ಮನೆ ಮಠ ಬಸವಣ್ಣ ಸಿದ್ದಾಂತಕ್ಕೆ  ಅಪಚಾರವಾದ್ರೆ ಸಹಿಸಲ್ಲ: ಜಯಮೃತ್ಯುಂಜಯ ಸ್ವಾಮೀಜಿ

ಬಸವಣ್ಣ ಸಿದ್ದಾಂತಕ್ಕೆ  ಅಪಚಾರವಾದ್ರೆ ಸಹಿಸಲ್ಲ: ಜಯಮೃತ್ಯುಂಜಯ ಸ್ವಾಮೀಜಿ

0

ಹುಬ್ಬಳ್ಳಿ,(Hubballi):  ಶಾಲಾ ಪಠ್ಯದಲ್ಲಿ ಜಗಜ್ಯೋತಿ ಬಸವಣ್ಣ ಅವರ ಬಗ್ಗೆ ತಪ್ಪು ಮಾಹಿತಿ ನೀಡಲಾಗಿದೆ ಎಂಬ ಆರೋಪ ಕೇಳಿ ಬಂದಿದ್ದು, ಬಸವಣ್ಣ ಸಿದ್ದಾಂತಕ್ಕೆ  ಅಪಚಾರವಾದ್ರೆ ಸಹಿಸಲ್ಲ ಎಂದು ಜಯಮೃತ್ಯುಂಜಯ ಸ್ವಾಮೀಜಿ ಎಚ್ಚರಿಕೆ ನೀಡಿದ್ದಾರೆ.

ಹುಬ್ಬಳ್ಳಿಯಲ್ಲಿ ಈ ಕುರಿತು ಮಾತನಾಡಿರುವ ಜಯಮೃತ್ಯುಂಜಯ ಸ್ವಾಮೀಜಿಗಳು, ಬಸವಣ್ಣನವರ ಉದ್ದೇಶವನ್ನ ದಾರಿ ತಪ್ಪಿಸಲಾಗುತ್ತಿದೆ. ಕರ್ನಾಟಕದ ಆತ್ಮ ಬಸವಣ್ಣ, ಪ್ರಾಣ ಕುವೆಂಪು. ಬಸವಣ್ಣ  ಮತ್ತು ಕುವೆಂಪು ಅವರ ತತ್ವಕ್ಕ ಅಪಪ್ರಚಾರ ಮಾಡಲಾಗುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಪಠ್ಯ ಪುಸ್ತಕದಲ್ಲಿನಲೋಪ ಸರಿಪಡಿಸಬೇಕು.  ಸಿಎಂ ಬೊಮ್ಮಾಯಿಗೆ ಶಾಶ್ವತ ಅಧಿಕಾರ ವಿಲ್ಲ  ಬಸವಣ್ಣ ತತ್ವಕ್ಕೆ ಅಪಪ್ರಚಾರವಾದಾಗ ಮೌನವಾಗಿರಬೇಡಿ. ಅಧಿಕಾರಕ್ಕಾಗಿ ಮೌನವಾಗಿರಲು ಪ್ರಯತ್ನಿಸಬೇಡಿ.  ಇದು ಬಸವಭಕ್ತರಿಗೆ ಅನ್ಯಾಯ ಮಾಡಿದಂತಾಗುತ್ತದೆ ಎಂದು ಜಯಮೃತ್ಯುಂಜಯ ಸ್ವಾಮೀಜಿ ಹರಿಹಾಯ್ದರು.

ಹಿಂದಿನ ಲೇಖನಭವಿಷ್ಯದಲ್ಲಿ ಭಗವಾಧ್ವಜವೇ ರಾಷ್ಟ್ರಧ್ವಜವಾಗಬಹುದು: ಕೆ.ಎಸ್.ಈಶ್ವರಪ್ಪ
ಮುಂದಿನ ಲೇಖನನಾಡಗೀತೆಗೆ ಅವಮಾನ ಮಾಡಿಲ್ಲ: ರೋಹಿತ್ ಚಕ್ರತೀರ್ಥ