ಮನೆ ಅಂತಾರಾಷ್ಟ್ರೀಯ ಅರುಣಾಚಲ ಪ್ರದೇಶ ರಾಜ್ಯವು ಭಾರತದ ಅವಿಭಾಜ್ಯ ಭಾಗ: ಚೀನಾಗೆ ಭಾರತ ತಿರುಗೇಟು

ಅರುಣಾಚಲ ಪ್ರದೇಶ ರಾಜ್ಯವು ಭಾರತದ ಅವಿಭಾಜ್ಯ ಭಾಗ: ಚೀನಾಗೆ ಭಾರತ ತಿರುಗೇಟು

0

ನವದೆಹಲಿ: ಅರುಣಾಚಲ ಪ್ರದೇಶದ ಕೆಲವು ಸ್ಥಳಗಳ ಚೀನಾ ಮರುನಾಮಕರಣವನ್ನು ಭಾರತ ಸರ್ಕಾರ ಮಂಗಳವಾರ ಸಾರಾಸಗಟಾಗಿ ತಿರಸ್ಕರಿಸಿದ್ದು, ಅರುಣಾಚಲ ಪ್ರದೇಶ ರಾಜ್ಯವು ಭಾರತದ ಅವಿಭಾಜ್ಯ ಮತ್ತು ಬೇರ್ಪಡಿಸಲಾಗದ ಭಾಗವಾಗಿದೆ ಎಂದು ಪ್ರತಿಪಾದಿಸಿದೆ.

Join Our Whatsapp Group

ಅರುಣಾಚಲ ಪ್ರದೇಶವು ಭಾರತದ ಅವಿಭಾಜ್ಯ ಅಂಗ ಎಂದು ತಿರುಗೇಟು ನೀಡಿದೆ.ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ಅರಿಂದಮ್‌ ಬಾಗ್ಚಿ ಅವರು, ನಾವು ಈ ರೀತಿಯ ಹಲವು ವರದಿಗಳನ್ನು ನೋಡಿದ್ದೇವೆ. ಚೀನಾ ಇಂತಹ ಪ್ರಯತ್ನ ಮಾಡಿದ್ದು ಇದೇ ಮೊದಲೇನಲ್ಲ. ನಾವು ಇದನ್ನು ಸಾರಾಸಗಟಾಗಿ ತಿರಸ್ಕರಿಸುತ್ತಿದ್ದೇವೆ. ಅರುಣಾಚಲ ಪ್ರದೇಶವು ಈ ಹಿಂದೆ, ಈಗ ಹಾಗೂ ಎಂದೆಂದೂ ಭಾರತದ ಅವಿಭಾಜ್ಯ ಹಾಗೂ ಬೇರ್ಪಡಿಸಲಾಗದ ಭಾಗ. ಹೊಸದಾಗಿ ಸೃಷ್ಟಿಸಿದ ಹೆಸರುಗಳನ್ನು ಇಡುವುದರಿಂದ ವಾಸ್ತವ ಬದಲಾಗುವುದಿಲ್ಲ ಎಂದು ಸ್ಪಷ್ಟವಾಗಿ ಹೇಳಿದ್ದಾರೆ.

ಐದು ಶಿಖರಗಳು, ಎರಡು ಭೂ ಪ್ರದೇಶಗಳು, ಎರಡು ವಸತಿ ಪ್ರದೇಶಗಳು ಮತ್ತು ಎರಡು ನದಿಗಳ ಹೆಸರನ್ನು ಬದಲಿಸಿ ಚೀನಾ ಪಟ್ಟಿ ಬಿಡುಗಡೆ ಮಾಡಿದೆ ಎಂದು ‘ಗ್ಲೋಬಲ್ ಟೈಮ್ಸ್‌’ ಸೋಮವಾರ ವರದಿ ಮಾಡಿತ್ತು.ಅರುಣಾಚಲ ಪ್ರದೇಶದ ಸ್ಥಳಗಳ ಹೆಸರುಗಳನ್ನು ಬದಲಿಸುತ್ತಿರುವುದು ಇದು ಮೂರನೇ ಬಾರಿ. 2018 ಹಾಗೂ 2021ರಲ್ಲಿಯೂ ಇಂತಹದೇ ಪಟ್ಟಿಯನ್ನು ಬಿಡುಗಡೆ ಮಾಡಿತ್ತು.