ಮನೆ ಶಿಕ್ಷಣ ಮೈಸೂರಿನ ಎಸ್.ವಿ.ಇ.ಐ ನರ್ಸರಿ ಶಾಲೆಯಲ್ಲಿ ಪುಟ್ಟ ಮಕ್ಕಳ ಘಟಿಕೋತ್ಸವ ಸಮಾರಂಭ

ಮೈಸೂರಿನ ಎಸ್.ವಿ.ಇ.ಐ ನರ್ಸರಿ ಶಾಲೆಯಲ್ಲಿ ಪುಟ್ಟ ಮಕ್ಕಳ ಘಟಿಕೋತ್ಸವ ಸಮಾರಂಭ

0

ಮೈಸೂರು:  ಇಲ್ಲಿನ ಜಯಲಕ್ಷ್ಮೀಪುರಂನ ಎಸ್.ವಿ.ಇ.ಐ. ನರ್ಸರಿ ಶಾಲೆಯ ಪುಟ್ಟ ಮಕ್ಕಳ ಘಟಿಕೋತ್ಸವ ಸಮಾರಂಭದಲ್ಲಿ ಯುಕೆಜಿ ಮಕ್ಕಳಿಗೆ ಪ್ರಮಾಣ ಪತ್ರ ವಿತರಿಸಲಾಯಿತು.

Join Our Whatsapp Group

ಸಮಾರಂಭದ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಮಾತನಾಡಿದ ಎಸ್‌ಜೆಸಿಇ ಕಾಲೇಜಿನ ಸಹಾಯಕ ಪ್ರಾಧ್ಯಾಪಕ ಡಾ.ಮಂಜುನಾಥರವರು, ಪುಟ್ಟ ಮಕ್ಕಳಿಗೆ ಶುಭಾಶಯಕೋರಿದರು.

ಸಂಸ್ಥೆಯ ಕಾರ್ಯದರ್ಶಿ ಬಿ.ಶಿವಲಿಂಗಪ್ಪ ಅಧ್ಯಕ್ಷತೆ ವಹಿಸಿದ್ದರು. ಸಂಸ್ಥೆಯ ಅಧಕ್ಷ ಡಾ.ಎಂ.ಕೆ.ಪೋಥರಾಜ್, ನಿರ್ದೇಶಕಿ ಶೋಭಾರಾಜಶೇಖರ್, ಸಮಿತಿಯ ಸದಸ್ಯೆ ನಾಗರತ್ನ ಶಿವಲಿಂಗಪ್ಪ, ಮುಖ್ಯೋಪಾಧ್ಯಾಯಿನಿ ಬೀನಾ ಮ್ಯಾಥ್ಯು ಉಪಸ್ಥಿತರಿದ್ದರು.

ಶಾಲಾ ಮಕ್ಕಳಿಂದ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು. ಮಕ್ಕಳು ಪ್ರಸ್ತುತ ಪಡಿಸಿದ ದೇವೀ ಸ್ತುತಿ, ಭಗವದ್ಗೀತೆ, ಹನುಮಾನ್ ಚಾಲೀಸ, ಜಾನಪದ ನೃತ್ಯಗಳು ಗಮನ ಸೆಳೆದವು.