ಮನೆ ಕಾನೂನು ಆರ್‌ ಎಸ್‌ ಎಸ್‌ ಮೆರವಣಿಗೆಗೆ ಸುಪ್ರೀಂಕೋರ್ಟ್ ಅಸ್ತು: ತಮಿಳುನಾಡು ಸರ್ಕಾರದ ಅರ್ಜಿ ವಜಾ

ಆರ್‌ ಎಸ್‌ ಎಸ್‌ ಮೆರವಣಿಗೆಗೆ ಸುಪ್ರೀಂಕೋರ್ಟ್ ಅಸ್ತು: ತಮಿಳುನಾಡು ಸರ್ಕಾರದ ಅರ್ಜಿ ವಜಾ

0

ನವದೆಹಲಿ: ತಮಿಳುನಾಡಿನಲ್ಲಿ ಮೆರವಣಿಗೆ ನಡೆಸಲು ರಾಷ್ಟ್ರೀಯ ಸ್ವಯಂ ಸೇವಕ ಸಂಘಕ್ಕೆ (ಆರ್‌ ಎಸ್‌ ಎಸ್‌ ಗೆ) ಅನುಮತಿ ನೀಡಿದ್ದ ಮದ್ರಾಸ್ ಹೈಕೋರ್ಟ್ ಆದೇಶವನ್ನು ಸುಪ್ರೀಂಕೋರ್ಟ್‌ ಎತ್ತಿ ಹಿಡಿದಿದೆ.

Join Our Whatsapp Group

ಮದ್ರಾಸ್ ಹೈಕೋರ್ಟ್ ಆದೇಶ ಪ್ರಶ್ನಿಸಿ ತಮಿಳುನಾಡು ಸರ್ಕಾರ ಸಲ್ಲಿಸಿದ್ದ ಮೇಲ್ಮನವಿಯನ್ನು ನ್ಯಾಯಮೂರ್ತಿ ವಿ. ರಾಮಸುಬ್ರಮಣಿಯನ್‌ ಮತ್ತು ಪಂಕಜ್‌ ಮಿತ್ತಲ್‌ ಅವರಿದ್ದ ಪೀಠ ವಜಾ ಮಾಡಿದೆ.

ಆರ್‌’ಎಸ್’ಎಸ್‌ ಪ್ರಾತಿನಿಧ್ಯವನ್ನು ಪರಿಗಣಿಸಿ, ಕಾರ್ಯಕ್ರಮಗಳನ್ನು ಆಯೋಜಿಸಲು ಯಾವುದೇ ಷರತ್ತುಗಳಿಲ್ಲದೆ ಅವಕಾಶ ಕಲ್ಪಿಸುವಂತೆ 2022ರ ಸೆಪ್ಟೆಂಬರ್‌ 22ರಂದು ಪೊಲೀಸರಿಗೆ ನೀಡಿದ್ದ ನಿರ್ದೇಶನವನ್ನು ಮದ್ರಾಸ್‌ ಹೈಕೋರ್ಟ್‌’ನ ವಿಭಾಗೀಯ ಪೀಠ ಫೆಬ್ರುವರಿ 10ರಂದು ಪುನರುಚ್ಛರಿಸಿತ್ತು.

ಆರ್‌’ಎಸ್‌’ಎಸ್‌ ಮೆರವಣಿಗೆ ಮತ್ತು ಸಾರ್ವಜನಿಕ ಸಭೆಗಳನ್ನು ಸಂಪೂರ್ಣವಾಗಿ ವಿರೋಧಿಸುವುದಿಲ್ಲ. ಆದರೆ, ಗುಪ್ತಚರ ಮಾಹಿತಿ ಪ್ರಕಾರ ಎಲ್ಲ ಬೀದಿಗಳಲ್ಲಿಯೂ ಮೆರವಣಿಗೆ ನಡೆಸಲು ಸಾಧ್ಯವಿಲ್ಲ ಎಂದು ತಮಿಳುನಾಡು ಸರ್ಕಾರ ಮಾರ್ಚ್‌ 3 ರಂದು ಸುಪ್ರೀಂ ಕೋರ್ಟ್‌ ಗೆ ತಿಳಿಸಿತ್ತು.

ಹಿಂದಿನ ಲೇಖನರಾಜ್ಯದ ಐಎಎಸ್ ಅಧಿಕಾರಿ ಆಕಾಶ್ ವಿರುದ್ಧ ವರದಕ್ಷಿಣೆ ಕಿರುಕುಳ ಆರೋಪ: ದೂರು ದಾಖಲು
ಮುಂದಿನ ಲೇಖನಹಾಸನ ಕ್ಷೇತ್ರದಲ್ಲಿ ಕಾರ್ಯಕರ್ತರ ತೀರ್ಮಾನವೇ ಅಂತಿಮ: ಹೆಚ್ ಡಿ ಕುಮಾರಸ್ವಾಮಿ