ಮನೆ ರಾಜ್ಯ ಗ್ರಾಮೀಣ ಜನರ ಆರ್ಥಿಕ ಬವಣೆ ನಿವಾರಿಸುವಲ್ಲಿ ನರೇಗಾ: ಮನು ಬಿ.ಕೆ

ಗ್ರಾಮೀಣ ಜನರ ಆರ್ಥಿಕ ಬವಣೆ ನಿವಾರಿಸುವಲ್ಲಿ ನರೇಗಾ: ಮನು ಬಿ.ಕೆ

0

ಮೈಸೂರು:ಗ್ರಾಮೀಣ ಜನರ ಆರ್ಥಿಕ ಬವಣೆ ನಿವಾರಿಸುವ ನಿಟ್ಟಿನಲ್ಲಿ ನರೇಗಾ ಜಾರಿಗೊಂಡಿದೆ ಎಂದು ಕಾರ್ಯನಿರ್ವಾಹಕ ಅಧಿಕಾರಿಯವರಾದ ಮನು ಬಿ.ಕೆ ಅವರು ತಿಳಿಸಿದರು.

ಹುಣಸೂರು ತಾಲ್ಲೂಕಿನ ಆಯ್ದ ಗ್ರಾಮ ಪಂಚಾಯಿತಿಗಳಲ್ಲಿ ಜಿಲ್ಲಾ ಪಂಚಾಯಿತಿ ಮತ್ತು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಬೀದಿ ನಾಟಕ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು ನರೇಗಾ ಯೋಜನೆಯಲ್ಲಿರುವ ವೈಯಕ್ತಿಕ ಮತ್ತು ಸಮುದಾಯ ಕಾಮಗಾರಿಗಳ ಕುರಿತು ಜನರಲ್ಲಿ ಅರಿವು ಮೂಡಿಸಬೇಕು. ಇದರಿಂದ ಸಾಕಷ್ಟು ಭಾಗಗಳಲ್ಲಿ ಅನುಕೂಲವಾಗುತ್ತದೆ. ಗ್ರಾಮಸ್ಥರು ಈ ಯೋಜನೆಯನ್ನು ಸಮರ್ಪಕವಾಗಿ ಬಳಸಿಕೊಳ್ಳುವ ಮೂಲಕ ಯೋಜನೆಯ ಯಶಸ್ಸಿಗೆ ಸಹಕರಿಸಬೇಕು ಎಂದು ತಿಳಿಸಿದರು.

ಪ್ರಸ್ತುತ ನರೇಗಾ ಉದ್ಯೋಗ ಖಾತರಿ ಯೋಜನೆಯಲ್ಲಿ ಈ ಮುನ್ನ ಇದ್ದಂತಹ ಕೂಲಿ ಮೊತ್ತ ರೂ. 309 ರಿಂದ ರೂ. 316ಕ್ಕೆ ಏರಿಕೆಯಾಗಿದ್ದು, ವೈಯಕ್ತಿಕ ಕಾಮಗಾರಿಗಳಾದ ಜಾನುವಾರು ಕೊಟ್ಟಿಗೆ ನಿರ್ಮಾಣ, ಕೋಳಿ ಶೆಡ್, ಕುರಿ ಶೆಡ್, ಅಜೋಲಾ ತೊಟ್ಟಿ, ಎರೆಹುಳು ತೊಟ್ಟಿ ಅಷ್ಟೇ ಅಲ್ಲದೇ ತೋಟಗಾರಿಕೆ ಇಲಾಖೆಯಿಂದ ದೊರೆಯುವ ತೆಂಗು, ಬಾಳೆ, ಪಪ್ಪಾಯ, ಕರಬೇವು ಜೊತೆಗೆ ಭೌಗೋಳಿಕ ಬೆಳೆಗಳಾದ ನಂಜನಗೂಡು ರಸಬಾಳೆ, ಮೈಸೂರು ವೀಳ್ಯದೆಲೆ, ಮೈಸೂರು ಮಲ್ಲಿಗೆ, ಡ್ರ‍್ಯಾಗನ್ ಫ್ರ‍್ಯೂಟ್, ಗುಲಾಬಿ ಹಾಗೂ ರೇಷ್ಮೆ ಸೇರಿದಂತೆ ಇನ್ನಿತರೆ ಬೆಳೆ ಬೆಳೆಯುವುದಕ್ಕೂ ನರೇಗಾದಿಂದ ಅವಕಾಶವಿದೆ. ಕೂಲಿ ಕೆಲಸಕ್ಕಾಗಿ ಹೊರ ಜಿಲ್ಲೆಗಳಿಗೆ ತೆರಳದೇ ತಮ್ಮ ಪಂಚಾಯಿತಿ ವ್ಯಾಪ್ತಿಯಲ್ಲಿಯೇ ದೊರೆಯುವಂತಹ ಸಮುದಾಯ ಕಾಮಗಾರಿಗಳ ಮೂಲಕ ಉದ್ಯೋಗ ಪಡೆದುಕೊಳ್ಳಿರಿ ಎಂದು ಮಾಹಿತಿ ನೀಡಿದರು.

 ತಾಲ್ಲೂಕಿನ ಸಿಂಗರಮಾರನಹಳ್ಳಿ, ಕರೀಮುದ್ದನಹಳ್ಳಿ, ಉಯಿಗೊಂಡನಹಳ್ಳಿ, ಗುರುಪುರ, ಬೋಳನಹಳ್ಳಿ, ಬೀಜಗನಹಳ್ಳಿ, ಉದ್ದೂರು, ಮೂಕನಹಳ್ಳಿ, ಕಟ್ಟೆಮಳಲವಾಡಿ, ಮುಳ್ಳೂರು, ಕರ್ಣಕುಪ್ಪೆ, ಹನಗೋಡು, ಕಿರಂಗೂರು, ಹೆಗ್ಗಂದೂರು, ದೊಡ್ಡಹೆಜ್ಜೂರು ಹಾಗೂ ಕಡೇ ಮನುಗನಹಳ್ಳಿ ಗ್ರಾಮ ಪಂಚಾಯಿತಿಗಳಲ್ಲಿ ನರೇಗಾದಲ್ಲಿರುವಂತಹ ವೈಯಕ್ತಿಕ ಮತ್ತು ಸಮುದಾಯ ಕಾಮಗಾರಿಗಳ ಕುರಿತು ಗ್ರಾಮೀಣ ಭಾಷೆಯಲ್ಲಿ ಸ್ಪಂದನಾ ಮಹಿಳಾ ಕಲಾ ತಂಡ ಹಾಗೂ ಸಂಭ್ರಮ ಮಹಿಳಾ ಕಲಾ ತಂಡದವರಿಂದ ಬೀದಿ ನಾಟಕ ಮಾಡುವ ಮೂಲಕ ಜನರಲ್ಲಿ ಅರಿವು ಮೂಡಿಸಲಾಯಿತು.