ಮನೆ ದೇವರ ನಾಮ ಹರಿ ನಿನ್ನೊಲುಮೆ ಆಗುವ ತನಕ ಅರಿತು

ಹರಿ ನಿನ್ನೊಲುಮೆ ಆಗುವ ತನಕ ಅರಿತು

0

ರಚನೆ : ಶ್ರೀ ಪುರಂದರ ವಿಠ್ಠಲ

ಹರಿ ನಿನ್ನೊಲುಮೆ ಆಗುವ ತನಕ

ಅರಿತು ಸುಮ್ಮನಿರುವುದೇ ಲೇಸು ||ಪ||

ಮರಳಿ ಮರಳಿ ತಾ ಪಡೆಯದ ಭಾಗ್ಯಕೆ

ಹೊರಳಿ ಹೊರಳಿ ಅತ್ತರೆ ಬಂದೀತೆ ||ಅ.ಪ||

ದೂರು ಬರುವ ತೆರ ನಂಬಿಕೆ ಕೊಟ್ಟರೆ |

ದುರ್ಜನ ಬರುವುದು ತಪ್ಪಿತೆ |

ದೂರದಿ ನಿಂತು ಮೊರೆಯಿಟ್ಟು ಕೂಗಲು|

ಚೋರರಿಗೆ ದಯ ಪುಟ್ಟಿತೆ||೧||

ಬಾರಿ ಬಾರಿಗೆ ಪತಿವೃತತನ ಬೋಧಿಸೆ |

ಜಾರೆಗದರ ನಿಜ ಸೊಗಸೀತೆ |

ಊರು ಬಿಟ್ಟು ಪರ ಊರಿಗೆ ಹೋದರೆ |

ಪ್ರಾರಬ್ದವು ಬೇರಾದೀತೆ||೨||

ಪಟ್ಟೆ ಮಂಚ ತಿರುವಿಟ್ಟರೆ ಫಣೆಯೊಳು |

ಹುಟ್ಟಿದ ಭ್ರಮೆಯ ಬಿಟ್ಟೀತೆ|

ಹೊಟ್ಟೆಲಿ ಸುತರಿಲ್ಲೆಂದತ್ತು ಕರೆದರೆ |

ಹುಟ್ಟು ಬಂಜೆಗೆ ಮಕ್ಕಳಾದೀತೆ||೩||

ಬೆಟ್ಟದ ನವಿಲಿಗೆ ಕಣ್ಣೀರು ಬಂದರೆ |

ಬೇಟೆಗಾರನಿಗೆ ದಯ ಪುಟ್ಟೀತೆ |

ಕೆಟ್ಟ ಹಾವು ಕಚ್ಚಿದ ಗಾಯಕ್ಕೆ ಹಳೆ |

ಬತ್ತೆಯೊರಸೆ ವಿಷ ಹೋದೀತೆ||೪||

ಧನಿಕರ ಕಂಡು ದೈನ್ಯವ ಪಟ್ಟರೆ |

ತನ್ನ ದ್ರಾರಿದ್ರ್ಯವು ಹಿಂಗೀತೆ|

ಎಣಿಸಿಕೊಂಡೇಳಹಂಜಿಯ ನೂತರೆ |

ಮಣಿಯದ ಸಾಲವು ತೀರೀತೆ ||೫||

ಮುನಿಸಿಂದ ಬೈದಾಡುತಲಿದ್ದರೆ |

ಮುರಹರ ಭಜನೆಯು ಆದೀತೇ|

ಅನುದಿನ ನಮ್ಮ ಪುರಂದರ ವಿಠ್ಠಲನ |

ನೆನೆದಲ್ಲದೆ ಭವ ಹಿಂಗೀತೇ||೬||

ಹಿಂದಿನ ಲೇಖನಗ್ರಾಮೀಣ ಜನರ ಆರ್ಥಿಕ ಬವಣೆ ನಿವಾರಿಸುವಲ್ಲಿ ನರೇಗಾ: ಮನು ಬಿ.ಕೆ
ಮುಂದಿನ ಲೇಖನಖಾಲಿ ಹೊಟ್ಟೆಯಲ್ಲಿ ಧ್ಯಾನ ಮಾಡಬಹುದೇ?