ಬೀದರ್: ದಾಖಲೆಗಳು ಇಲ್ಲದೆ ಸಾಗಾಟ ಮಾಡುತ್ತಿದ್ದ 142 ಕೆ.ಜಿ ಬೆಳ್ಳಿ ಗುರುವಾರ ರಾತ್ರಿ ಔರಾದ ತಾಲೂಕಿನ ವನಮಾರಪಳ್ಳಿ ಚೆಕ್ ಪೋಸ್ಟ್ ನಲ್ಲಿ ವಶ ಪಡಿಸಿಕೊಳ್ಳಲಾಗಿದೆ.
ಅನೀಲ್, ಗಜಾನಂದ, ರಾಹುಲ್ ಮೂವರು ಬೆಳ್ಳಿ ಸಾಗಾಟ ಮಾಡುತ್ತಿದ್ದರೂ ಚೆಕ್ ಪೋಸ್ಟ್ ಅಧಿಕಾರಿಗಳು ವಿಚಾರಣೆ ಮಾಡುವಾಗ ಸರಿಯಾದ ರೀತಿಯಲ್ಲಿ ಉತ್ತರ ನೀಡಿಲ್ಲ ಹಾಗೂ ದಾಖಲೆಗಳು ಇಲ್ಲದೆ ಇರುವುದರಿಂದ 1.5ಕೋಟಿ ಮೌಲ್ಯದ ಬೆಳ್ಳಿ ವಶ ಪಡಿಸಿಕೊಂಡು ಸರಿಯಾದ ದಾಖಲೆಗಳು ನೀಡುವಂತೆ ತಿಳಿಸಲಾಗಿದೆ.
ಔರಾದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.