ಬೆಂಗಳೂರು: ರಾಜ್ಯದ ಐಎಎಸ್ ಅಧಿಕಾರಿ ಡಾ. ಆಕಾಶ್ ವಿರುದ್ಧ ಅವರ ಪತ್ನಿ ವರದಕ್ಷಿಣೆ ಕಿರುಕುಳ ದೂರು ದಾಖಲಿಸಿದ್ದಾರೆ.
ಕೊಡಗು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿಯಾಗಿರುವ ಡಾ. ಆಕಾಶ್ ಅವರ ವಿರುದ್ಧ ಅವರ ಪತ್ನಿ ವಂದನಾ ಅವರು ಬೆಂಗಳೂರಿನ ಪೂರ್ವ ವಿಭಾಗದ ಮಹಿಳಾ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.
ನಿವೃತ್ತ ಡಿಐಜಿ ಪುತ್ರಿಯಾಗಿರುವ ವಂದನಾ ಅವರು ನೀಡಿದ ದೂರಿನ ಆಧಾರದ ಮೇಲೆ ಪೊಲೀಸರು ಅವರ ಪತಿ ಆಕಾಶ್, ಅವರ ತಂದೆ, ತಾಯಿ ಮತ್ತು ಸಹೋದರನ ವಿರುದ್ಧ ಎಫ್ ಐಆರ್ ದಾಖಲಿಸಿದ್ದಾರೆ.
ಆಕಾಶ್ ಅವರು 2022ರಲ್ಲಿ ವಂದನಾ ಅವರನ್ನು ವಿವಾಹವಾಗಿದ್ದರು. ಆಗಲೆ ಸಾಕಷ್ಟು ವರದಕ್ಷಿಣೆ ಪಡೆದಿದ್ದಐಎಎಸ್ ಅಧಿಕಾರಿ ಆಕಾಶ್, ಇನ್ನಷ್ಟು ವರದಕ್ಷಿಣೆಗಾಗಿ ಪೀಡಿಸುತ್ತಿದ್ದರು. ಅಷ್ಟೇ ಅಲ್ಲದೇ ವರದಕ್ಷಿಣೆ ನೀಡಲು ಒಪ್ಪದಿದ್ದಕ್ಕೆ ತನ್ನ ಹಲ್ಲೆ ನಡೆಸಿದ್ದಾರೆ ಎಂದು ಪತ್ನಿ ಆರೋಪಿಸಿದ್ದಾರೆ.