ಮನೆ ಕಾನೂನು ಚೆಕ್ ಅಮಾನ್ಯ ಪ್ರಕರಣ: ಲೀಗಲ್ ನೋಟೀಸ್ ನಲ್ಲಿ ಈ ಒಂದು ವಾಕ್ಯ ಇಲ್ಲದಿದ್ದರೆ ಕೇಸ್ ಕಾನೂನು...

ಚೆಕ್ ಅಮಾನ್ಯ ಪ್ರಕರಣ: ಲೀಗಲ್ ನೋಟೀಸ್ ನಲ್ಲಿ ಈ ಒಂದು ವಾಕ್ಯ ಇಲ್ಲದಿದ್ದರೆ ಕೇಸ್ ಕಾನೂನು ಮಾನ್ಯತೆ ಕಳೆದುಕೊಳ್ಳಲಿದೆ

0
ಚೆಕ್ ಅಮಾನ್ಯ ಪ್ರಕರಣ: ಲೀಗಲ್ ನೋಟೀಸ್ ನಲ್ಲಿ ಈ ಒಂದು ವಾಕ್ಯ ಇಲ್ಲದಿದ್ದರೆ ಕೇಸ್ ಕಾನೂನು ಮಾನ್ಯತೆ ಕಳೆದುಕೊಳ್ಳಲಿದೆ








ಚೆಕ್ ಅಮಾನ್ಯ ಪ್ರಕರಣದಲ್ಲಿ ಲೀಗಲ್ ನೋಟೀಸ್ ಕಡ್ಡಾಯವಾಗಿ ನೀಡಲೇ ಬೇಕಾದ ಕಾನೂನು ಪ್ರಕ್ರಿಯೆ. ಚೆಕ್ ಅಮಾನ್ಯಗೊಂಡ ದಿನದಿಂದ 30 ದಿನದೊಳಗಾ ಚೆಕ್ ನೀಡಿದವರಿಗೆ ದೂರುದಾರರು ತಮ್ಮ ವಕೀಲರ ಮೂಲಕ ಲೀಗಲ್ ನೋಟೀಸ್ ಜಾರಿಗೊಳಿಸಬೇಕು

Join Our Whatsapp Group

ಅದರಲ್ಲಿ ಕೆಲವೊಂದು ಅಂಶಗಳು ಇಲ್ಲದಿದ್ದರೆ ಇಡೀ ಕೇಸ್ ಕಾನೂನು ಮಾನ್ಯತೆಯನ್ನು ಕಳೆದುಕೊಳ್ಳುತ್ತದೆ ಎಂದು ಹಿಮಾಚಲ ಪ್ರದೇಶ ಹೈಕೋರ್ಟ್ ಮಹತ್ವದ ತೀರ್ಪು ಮೂಲಕ ಸ್ಪಷ್ಟಪಡಿಸಿದೆ.
ದೊಲ್ಮಾ ದೇವಿ Vs ರೋಶನ್ ಲಾಲ್ ಪ್ರಕರಣದ ವಿಚಾರಣೆ ನಡೆಸಿದ ನ್ಯಾ. ಅಜಯ್ ಮೋಹನ್ ಗೋಯೆಲ್ ನೇತೃತ್ವದ ಹಿಮಾಚಲ ಪ್ರದೇಶ ಹೈಕೋರ್ಟ್ ನ್ಯಾಯಪೀಠ ಪ್ರಕರಣವನ್ನು ವಜಾಗೊಳಿಸಿದ ವಿಚಾರಣಾ ನ್ಯಾಯಾಲಯದ ತೀರ್ಪನ್ನು ಎತ್ತಿಹಿಡಿಯಿತು.
ಈ ಪ್ರಕರಣದಲ್ಲಿ ದೂರುದಾರರ ಪರವಾಗಿ ಲೀಗಲ್ ನೋಟೀಸ್ ಜಾರಿಗೊಳಿಸಿದ್ದ ವಕೀಲರು, ಚೆಕ್ನಲ್ಲಿ ನಮೂದಿಸಿದ ಹಣದ ಬೇಡಿಕೆಯನ್ನು ಇಟ್ಟಿರಲಿಲ್ಲ. ಇಡೀ ನೋಟೀಸ್ನಲ್ಲಿ ಚೆಕ್ ಅಮಾನ್ಯಗೊಂಡ ಬಗ್ಗೆ, ಅದರ ಕಾರಣದ ಬಗ್ಗೆ ಮತ್ತು ಇತರ ವಿಚಾರಗಳನ್ನು ನಮೂದಿಸಿದ್ದರು. ಆದರೆ, ಎಲ್ಲೂ ಚೆಕ್ ಮೊತ್ತವನ್ನು ಪಾವತಿಸುವಂತೆ ಯಾವುದೇ ಬೇಡಿಕೆ ಇಟ್ಟಿರಲಿಲ್ಲ ಎಂಬುದನ್ನು ನ್ಯಾಯಪೀಠ ಗಮನಿಸಿತು.
ಸದ್ರಿ ಪ್ರಕರಣದಲ್ಲಿ ವಿಚಾರಣಾ ಹಂತದಲ್ಲೇ ಲೀಗಲ್ ನೋಟೀಸನ್ನು ನಿಶಾನೆಯಾಗಿ ಗುರುತಿಸಲಾಗಿತ್ತು. ವರ್ಗಾವಣೀಯ ಪತ್ರಗಳ ಕಾಯ್ದೆ(NI Act) 1881ರ ಸೆಕ್ಷನ್ 138(b) ಪ್ರಕಾರ ನೋಟೀಸ್ ನಲ್ಲಿ ಹಣದ ಮೊತ್ತವನ್ನು ಪಾವತಿಸುವಂತೆ ಬೇಡಿಕೆ ಇಡಬೇಕು ಎಂಬ ಅಂಶದತ್ತ ನ್ಯಾಯಪೀಠ ಒತ್ತು ನೀಡಿತು.
K.R. Indira Versus Dr.G. Adinarayana, (2003) 8 SCC 300 ಪ್ರಕರಣವನ್ನು ಉಲ್ಲೇಖಿಸಿ ಹೈಕೋರ್ಟ್ ನ್ಯಾಯಪೀಠ, ವಿಚಾರಣಾ ನ್ಯಾಯಾಲಯದ ತೀರ್ಪನ್ನು ಬದಿಗೆ ಸರಿಸಲು ನಿರಾಕರಿಸಿತು.
ಹಣದ ಪಾವತಿಗೆ ಬೇಡಿಕೆ ಇಲ್ಲದ ಚೆಕ್ ಅಮಾನ್ಯ ಪ್ರಕರಣದ ಲೀಗ್ ನೋಟೀಸ್ ಕಾನೂನು ದೃಷ್ಟಿಯಲ್ಲಿ ಒಂದು ನೋಟೀಸ್ ಅಲ್ಲ ಎಂಬುದಾಗಿ ಅಭಿಪ್ರಾಯಪಟ್ಟಿತು.
ವರ್ಗಾವಣೀಯ ಪತ್ರಗಳ ಕಾಯ್ದೆಯ ಸೆಕ್ಷನ್ 138ರ ಅಡಿಯಲ್ಲಿ ಅರ್ಜಿದಾರರು ಮಂಡಿ ಮ್ಯಾಜಿಸ್ಟ್ರೇಟ್ ನ್ಯಾಯಾಲಯದ ಮುಂದೆ ಸಲ್ಲಿಸಿದ್ದ ದೂರನ್ನು ವಜಾಗೊಳಿಸಿತ್ತು.