ಮನೆ ಕಾನೂನು 50 ಸಾವಿರ ಲಂಚ ಸ್ವೀಕಾರ: ಎಸ್ ಐ ಶಿವಕುಮಾರ್ ಗೆ 3 ವರ್ಷ ಜೈಲು, 25...

50 ಸಾವಿರ ಲಂಚ ಸ್ವೀಕಾರ: ಎಸ್ ಐ ಶಿವಕುಮಾರ್ ಗೆ 3 ವರ್ಷ ಜೈಲು, 25 ಸಾವಿರ ರೂ. ದಂಡ

0

ಆರೋಪಿಯಿಂದ ಲಂಚ ಸ್ವೀಕರಿಸುವ ವೇಳೆ ಎಸಿಬಿ ಬಲೆಗೆ ಬಿದ್ದ ಎಸ್ ಐ ಗೆ ಮೂರು ವರ್ಷ ಜೈಲು ಹಾಗೂ 25 ಸಾವಿರ ರೂ ದಂಡ ವಿಧಿಸಿ ಸಿಟಿ ಸಿವಿಲ್ ಕೋರ್ಟ್ ಆದೇಶಿಸಿದೆ.
ಬಿಎಂಟಿಎಫ್ ಠಾಣೆಯ ಎಸ್ ಐ ಶಿವಕುಮಾರ್ ಎಂಬುವವರೇ ಶಿಕ್ಷೆಗೆ ಒಳಗಾದವರು.
2018 ರಲ್ಲಿ ಪ್ರಕರಣದ ಆರೋಪಿಯನ್ನು ಆರೋಪ ಮುಕ್ತಗೊಳಿಸಲು 80 ಸಾವಿರ ರೂ ಬೇಡಿಕೆ ಇಟ್ಟು 50 ಸಾವಿರ ರೂ. ಗಳನ್ನು ಗುಮಾಸ್ತನ ಮೂಲಕ ಪಡೆಯುವಾಗ ಎಸಿಬಿಗೆ ಸಿಕ್ಕಿ ಬಿದ್ದಿದ್ದರು.
ಈ ಕುರಿತು ಎಸಿಬಿ ಪೋಲಿಸರು ತನಿಖೆ ನಡೆಸಿ, ೨೦೨೧ ರಲ್ಲಿ ದೋಷಾರೋಪ ಪಟ್ಟಿ ಸಲ್ಲಿಸಿದ್ದರು. ಈಗ ನ್ಯಾಯಾಲಯವು ಪ್ರಕರಣಕ್ಕೆ ಸಂಬಂಧಿಸಿದಂತೆ ತೀರ್ಪನ್ನು ಪ್ರಕಟಿಸಿದೆ.