸಂಖ್ಯೆ ಹೆಚ್ಚಳವಾಗುತ್ತಿದ್ದು, ರೂಪಾಂತರಿ ಎಕ್ಸ್‌’ಬಿಬಿ 1.16 ತಳಿಯ 349 ಪ್ರಕರಣಗಳು ದೃಢಪಟ್ಟಿವೆ.

ಒಂಬತ್ತು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಕೋವಿಡ್-19ರ ರೂಪಾಂತರಿ ಎಕ್ಸ್‌’ಬಿಬಿ 1.16 ತಳಿಯ ಪ್ರಕರಣಗಳು ಪತ್ತೆಯಾಗಿದೆ. ಇದು ದೇಶದಲ್ಲಿ ಕೋವಿಡ್ ಪ್ರಕರಣ ಹೆಚ್ಚಳಕ್ಕೆ ಕಾರಣವಾಗಿರಬಹುದು ಎಂದು ಅಂದಾಜಿಸಲಾಗಿದೆ ಎಂದು ಕೇಂದ್ರ ಸರ್ಕಾರದ ವೈರಾಣು ಸಂರಚನೆ ವಿಶ್ಲೇಷಣೆ ಸಂಸ್ಥೆಯ (INSACOG) ಅಂಕಿಅಂಶ ತಿಳಿಸಿದೆ.

ಮಹಾರಾಷ್ಟ್ರದಲ್ಲಿ ಗರಿಷ್ಠ 105, ತೆಲಂಗಾಣದಲ್ಲಿ 93, ಕರ್ನಾಟಕದಲ್ಲಿ 61, ಗುಜರಾತ್‌ನಲ್ಲಿ 54ಎಕ್ಸ್‌’ಬಿಬಿ 1.16 ತಳಿಯ ಪ್ರಕರಣ ಪತ್ತೆಯಾಗಿವೆ.

ಜನವರಿಯಲ್ಲಿ ದೇಶದ ಮೊದಲ ಎಕ್ಸ್‌ಬಿಬಿ 1.16 ತಳಿಯ ಪ್ರಕರಣ ಪತ್ತೆಯಾಗಿತ್ತು. ಫೆಬ್ರುವರಿಯಲ್ಲಿ ಈ ಸಂಖ್ಯೆ 140ಕ್ಕೆ ಏರಿಕೆಯಾಗಿತ್ತು.

ದೇಶದಲ್ಲಿ ಗುರುವಾರ ಹೊಸದಾಗಿ 1,300 ಕೋವಿಡ್ ಪ್ರಕರಣಗಳು ದೃಢಪಟ್ಟಿವೆ. ಸಕ್ರಿಯ ಪ್ರಕರಣಗಳ ಸಂಖ್ಯೆ 7,605ಕ್ಕೆ ಏರಿಕೆಯಾಗಿವೆ.