ಮನೆ ಯೋಗಾಸನ ಈ ಯೋಗಾಸನಗಳು ಕಣ್ಣಿನ ದೃಷ್ಟಿಯನ್ನು ಉತ್ತಮಗೊಳಿಸುತ್ತವೆ

ಈ ಯೋಗಾಸನಗಳು ಕಣ್ಣಿನ ದೃಷ್ಟಿಯನ್ನು ಉತ್ತಮಗೊಳಿಸುತ್ತವೆ

0

ಸಾಮಾನ್ಯವಾಗಿ ಎಲ್ಲಾ ರೀತಿಯ ಆರೋಗ್ಯ ಸಮಸ್ಯೆಗಳಿಗೆ ಯೋಗದಲ್ಲಿ ಪರಿಹಾರ ಕಂಡುಕೊಳ್ಳಬಹುದಾಗಿದೆ. ಆಸನಗಳು, ಪ್ರಾಣಾಯಾಮ ಆರೋಗ್ಯ ವೃದ್ಧಿಸುವಲ್ಲಿ ಮಹತ್ವದ ಪಾತ್ರವಹಿಸುತ್ತವೆ.

ಮೈಕೈನೋವು, ಹೊಟ್ಟೆಗೆ ಸಂಬಂಧಿಸಿದ ಅನಾರೋಗ್ಯದಿಂದ ಹಿಡಿದು ಕಣ್ಣಿನ ದೃಷ್ಟಿ ಚುರುಕುಗೊಳಿಸುವವರೆಗೂ ಯೋಗಾಸನಗಳು ಸಹಾಯ ಮಾಡುತ್ತವೆ. ಆದರೆ ನೆನಪಿಡಿ ಯೊಗ ಮಾಡುವ ಮೊದಲು ಸರಿಯಾದ ತರಬೇತುದಾರರ ಬಳಿ ತರಬೇತಿಯನ್ನು ಪಡೆದುಕೊಳ್ಳಿ. ಇದರಿಂದ ಉತ್ತಮ ಪ್ರಯೋಜನವನ್ನು ಪಡೆಯಬಹುದು. ಇಲ್ಲವಾದರೆ ಅದರಿಂದ ಅಪಾಯವಾಗುವ ಸಾಧ್ಯತೆಗಳು ಇರುತ್ತವೆ.

ಅಧೋಮುಖಿಸ್ವನಾಸನ

ಈ ಆಸನವು ಭುಜ, ಕಾಲು, ಹಾಗೂ ಕೈಗಳಿಗೆ ಬಲವನ್ನು ನೀಡುತ್ತದೆ. ಜೊತೆಗೆ ಮುಖ್ಯವಾಗಿ ಕಣ್ಣಿಗೆ ಸಂಬಂಧಿಸಿದ ಸಮಸ್ಯೆಯನ್ನು ನಿವಾರಿಸುತ್ತದೆ. ಮುಟ್ಟಿನ ದಿನಗಳ ಸಮಸ್ಯೆಯನ್ನೂ ಕೂಡ ಈ ಅಧೋಮುಖಿಸ್ವನಾಸನ ನಿವಾರಣೆ ಮಾಡುತ್ತದೆ.

ಮಾಡುವ ವಿಧಾನ

• ಮೊದಲು ಕಾಲು ಮತ್ತು ಕೈಗಳನ್ನು ಅರ್ಧ ವೃತ್ತಾಕಾರದಲ್ಲಿ ಇರಿಸಿಕೊಳ್ಳುವ ಭಂಗಿಯಲ್ಲಿ ನಿಂತುಕೊಳ್ಳಿ.

• ಅಂಗೈಗಳನ್ನು ಭುಜಗಳ ಕೆಳಗೆ ಮತ್ತು ಮೊಣಕಾಲುಗಳನ್ನು ಸೊಂಟಕ್ಕೆ ಜೋಡಿಸಿ

• ಸಾಧ್ಯವಾದರೆ, ನಿಮ್ಮ ಹಿಮ್ಮಡಿಗಳನ್ನು ಕೆಳಕ್ಕೆ ತಳ್ಳಿರಿ ಅಥವಾ ಮಾರ್ಪಾಡುಗಳಾಗಿ ನಿಮ್ಮ ಮೊಣಕಾಲುಗಳನ್ನು ನಿಧಾನವಾಗಿ ಬಗ್ಗಿಸಬಹುದು

• ನಿಮ್ಮ ಕಣ್ಣುಗಳನ್ನು ಹೊಕ್ಕಳ ಮೇಲೆ ಕೇಂದ್ರೀಕರಿಸಿ.

• 1 ನಿಮಿಷವಾದರೂ ಅದೇ ಭಂಗಿಯಲ್ಲಿ ಉಸಿರಾಟವನ್ನು ಗಮನಿಸಿ. ನಂತರ ನಿಧಾನವಾಗಿ ಸಹಜ ಸ್ಥಿತಿ ಬನ್ನಿರಿ.

ಹಾಲಾಸನ

ಮಲಬದ್ಧತೆ, ಗ್ಯಾಸ್ಟ್ರಿಕ್ ಸಮಸ್ಯೆಗಳಿಗೆ ಹಾಲಾಸನ ಉತ್ತಮವಾಗಿದೆ. ಅದೇ ರೀತಿ ಮುಟ್ಟಿನ ಸಮಸ್ಯೆ ಇದ್ದರೆ, ರಕ್ತದೊತ್ತಡ ಸಮಸ್ಯೆ ಇದ್ದರೆ ಈ ಹಾಲಾಸನ ಪರಿಹಾರ ನೀಡುತ್ತದೆ. ಕಣ್ಣಿನ ಆರೋಗ್ಯವನ್ನು ಕಾಪಡುವಲ್ಲಿ ಹಾಲಾಸನ ಪ್ರಮುಖ ಪಾತ್ರವಹಿಸುತ್ತದೆ.

ಮಾಡುವ ವಿಧಾನ

• ಮೊದಲು ನಿಮ್ಮ ಬೆನ್ನಿನ ಮೇಲೆ ನೇರವಾಗಿ ಮಲಗಿಕೊಳ್ಳಿ.

• ನಂತರ ಕಾಲುಗಳನ್ನು ಎತ್ತಿ ನಿಧಾನವಾಗಿ ತಲೆಯ ಹಿಂದಕ್ಕೆ ಭಾಗಿಸಿ.

• ಸೊಂಟಕ್ಕೆ ನಿಮ್ಮ ಕೈಗಳ ಮೂಲಕ ಆಧಾರ ನೀಡಿ. ನಿಮ್ಮ ಕಣ್ಣುಗಳು ತೊಡೆಯ ಭಾಗವನ್ನು ನೋಡುತ್ತಿರಲಿ, ಜೊತೆಗೆ ಉಸಿರಾಟದ ಕಡೆಗೆ ಗಮನವಿರಲಿ.

ಸರ್ವಾಂಗಾಸನ

ಈ ಆಸನವು ಥೈರಾಯ್ಡ್ ಸಮಸ್ಯೆಗೆ ಉತ್ತಮ ಪರಿಹಾರವಾಗಿದೆ. ಅದೇ ರೀತಿ ಇಡೀ ದೇಹಕ್ಕೆ ರಕ್ತಸಂಚಾರವನ್ನು ಸರಾಗವಾಗಿ ಆಗುವಂತೆ ಮಾಡು ಬಾಡಿಯನ್ನು ಡಿಟಾಕ್ಸ್ ಮಾಡುತ್ತದೆ. ಅದೇ ರೀತಿ ಕಣ್ಣಿಗೆ ಕೂಡ ಆರೋಗ್ಯಕರ ಅನುಭವ ನೀಡುತ್ತದೆ.

ಮಾಡುವ ವಿಧಾನ

• ಮೊದಲು ಬೆನ್ನಿನ ಮೇಲೆ ನೇರವಾಗಿ ಮಲಗಿಕೊಳ್ಳಿ. ನಂತರ ಕೈಗಳನ್ನು ನೇರವಾಗಿ ಚಾಚಿ.

• ಬಳಿಕ ಕಾಲುಗಳನ್ನು ಮತ್ತು ಸೊಂಟವನ್ನು ನೆಲದಿಂದ ಮೇಲಕ್ಕೆತ್ತಿ

• ನಿಮ್ಮ ಅಂಗೈಗಳಿಂದ ನಿಮ್ಮ ಕೆಳಗಿನಿಂದ ಮಧ್ಯದ ಬೆನ್ನನ್ನು ಬೆಂಬಲಿಸಿ

• ನಿಮ್ಮ ಭುಜ, ಮುಂಡ, ಸೊಂಟ, ಕಾಲುಗಳು ಮತ್ತು ಪಾದಗಳನ್ನು ಜೋಡಿಸಲು ಪ್ರಯತ್ನಿಸಿ.

• ಗಲ್ಲವನ್ನು ನಿಮ್ಮ ಎದೆಗೆ ಹಿಡಿದಿಟ್ಟುಕೊಳ್ಳಿ ಮತ್ತು ನಿಮ್ಮ ಪಾದಗಳ ಕಡೆಗೆ ನೋಡಿ.

ಶೀರ್ಶಾಸನ

ಹೊಟ್ಟೆಗೆ ಸಂಬಂಧಿಸಿದ ಅನಾರೋಗ್ಯವನ್ನು ಸರಿಪಡಿಸಲು ಹಾಗೂ ಖಿನ್ನತೆ, ಆತಂಕವನ್ನು ದೂರ ಮಾಡಲು ಈ ಶೀರ್ಶಾಸನ ಉತ್ತಮವಾಗಿದೆ. ಇದು ತುಸು ಕಷ್ಟದ ಆಸನವಾಗಿದ್ದು ಹೆಚ್ಚಿನ ಮುಂಜಾಗೃತೆ ಅಗತ್ಯ. ಹೀಗಾಗಿ ತರಬೇತಿ ಪಡೆದ ಮೇಲೆ ಮಾತ್ರ ಪ್ರಯತ್ನಿಸಿ.

ಮಾಡುವ ವಿಧಾನ

• ಮೊದಲು ಹೊಟ್ಟೆಯ ಮೇಲೆ ನೇರವಾಗಿ ಮಲಗಿಕೊಳ್ಳಿ

• ಮೊಣಕೈಗಳನ್ನು ಕೆಳಗೆ ಇರಿಸುವ ಮೂಲಕ ಆಸನವನ್ನು ಪ್ರಾರಂಭಿಸಿ

• ಮೊದಲು ಅಂಗೈಗಳನ್ನು ಇಂಟರ್ಲಾಕ್ ಮಾಡಿ

• ತಲೆಯ ಕಿರೀಟವನ್ನು ನಿಮ್ಮ ಅಂಗೈಗಳ ಮುಂದೆ ಇರಿಸಿ. ಅಂಗೈಗಳು ನಿಮ್ಮ ತಲೆಯ ಹಿಂಭಾಗಕ್ಕೆ ಬೆಂಬಲವನ್ನು ಒದಗಿಸಬೇಕು.

• ಒಂದು ಕಾಲನ್ನು ಮೇಲಕ್ಕೆತ್ತಿ ನಂತರ ನಿಧಾನವಾಗಿ ಎರಡನೇ ಕಾಲನ್ನು ಮೇಲಕ್ಕೆತ್ತಿ

• ನಿಮ್ಮ ಕಾಲುಗಳನ್ನು ನೇರವಾಗಿ ಜೋಡಿಸಿ ಅಥವಾ ಅವುಗಳನ್ನು ಬಾಗಿಸಿ. ಸಾಧ್ಯವಾದಷ್ಟು ಹೊತ್ತು ಅದೇ ಭಂಗಿಯಲ್ಲಿರಿ. ನಂತರ ನಿಧಾನವಾಗಿ ಕಾಲುಗಳನ್ನು ಕೆಳಕ್ಕೆ ಇಳಿಸಿ.