ಮನೆ ಕ್ರೀಡೆ ಇಂಗ್ಲೆಂಡ್ ಕೋಚ್ ಹುದ್ದೆಯಿಂದ ಕ್ರಿಸ್ ಸಿಲ್ವರ್ ವುಡ್ ವಜಾ

ಇಂಗ್ಲೆಂಡ್ ಕೋಚ್ ಹುದ್ದೆಯಿಂದ ಕ್ರಿಸ್ ಸಿಲ್ವರ್ ವುಡ್ ವಜಾ

0

ಲಂಡನ್: ಆಶಸ್ ಸರಣಿಯಲ್ಲಿ ತಂಡಕ್ಕೆ ಉಂಟಾದ ಹಿನ್ನೆಡೆಯ ಬೆನ್ನಲ್ಲೇ ಇಂಗ್ಲೆಂಡ್ ನ ಕ್ರಿಕೆಟ್ ಮಂಡಳಿ ತಂಡದ ಕೋಚ್ ಕ್ರಿಸ್ ಸಿಲ್ವರ್ ವುಡ್ ನ್ನು ಅವರ ಸ್ಥಾನ, ಕರ್ತವ್ಯಗಳಿಂದ ಮುಕ್ತರನ್ನಾಗಿ ಮಾಡುತ್ತಿರುವುದಾಗಿ ಘೋಷಿಸಿದೆ.  

ಮುಂಬರುವ ವೆಸ್ಟ್ ಇಂಡೀಸ್ ಪ್ರವಾಸಕ್ಕೆ ಮಧ್ಯಂತರ ವ್ಯವಸ್ಥೆಯನ್ನು ಶೀಘ್ರವೇ ಘೋಷಿಸುವುದಾಗಿ ಇಸಿಬಿ ತಿಳಿಸಿದೆ. 

ಕ್ರಿಸ್ ಸಿಲ್ವರ್ ವುಡ್ ಅವರು ಕೋಚ್ ಹುದ್ದೆಯಲ್ಲಿ ತಮ್ಮ ಅವಧಿಯಲ್ಲಿ ತಂಡವನ್ನು ಯಶಸ್ಸಿನತ್ತ ಮುನ್ನಡೆಸುವುದಕ್ಕೆ ಎಲ್ಲವನ್ನೂ ಮಾಡಿದ್ದಾರೆ. ಅವರು ಸಮಗ್ರತೆಯ ವ್ಯಕ್ತಿ. ಕ್ರಿಸ್ ಅವರ ಮಾರ್ಗದರ್ಶನದಲ್ಲಿ ಇಂಗ್ಲೆಂಡ್ ಪುರುಷರ ಒಡಿಐ, ಟಿ20 ತಂಡ ಜಾಗತಿಕವಾಗಿ ಅಗ್ರ ಸ್ಥಾನ ಹಾಗೂ 2 ನೇ ಸ್ಥಾನಕ್ಕೆ ಏರಿದೆ. ಟೆಸ್ಟ್ ತಂಡವನ್ನೂ ಅವರು ಹಲವು ಗೆಲುವಿನತ್ತ ಮುನ್ನಡೆಸಿದ್ದಾರೆ ಎಂದು ಇಸಿಬಿ ಕಾರ್ಯನಿರ್ವಾಹಕ ಅಧಿಕಾರಿ ಟಾಮ್ ಹರಿಸನ್ ಅಧಿಕೃತ ಹೇಳಿಕೆಯಲ್ಲಿ ತಿಳಿಸಿದ್ದಾರೆ. 

ಹಿಂದಿನ ಲೇಖನಪ್ರೊ.ಎಂ.ವೆಂಕಟೇಶ್ ಕುಮಾರ್ ಗೆ ಕಾಳಿದಾಸ ಸಮ್ಮಾನ್ ಪ್ರಶಸ್ತಿ
ಮುಂದಿನ ಲೇಖನಫೆ.7 ರಿಂದ ದೆಹಲಿಯಲ್ಲಿ ಶಾಲಾ-ಕಾಲೇಜುಗಳು ಪ್ರಾರಂಭ