ಮನೆ ರಾಜ್ಯ ಮೋದಿ ಪ್ರಪಂಚದ ಹುಲಿ: ಕೆ.ಎಸ್.ಈಶ್ವರಪ್ಪ

ಮೋದಿ ಪ್ರಪಂಚದ ಹುಲಿ: ಕೆ.ಎಸ್.ಈಶ್ವರಪ್ಪ

0

ಶಿವಮೊಗ್ಗ: ಬಂಡೀಪುರ ಭೇಟಿಯ ವೇಳೆ ಹುಲಿ ಬರಲಿಲ್ಲ ಎನ್ನುವುದಕ್ಕಿಂತ ಮೋದಿಯೇ ದೊಡ್ಡ ಹುಲಿ. ಇಡೀ ಪ್ರಪಂಚದ ಹುಲಿ ಮೋದಿ. ಅವರ ನೇತೃತ್ವ ನಮಗೆ ಸಿಕ್ಕಿರುವುದು ಪುಣ್ಯ ಎಂದು ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಹೇಳಿದ್ದಾರೆ.

Join Our Whatsapp Group

ಸುದ್ದಿಗಾರರೊಂದಿಗೆ ಮಾತನಾಡಿದ ಮೋದಿ ಬಂಡೀಪುರ ಭೇಟಿಗೆ ಟೀಕೆ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಅವರು, ಟೀಕೆ ಮಾಡುವುದು ಬಿಟ್ಟರೆ ಕಾಂಗ್ರೆಸ್ ನವರಿಗೆ ಏನು ಗೊತ್ತಿದೆ. ಹುಲಿ ಕಾಣಲಿಲ್ಲ ಅಂದರೂ ಒಂದು ಟೀಕೆ. ಅಕಸ್ಮಾತ್ ಹುಲಿ ಬಂದರೂ ಒಂದೇ ಹುಲಿ ಬಂತು ಎಂದು ಟೀಕೆ. ಟೀಕೆಯಲ್ಲೇ ಅವರ ಜೀವನ ಕಳೆದುಕೊಂಡು ಬಿಟ್ಟರು ಎಂದರು.

ರಾಜ್ಯಕ್ಕೆ ಪ್ರಧಾನಿ ಮೋದಿ, ಗೃಹ ಸಚಿವ ಅಮಿತ್ ಶಾ, ಜೆಪಿ ನಡ್ಡಾ ಎಲ್ಲರೂ ಬಂದು ಹೋಗುತ್ತಿದ್ದಾರೆ. ಚುನಾವಣಾ ಸಮಯದಲ್ಲಿ ರಾಷ್ಟ್ರೀಯ ನಾಯಕರು ರಾಜ್ಯಕ್ಕೆ ಬರುತ್ತಿರುವುದೇ ಕಾಂಗ್ರೆಸ್ ಗೆ ತಳಮಳವಾಗಿದೆ. ಅದಕ್ಕೆ ಟೀಕೆ ಮಾಡುತ್ತಿದ್ದಾರೆ. ಇವರಿಗೆ ನಾಯಕರು ಇಲ್ಲವೇ? ನೀವು ನಿಮ್ಮ ನಾಯಕ ರಾಹುಲ್ ಗಾಂಧಿ, ಪ್ರಿಯಾಂಕ ಗಾಂಧಿ ಕರೆಯಿಸಿ. ಅವರ ಮುಖ ತೋರಿಸಿ ವೋಟ್ ತೆಗೆದುಕೊಳ್ಳಿ. ನಮ್ಮ ಅಭ್ಯಂತರವೇನಿಲ್ಲ. ರಾಹುಲ್ ಗಾಂಧಿ ಬರುತ್ತಾರೆಂದು ಹೇಳುತ್ತಲೇ ಇದ್ದಾರೆ. ನಿಮಗೆ ನಾಯಕರುಗಳೇ ಇಲ್ಲ. ದೇಶ, ವಿಶ್ವ ಮೆಚ್ಚುವ ನಾಯಕರು ಬಿಜೆಪಿಯಲ್ಲಿದ್ದಾರೆ. ಅದೇ ನಮಗೆ ಹೆಮ್ಮೆ ಎಂದರು.

ಮೋದಿ, ಅಮಿತ್ ಶಾ ರಂತಹ ನಾಯಕರ ನಾಯಕತ್ವ ಪಕ್ಷಕ್ಕಿದೆ. ರಾಜ್ಯದಲ್ಲಿ ಬಿಜೆಪಿ ಬೂತ್ ಮಟ್ಟದಲ್ಲಿ ಸಂಘಟನಾತ್ಮಕವಾಗಿ ಬೆಳೆದಿದೆ. ಯಡಿಯೂರಪ್ಪ, ಬೊಮ್ಮಾಯಿ ಅವರ ಸರ್ಕಾರದ ಅಭಿವೃದ್ಧಿ ಕಾರ್ಯ ಜನ ಮೆಚ್ಚಿದ್ದಾರೆ. ಹೀಗಾಗಿ ಪೂರ್ಣ ಬಹುಮತ ಬಿಜೆಪಿಗೆ ಸ್ಪಷ್ಟವಾಗಿ ಬರುತ್ತದೆ ಎಂದು ಈಶ್ವರಪ್ಪ ವಿಶ್ವಾಸದ ಮಾತುಗಳನ್ನಾಡಿದರು.

ಪಟ್ಟಿ ಬಿಡುಗಡೆ ವಿಚಾರವಾಗಿ ಮಾತನಾಡಿ, ರಾಜ್ಯದ 224 ಕ್ಷೇತ್ರಕ್ಕೂ ಅಭ್ಯರ್ಥಿ ಹಾಕುತ್ತಿದ್ದೇವೆ. ಈಗಾಗಲೇ ಎಲ್ಲಾ ಕ್ಷೇತ್ರಕ್ಕೂ ಮೂರು- ನಾಲ್ಕು ಜನರ ಹೆಸರು ಕಳುಹಿಸಲಾಗಿದೆ. ನಿನ್ನೆ ಮೊನ್ನೆ ಕೇಂದ್ರದ ನಾಯಕರು, ಚುನಾವಣಾ ಸಮಿತಿ ಕುಳಿತು ಚರ್ಚೆ ಮಾಡಿದ್ದಾರೆ. ಈಗಾಗಲೇ ನಮ್ಮ ನಾಯಕರಾದ ಯಡಿಯೂರಪ್ಪ ಅವರು ಹೇಳಿದ್ದಾರೆ. ಇವತ್ತು ಸಂಜೆ 170-180 ಕ್ಷೇತ್ರಗಳಿಗೆ ಅಭ್ಯರ್ಥಿ ಬಿಡುಗಡೆ ಮಾಡುತ್ತೇವೆ ಎಂದಿದ್ದಾರೆ. ಯಾವುದೇ ಗೊಂದಲ ಇಲ್ಲದೇ, ಪಕ್ಷದ ಪಟ್ಟಿ ಬಿಡುಗಡೆಯಾಗುತ್ತದೆ. ಕಾರ್ಯಕರ್ತರ ಅಪೇಕ್ಷೆಯಂತೆ ಅಭ್ಯರ್ಥಿ ಹಾಕಲಿದ್ದು, ಪೂರ್ಣ ಬಹುಮತ ಬರುತ್ತದೆ ಎಂದರು.