ಮನೆ ರಾಜಕೀಯ ಏಪ್ರಿಲ್​ 8 ರಂದು ಸಂಸದೀಯ ಮಂಡಳಿ ಸಭೆಯಲ್ಲಿ ಪಟ್ಟಿ ಅಂತಿಮಗೊಳಿಸಲಾಗುವುದು: ಸಿಎಂ ಬೊಮ್ಮಾಯಿ

ಏಪ್ರಿಲ್​ 8 ರಂದು ಸಂಸದೀಯ ಮಂಡಳಿ ಸಭೆಯಲ್ಲಿ ಪಟ್ಟಿ ಅಂತಿಮಗೊಳಿಸಲಾಗುವುದು: ಸಿಎಂ ಬೊಮ್ಮಾಯಿ

0

ಬೆಂಗಳೂರು: ಇಂದು ಮತ್ತು ನಾಳೆ ಪಟ್ಟಿಯನ್ನು ಮತ್ತೊಮ್ಮೆ ಪರಿಶೀಲಿಸಿ ಹೈಕಮಾಂಡ್ ಗೆ ಕಳುಹಿಸಿಕೊಡಲಿದ್ದು, ಏಪ್ರಿಲ್​ 8 ರಂದು ಸಂಸದೀಯ ಮಂಡಳಿ ಸಭೆಯಲ್ಲಿ ಪಟ್ಟಿಯನ್ನು ಅಂತಿಮಗೊಳಿಸಲಾಗುತ್ತದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.

Join Our Whatsapp Group

ಆರ್.ಟಿ ನಗರ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇಂದು ರಾಜ್ಯ ಸಮಿತಿ ಸಭೆ ಇದೆ. ಎರಡು ದಿನ ಸಭೆ ಮಾಡುತ್ತೇವೆ. ಮೊನ್ನೆ ಎರಡು ದಿನ ಮಾಡಿದ ಚರ್ಚೆಯ ಮುಂದುವರೆದ ಭಾಗ ಇದಾಗಿದ್ದು, ಮತ್ತೊಮ್ಮೆ ಪಟ್ಟಿಯನ್ನು ಪರಿಶೀಲನೆ ಮಾಡಿ ಕೇಂದ್ರಕ್ಕೆ ಕಳಿಸಲಾಗುತ್ತದೆ, ಏಪ್ರಿಲ್​ 8 ರಂದು ಕೇಂದ್ರ ಸಂಸದೀಯ ಮಂಡಳಿ ಸಭೆಯಲ್ಲಿ ಚರ್ಚೆಯಾಗಿ ಅಂತಿಮ ಪಟ್ಟಿ ಹೊರಬರಲಿದೆ ಎಂದರು.

ಕಳೆದ ಮೂರು ನಾಲ್ಕು ತಿಂಗಳ ಬೆಳವಣಿಗೆ ಗಮನಿಸದಾಗ ಸಂಪೂರ್ಣ ಬಹುಮತ ಬರುವ ಎಲ್ಲ ಲಕ್ಷಣ ಇವೆ. ಕಾರ್ಯಕರ್ತರು ಮತ್ತು ನಾಯಕರು ಆತ್ಮವಿಶ್ವಾಸದದಲ್ಲಿದ್ದಾರೆ. ಟಿಕೆಟ್ ಕೊಡುವ ವ್ಯವಸ್ಥೆ ಕೂಡ ಪ್ರಜಾಪ್ರಭುತ್ವ ವ್ಯವಸ್ಥೆಯಂತೆ ಮಾಡಲಾಗಿದೆ. ಸ್ಥಳೀಯ ನಾಯಕರ, ಪ್ರಮುಖರ ಅಭಿಪ್ರಾಯ ಪಡೆದು ಗ್ರೌಂಡ್ ರಿಯಾಲಿಟಿ ಮೇಲೆ ಆಕಾಂಕ್ಷಿಗಳ ಪಟ್ಟಿ ಸಿದ್ದ ಮಾಡಲಾಗಿದೆ. ಸರಳವಾಗಿ ಟಿಕೆಟ್ ಹಂಚಿಕೆ ಆಗಲಿದೆ ಎಂದರು.

ಖಾಸಗಿ ಚಾನಲ್ ಸಂದರ್ಶನದಲ್ಲಿ ಮತ್ತೆ ಸಿಎಂ ಆಗುವ ಆಸೆಯನ್ನು ಸಿದ್ದಾರಾಮಯ್ಯ ಹೊರಹಾಕಿದ್ದಾರೆ. ಜನರ ಪಲ್ಸ್ ನಮ್ಮ ಪರವಿದೆ ಎಂದಿದ್ದಾರೆ. ಆದರೆ, ಅವರು ಭವಿಷ್ಯಗಾರರಲ್ಲಿ ಜನರ ನಾಡಿ ಮಿಡಿತ ಏನು ಎಂದು ಗೊತ್ತಾಗಲ್ಲ, ಫಲಿತಾಂಶ ಬಂದ ನಂತರವೇ ಜನರ ಪಲ್ಸ್ ಏನಿದೆ ಎಂದು ಗೊತ್ತಾಗುವುದು. ಜನರ ಬೆಂಬಲ ಇದ್ದರೆ ಮಾತ್ರ ಶಾಸಕರಾಗಲಿದ್ದಾರೆ ಇಲ್ಲದಿದ್ದಲ್ಲಿ ಇಲ್ಲ ಹಾಗಾಗಿ ಸಿದ್ದರಾಮಯ್ಯ ಏನು ಹೊಸದಾಗಿ ಹೇಳಿಲ್ಲ. ಅಲ್ಲದೆ, ಕಾಂಗ್ರೆಸ್ ಅಧಿಕಾರಕ್ಕೇ ಬರಲ್ಲ, ಇಲ್ಲದೇ ಇರುವ ಸ್ಥಾನಕ್ಕೆ ಇಬ್ಬರು ಕಿತ್ತಾಡುತ್ತಿದ್ದಾರೆ. ಇದು ಬಹಳ ಸ್ಪಷ್ಟವಾಗಿದೆ. ಮುಖ್ಯಮಂತ್ರಿ ಆಗಲು ಈ ಹೋರಾಟ ನಡೆಯುತ್ತಿದೆ. ರಾಜ್ಯದ ಜನತೆಗೆ ಒಳ್ಳೆಯದು ಮಾಡಲು ಅವರು ಅಧಿಕಾರಕ್ಕೆ ಬರಲು ಯತ್ನಿಸುತ್ತಿಲ್ಲ. ಹಾಗಾಗಿ ಸಿದ್ದರಾಮಯ್ಯ ಹೆಳಿಕೆ ಆಶ್ವರ್ಯಕರವಲ್ಲ ಅವರ ಅಂತರಂಗದಲ್ಲಿ ನಡೆಯುತ್ತಿರುವುದರ ಪ್ರತಿಬಿಂಬವೇ ಅವರ ಹೇಳಿಕೆ ಎಂದು ಟಾಂಗ್​ ನೀಡಿದ್ದಾರೆ.

ಡಿಕೆ ಶಿವಕುಮಾರ್ ಮತ್ತು ಸಿದ್ದರಾಮಯ್ಯ ಇಬ್ಬರೂ ಮುಖ್ಯಮಂತ್ರಿ ಸ್ಥಾನದ ಕನಸು ಕಾಣುತ್ತಿದ್ದಾರೆ. ಆದರೆ ಅವರ ಕನಸು ನನಸಾಗಲ್ಲ ಎಂದು ಹೇಳಿದರು.

ಶಿವಮೊಗ್ಗದಲ್ಲಿ ಎಂಎಲ್ಸಿ ಆಯನೂರು ಮಂಜುನಾಥ್ ಬಂಡಾಯ ಹಾಗೂ ಕೆಲ ಶಾಸಕರು ಪಕ್ಷ ಬಿಟ್ಟು ಹೋಗುತ್ತಿರುವ ವಿಚಾರದ ಕುರಿತು ಪ್ರತಿಕ್ರಿಯೆ ನೀಡಿ, ನಮ್ಮ ಪಕ್ಷದಲ್ಲಿ 125 ಶಾಸಕರಿದ್ದಾರೆ. ಅದರಲ್ಲಿ ಕೆಲವು ಕಡೆ ಇಬ್ಬರು ಆಕಾಂಕ್ಷಿಗಳು ಇದ್ದಾರೆ. ಅಲ್ಲಿ ಸೀಟು ಸಿಗುವುದಿಲ್ಲ ಎಂದು ಕೆಲವರು ಪಕ್ಷ ಬಿಟ್ಟು ಹೋಗಿದ್ದಾರಷ್ಟೇ. ಇದರಿಂದ ಬಿಜೆಪಿಯ ಚುನಾವಣೆ ಮೇಲೆ ಯಾವುದೇ ಪರಿಣಾಮ ಆಗುವುದಿಲ್ಲ. ಬಿಜೆಪಿಯಿಂದ ಮತ್ತೆ ಯಾರು ಹೋಗುವುದಿಲ್ಲ. ಸುಮ್ಮನೆ ಡಿಕೆ ಶಿವಕುಮಾರ್ ಹೆಸರುಗಳನ್ನು ಬಿಡುತ್ತಿದ್ದಾರೆ ಅಷ್ಟೆ ಎಂದರು.