ಮನೆ ರಾಷ್ಟ್ರೀಯ ಸಿಕ್ಕಿಂನ ನಾತುಲಾ ಗಡಿಯಲ್ಲಿ ಭಾರಿ ಹಿಮಪಾತ: 6 ಪ್ರವಾಸಿಗರ ಸಾವು

ಸಿಕ್ಕಿಂನ ನಾತುಲಾ ಗಡಿಯಲ್ಲಿ ಭಾರಿ ಹಿಮಪಾತ: 6 ಪ್ರವಾಸಿಗರ ಸಾವು

0

ಗ್ಯಾಂಗ್ಟಕ್: ಸಿಕ್ಕಿಂ ರಾಜ್ಯದ ನಾತುಲಾ ಗಡಿಯಲ್ಲಿ ಭಾರಿ ಹಿಮ ಕುಸಿತ ಸಂಭವಿಸಿದ್ದು, 6 ಪ್ರವಾಸಿಗರು ಮೃತಪಟ್ಟಿದ್ದು, 80ಕ್ಕೂ ಅಧಿಕ ಮಂದಿ ಹಿಮದಡಿ ಸಿಲುಕಿರುವ ಸಾಧ್ಯತೆ ಇದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Join Our Whatsapp Group

11 ಮಂದಿ ಗಾಯಗೊಂಡಿದ್ದು, ಅವರನ್ನು ರಾಜಧಾನಿ ಗ್ಯಾಂಗ್‌ ಟಕ್‌ ನ ಆಸ್ಪತ್ರೆಗೆ ದಾಖಲಿಸಲಾಗಿದೆ.

ಮಂಗಳವಾರ ಮಧ್ಯಾಹ್ನ 12:20ರ ಸುಮಾರಿಗೆ ಗ್ಯಾಂಗ್‌ ಟಕ್‌ ನಿಂದ ನಾಥುಲಾ ಪಾಸ್‌ ಗೆ ಸಂಪರ್ಕ ಕಲ್ಪಿಸುವ ಜವಾಹರಲಾಲ್ ನೆಹರು ರಸ್ತೆಯ 15ನೇ ಮೈಲಿಯಲ್ಲಿ ಹಿಮ ಕುಸಿತ ಸಂಭವಿಸಿದೆ.

ಹಿಮದಡಿ ಸಿಲುಕಿರುವವರ ರಕ್ಷಣೆ ಮತ್ತು ರಸ್ತೆ ತೆರವು ಮಾಡುವ ಕಾರ್ಯ ನಡೆಯುತ್ತಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.

ಭಾರತ ಮತ್ತು ಚೀನಾ ಗಡಿಯಲ್ಲಿ ಬರುವ ನಾಥುಲಾ ಪಾಸ್, ಪ್ರಾಕೃತಿಕ ಸೌಂದರ್ಯದಿಂದಾಗಿ ಪ್ರಮುಖ ಪ್ರವಾಸಿ ತಾಣವಾಗಿದೆ.