ಮನೆ ಸುದ್ದಿ ಜಾಲ ಬೈಕ್ ನಂಬರ್‌ ಪ್ಲೇಟ್ ಮೇಲೆ ನಂಬರ್ ಬದಲು Grandson of Nagercoil MLA MR Gandhi

ಬೈಕ್ ನಂಬರ್‌ ಪ್ಲೇಟ್ ಮೇಲೆ ನಂಬರ್ ಬದಲು Grandson of Nagercoil MLA MR Gandhi

0

ತಮಿಳುನಾಡು: ವಾಹನಗಳ ನಂಬರ್ ಪ್ಲೇಟ್ ನೊಂದಿಗೆ ಸಂಘಟನೆಯ ಹೆಸರು, ಹುದ್ದೆಗಳನ್ನು ಹಾಕಿಸಿಕೊಳ್ಳುವುದು ಸರ್ವೇ ಸಾಮಾನ್ಯ. ಆದರೆ ಇಲ್ಲೊಬ್ಬ ಬೈಕ್ ನ ನಂಬರ್ ಪ್ಲೇಟ್ ನಲ್ಲಿ  ನಂಬರ್ ಬದಲಿಗೆ Grandson of Nagercoil MLA MR Gandhi ಎಂದು ಹಾಕುವ ಮೂಲಕ ಸುದ್ದಿಯಾಗಿದ್ದಾನೆ.

ಹೌದು, ತಮಿಳುನಾಡು ಶಾಸಕರೊಬ್ಬರ ಮೊಮ್ಮಗ Grandson of Nagercoil MLA MR Gandhi ಎಂದು ಬೈಕ್ ನಂಬರ್ ಪ್ಲೇಟ್ ಹಾಕಿದ್ದಾನೆ.

ನಾಗರಕೋಯಿಲ್ ಶಾಸಕ ಎಂ.ಆರ್.ಗಾಂಧಿ ಅವರ ಮೊಮ್ಮಗ ಎಂದು ನಂಬರ್ ಪ್ಲೇಟ್ ಬರೆದ ಬೈಕ್ ಮೇಲೆ ತಮಿಳುನಾಡಿನ ವ್ಯಕ್ತಿಯೊಬ್ಬ ಕುಳಿತಿರುವ ಫೋಟೊ ವೈರಲ್ ಆಗಿದೆ.  ತಮಿಳುನಾಡಿನಲ್ಲಿ ಅಧಿಕಾರದ ದುರುಪಯೋಗವಾಗಿದೆ ಎಂಬ ಆರೋಪ ಕೇಳಿಬಂದಿದೆ.

ಎಂ.ಆರ್.ಗಾಂದಿ ತಮಿಳುನಾಡಿನ ಕನ್ಯಾಕುಮಾರಿ ಜಿಲ್ಲೆಯ ನಾಗರಕೋಯಿಲ್ ಕ್ಷೇತ್ರದ ಬಿಜೆಪಿ ಶಾಸಕರಾಗಿದ್ದು, ಇವರು ಮದುವೆಯಾಗಿಲ್ಲ ಎಂದು ತಿಳಿದುಬಂದಿದ್ದು, ಹೀಗಿದ್ದರೂ ಮೊಮ್ಮಗ ಎಲ್ಲಿಂದ ಬಂದ ಎನ್ನುವ ಗೊಂದಲ ಸೃಷ್ಟಿಯಾಗಿದೆ.

ಈ ಚಿತ್ರದಲ್ಲಿರುವುದು ಶಾಸಕ ಗಾಂಧಿ ಅವರ ಸಹಾಯಕ ಕಣ್ಣನ್ ಪುತ್ರ ಅಮರೇಶ್ ಎಂಬ ಮಾಹಿತಿ ಲಭ್ಯವಾಗಿದೆ.