ಮನೆ ಅಪರಾಧ ನಜರ್ ಬಾದ್ ಅತಿಥಿಗೃಹದಲ್ಲಿ ಅನಧಿಕೃತರಿಗೆ ಕಾನೂನು ಬಾಹಿರವಾಗಿ ಕೊಠಡಿ ಬಾಡಿಗೆ: ಸೂಕ್ತ ಕ್ರಮಕ್ಕೆ ಆಗ್ರಹ

ನಜರ್ ಬಾದ್ ಅತಿಥಿಗೃಹದಲ್ಲಿ ಅನಧಿಕೃತರಿಗೆ ಕಾನೂನು ಬಾಹಿರವಾಗಿ ಕೊಠಡಿ ಬಾಡಿಗೆ: ಸೂಕ್ತ ಕ್ರಮಕ್ಕೆ ಆಗ್ರಹ

0

ಮೈಸೂರು: ನಜರ್ ಬಾದ್ ನ ಅತಿಥಿಗೃಹದಲ್ಲಿ ಅನೈತಿಕ ಚಟುವಟಿಕೆಗಳು ಎಗ್ಗಿಲ್ಲದೇ ಸಾಗಿದ್ದು, ಅಮಾನತ್ತಾದ ವ್ಯಕ್ತಿ ಅಧಿಕೃತವಾಗಿ ರೂಮುಗಳನ್ನು ಬಾಡಿಗೆ ನೀಡುವ ಮೂಲಕ ಇಂದಿಗೂ ಅತಿಥಿಗೃಹವನ್ನು ತನ್ನ ಹಿಡಿತದಲ್ಲಿಟ್ಟುಕೊಂಡು ಎಲ್ಲಾ ಅವ್ಯವಹಾರಗಳನ್ನು ನಡೆಸುತ್ತಿರುವುದು ಬೆಳಕಿಗೆ ಬಂದಿದೆ.

Join Our Whatsapp Group

ನಜರ್ ಬಾದ್ ಅತಿಥಿಗೃಹದಲ್ಲಿ ಅನಧಿಕೃತರಿಗೆ ಕಾನೂನು ಬಾಹಿರವಾಗಿ ಕೊಠಡಿ ನೀಡುತ್ತಿರುವ  ಸಂಬಂಧ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಮಾನವ ಹಕ್ಕುಗಳ ರಕ್ಷಣೆ ಹಾಗೂ ಭ್ರಷ್ಟಾಚಾರ ನಿರ್ಮೂಲನಾ ಸಂಸ್ಥೆ(ರಿ)  ಜಿಲ್ಲಾಧಿಕಾರಿಗಳಿಗೆ ಮತ್ತು ಸಂಬಂಧಪಟ್ಟ ಇಲಾಖೆಯ ಮುಖ್ಯಸ್ಥರೊಂದಿಗೆ ನಜರ್ ಬಾದ್ ಪೊಲೀಸ್ ಠಾಣೆಗೆ ದೂರು ನೀಡಿದೆ.

ದೂರಿನಲ್ಲೇನಿದೆ ?

ಸರ್ಕಾರಿ ಅಧಿಕಾರಿಗಳ ಹೆಸರಿನಲ್ಲಿ ಕೊಠಡಿಗಳನ್ನು ಮೀಸಲಿರಿಸಿ ಪ್ರವಾಸಿಗರಿಗೆ ಬಾಡಿಗೆ ನೀಡುವ ಪ್ರಕ್ರಿಯೆಗಳಿಗೆ ಸಿಬ್ಬಂದಿ ಶೇಖರ್, ಸಹಾಯಕ ಕಾರ್ಯಪಾಲಕ ಅಭಿಯಂತರರಾದ ಗಿರೀಶ್ ಗೌಡ, ವ್ಯವಸ್ಥಾಪಕರಾದ ರಾಜ್ ಕುಮಾರ್ ಮತ್ತು ರೂಂ ಬಾಯ್ ಪುನೀತ್ ಮುಂದಾಗಿದ್ದಾರೆ.

ರಾತ್ರಿ ಸಮಯದಲ್ಲಿ ಅತಿಥಿಗೃಹದಲ್ಲಿ ನಿರಂತರವಾಗಿ ವಿನೋದ್ ಮತ್ತು ಸಂಗಡಿಗರು ಹೆಣ್ಣು ಮಕ್ಕಳೊಂದಿಗೆ ಮದ್ಯಪಾನದ ಪಾರ್ಟಿಗಗಳೊಂದಿಗೆ ಇಸ್ಫೀಟ್ ಆಟಗಳನ್ನು ಆಡುತ್ತಿರುವ ಫೋಟೋ ಮತ್ತು ವಿಡಿಯೋ ಸಾಕ್ಷಿಗಳ ಸಮೇತ ದೂರನ್ನು ನೀಡಲಾಗಿದೆ.

ಕೆಲವು ವರ್ಷಗಳಿಂದ ಸ್ಥಳೀಯ ವ್ಯಕ್ತಿಯಾದ ವಿನೋದ್, ಅತಿಥಿಗೃಹವನ್ನು ತಮ್ಮ ಸ್ವಂತ ಮನೆಯನ್ನಾಗಿ ಮಾಡಿಕೊಂಡು ಸದರಿ ಅತಿಥಿಗೃಹವನ್ನು ಅಲ್ಲಿನ ವ್ಯವಸ್ಥಾಪಕ ಎಂದು ಹೇಳಿಕೊಳ್ಳುವ ಅತಿಥಿಗೃಹದ ಸಿಬ್ಬಂದಿ ಶೇಖರ್  ಅವರೊಡನೆ ಶಾಮೀಲಾಗಿ ಅನೈತಿಕ ಚಟುವಟಿಕೆಗಳನ್ನು ಮಾಡುತ್ತಿದ್ದಾರೆ. ಎರಡು ವರ್ಷಗಳಿಂದ ಯಾವುದೇ ನೋಂದಣಿ ಸಂಖ್ಯೆಯಿಲ್ಲದ ಕಾರೊಂದು ಅತಿಥಿಗೃಹದಲ್ಲಿ ನಿಯಮಿತವಾಗಿ ನಿಂತಿರುತ್ತದೆ. ಅದನ್ನು ವಿನೋದ್ ಸದರಿ ವಾಹನವು ಡಿಸಿಪಿ ಶಿವರಾಜ್ ಅವರಿಗೆ ಸೇರಿದ್ದೆಂದು ಹೇಳಿಕೊಳ್ಳುತ್ತಾ ಅದೇ ಕಾರನ್ನು ಚುನಾವಣಾ ಅಕ್ರಮಗಳಿಗೆ ಉಪಯೋಗಿಸುತ್ತಿದ್ದ ಎಂಬ ಮಾಹಿತಿ ಇದೆ ಎಂದು ಮಾನವ ಹಕ್ಕುಗಳ ರಕ್ಷಣೆ ಹಾಗೂ ಭ್ರಷ್ಟಾಚಾರ ನಿರ್ಮೂಲನಾ ಸಂಸ್ಥೆ(ರಿ)  ಜಿಲ್ಲಾಧಿಕಾರಿಗಳಿಗೆ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ.

ಸಂಸ್ಥೆಯವರಿಗೆ ಸಿಕ್ಕಿದ ಸಾಕ್ಷ್ಯಾಧಾರಗಳೇನು ?

ಈ ಆರೋಪಕ್ಕೆ ತಕ್ಕತಂಹ ಸಾಕ್ಷ್ಯಾಧಾರಗಳು ಸಂಸ್ಥೆಯ ಬಳಿ ಇದ್ದು, ಸಂಸ್ಥೆಯವರು ಅತಿಥಿಗೃಹಕ್ಕೆ ಅಬಕಾರಿ ಇಲಾಖೆಯ ಪೊಲೀಸರು, ನಜರ ಬಾದ್ ಪೊಲೀಸರು ಮತ್ತು ಚುನಾವಣಾ ಆಯೋಗದ ಫ್ಲೈಯಿಂಗ್ ಸ್ಕ್ವಾಡ್ ನೊಂದಿಗೆ ಭೇಟಿ ನೀಡಿ ಪರಿಶೀಲಿಸುವ ವೇಳೆಯಲ್ಲಿ ಹೆಣ್ಣು ಮಕ್ಕಳು ಧರಿಸುವ ದುಪ್ಪಟ್ಟಾ, ಮಂಚದಡಿಯಲ್ಲಿ ಕಾಂಡೋಮ್’ಗಳು, ಮದ್ಯದ ಬಾಟಲಿಗಳು,ಇಸ್ಪೀಟು ಕಾರ್ಡುಗಳು, 6 ಶೂ,  ಸಿಗರೇಟ್ ಪ್ಯಾಕ್ ಗಳು ಹಾಗೂ ಸಿಗರೇಟ್ ತುಂಡುಗಳು ಸೇರಿದಂತೆ ಅನೈತಿಕ ಚಟುವಟಿಕೆಗಳಿಗೆ ಉಪಯೋಗಿಸುವ ವಸ್ತುಗಳು ಕಂಡುಬಂದಿವೆ.

ಸರ್ಕಾರಿ ಅಧಿಕಾರಿಗಳು, ಜನಪ್ರತಿನಿಧಿಗಳು ಮೈಸೂರಿಗೆ ಬಂದಾಗ ಉಳಿದುಕೊಳ್ಳಲು ಉಪಯೋಗಿಸುವ ಅತಿಥಿಗೃಹದ ಆವರಣದಲ್ಲಿ ಸಾರ್ವಜನಿಕ ಸಭೆ ಸಮಾರಂಭಗಳಿಗೆ ಅವಕಾಶವಿಲ್ಲ. ಮದ್ಯಪಾನ ಮಾಡುವುದನ್ನು ಕೂಡ ಕಡ್ಡಾಯವಾಗಿ ನಿಷೇಧಿಸಲಾಗಿದೆ ಎಂಬ ಫಲಕವನ್ನು ಪ್ರದರ್ಶಿಸಿದರು ಸಹ ಅದನ್ನು ಪರಿಗಣಿಸದೇ ಅತಿಥಿಗೃಹದ ಕೊಠಡಿಯಲ್ಲಿಯೇ ಮದ್ಯಪಾನದ ಬಾಟಲಿಗಳು ಸೇರಿದಂತೆ ಇನ್ನಿತರ ವಸ್ತುಗಳು ದೊರೆತಿರುವುದು ಸಾಕಷ್ಟು ಅನುಮಾನಗಳಿಗೆ ಕಾರಣವಾಗಿದೆ.

ಸಂಸ್ಥೆಯ ಮಹಿಳಾ ಸಿಬ್ಬಂದಿಗೆ ಕಾರು ಗುದ್ದಿಕೊಂಡು ಸಾಗಿದ ವಿನೋದ್

ಅಕ್ರಮಗಳನ್ನು ಬಯಲಿಗೆಳೆಯಲು  ಹೋಗಿದ್ದ ಸಂದರ್ಭದಲ್ಲಿ ವಿನೋದ್, ಕಾರಿನ ಗಾಜುಗಳಿಗೆ ಸಂಪೂರ್ಣವಾಗಿ ಕಪ್ಪು ಬಣ್ಣದ ಸ್ಟಿಕರ್ ಗಳನ್ನು ಅಳವಡಿಸಿಕೊಂಡು ಕಾರಿನ ಮುಂಭಾಗ ಮತ್ತು ಹಿಂಭಾಗ ಯಾವುದೇ ನಂಬರ್ ನ್ನು ಹಾಕಿಕೊಳ್ಳದೇ ಸ್ಥಳದಿಂದ ಪರಾರಿಯಾಗಲು ಯತ್ನಿಸಿದ್ದಾನೆ.

ಈ ವೇಳೆ ಆತನನ್ನು ತಡೆಯಲು ಯತ್ನಿಸಿದ ಮಾನವ ಹಕ್ಕುಗಳ ರಕ್ಷಣೆ ಹಾಗೂ ಭ್ರಷ್ಟಾಚಾರ ನಿರ್ಮೂಲನಾ ಸಂಸ್ಥೆ(ರಿ) ಯ ಮಹಿಳಾ ಸದಸ್ಯೆಗೆ ಕಾರನ್ನು ಗುದ್ದಿಕೊಂಡು ಅತಿ ವೇಗದಲ್ಲಿ ಕಾರನನ್ನು ಚಲಾಯಿಸಿಕೊಂಡು ಹೋಗಿದ್ದಾನೆ.

ಸದರಿ ಕಾರಿನ ಡಿಕ್ಕಿಯಲ್ಲಿ ಚುನಾವಣೆ ಸಮಯದಲ್ಲಿ ಸರಬರಾಜು ಮಾಡಲು ಐದರಿಂದ ಆರು ಕೇಸುಗಳಷ್ಟು ಬೆಲೆ ಬಾಳುವ ಮದ್ಯದ ಬಾಟಲಿಗಳನ್ನು ಶೇಖರಿಸಿಟ್ಟಿದ್ದನ್ನು ಸಂಸ್ಥೆಯವರು ನೋಡಿದ ಕಾರಣ ಕಾರಿನ ಡಿಕ್ಕಿಯನ್ನು ಮುಚ್ಚದೇ ಅತಿ ವೇಗದಲ್ಲಿ ಸ್ಥಳದಿಂದ ಪರಾರಿಯಾಗಿರುವುದು ಆತನ ತಪ್ಪಿಗೆ ದೊರೆತ ಸಾಕ್ಷಿ ಎಂದು ಹೇಳಬಹುದಾಗಿದೆ.

ಕಳೆದ ಎರಡು ವರ್ಷಗಳಿಂದ ನಂಬರ್ ಪ್ಲೇಟ್ ಇಲ್ಲದ ಇದೇ ಕಾರಿನಲ್ಲಿ ಹಲವಾರು ಅನೈತಿಕ ಚಟುವಟಿಕೆಗಳು ನಡೆದಿರುವ ಬಗ್ಗೆ ಗುಮಾನಿ ಇದೆ.

ಅಕ್ರಮದಲ್ಲಿ ಭಾಗಿದಾರರು ಯಾರ್ಯಾರು ?

CAR ಡಿಸಿಪಿ ಶಿವರಾಜ್ ಅವರ ತಮ್ಮನ ಮಗನೆಂದು ಹೇಳಿಕೊಳ್ಳುವ ವಿನೋದ್, ಸಹಾಯಕ ಕಾರ್ಯಪಾಲಕ ಅಭಿಯಂತರ ಗಿರೀಶ್ ಗೌಡ, ವ್ಯವಸ್ಥಾಪಕ ರಾಜ್ ಕುಮಾರ್, ಅತಿಥಿಗೃಹದ ಉಸ್ತುವಾರಿ ಶೇಖರ್ ಮತ್ತು ರೂಂ ಬಾಯ್ ಪುನೀತ್ ಈ ಎಲ್ಲಾ ಅಕ್ರಮಗಳಿಗೆ ಭಾಗಿದಾರರು ಎಂಬ ಮಾಹಿತಿ ಲಭ್ಯವಾಗಿದೆ.

ತಾನು CAR ಡಿಸಿಪಿ ಶಿವರಾಜ್ ಅವರ ತಮ್ಮನ ಮಗನೆಂದು ಹೇಳಿಕೊಳ್ಳುವ ವಿನೋದ್ ಅಧಿಕಾರಿಗಳನ್ನು ಹೆದರಿಸಿ, ಬೆದರಿಸಿ ರೂಂ ಬಾಡಿಗೆ ಪಡೆದು ಎರಡು ವರ್ಷದಿಂದ ಸದರಿ ಅತಿಥಿ ಗೃಹದಲ್ಲಿ ಅನಧಿಕೃತವಾಗಿ ವಾಸವಾಗಿದ್ದನು.

CAR ಡಿಸಿಪಿ ಶಿವರಾಜ್ ಅವರನ್ನು ತನ್ನ ದೊಡ್ಡಪ್ಪನೆಂದು ಹೇಳಿಕೊಂಡು ಮೈಸೂರು ನಗರದ ಪೊಲೀಸ್ ಸಿಬ್ಬಂದಿಗಳಿಗೆ ಚಳ್ಳೆಹಣ್ಣು ತಿನ್ನಿಸಿ ಸಾರ್ವಜನಿಕರ ಕೆಲಸಗಳನ್ನು ಮಾಡಿಕೊಡುವುದಾಗಿ ಹೇಳಿಕೊಂಡು ಹಣ ಲೂಟಿ ಮಾಡುತ್ತಿದ್ದಾನೆಂಬ ಮಾಹಿತಿ ಇದೆ. ಮೈಸೂರು ಜಿಲ್ಲಾ ಪೊಲೀಸ್ ಇಲಾಖೆಗೆ  ಈತ ಕೆಟ್ಟ ಹೆಸರು ತರುತ್ತಿದ್ದಾನೆ. ಇನ್ನಾದರೂ ಮೈಸೂರು ನಗರ ಪೊಲೀಸ್ ಇಲಾಖೆಯವರು ಎಚ್ಚೆತ್ತುಕೊಂಡು ತಮ್ಮ ಹೆಸರಿನಲ್ಲಿ ನಡೆಯುತ್ತಿರುವ ಅಕ್ರಮ, ಅನೈತಿಕ ಚಟುವಟಿಕೆಗಳನ್ನು ಕೂಡಲೇ ಕಡಿವಾಣ ಹಾಕಬೇಕೆಂದು  ಈ ಮೂಲಕ ಮನವಿ ಮಾಡಿಕೊಳ್ಳಲಾಗಿದೆ.

ಅಗತ್ಯ ಕ್ರಮಕ್ಕೆ ಪೊಲೀಸ್ ಆಯುಕ್ತರಿಗೆ ಜಿಲ್ಲಾಧಿಕಾರಿ ಸೂಚನೆ

ಮಾನವ ಹಕ್ಕುಗಳ ರಕ್ಷಣೆ ಹಾಗೂ ಭ್ರಷ್ಟಾಚಾರ ನಿರ್ಮೂಲನಾ ಸಂಸ್ಥೆ(ರಿ) ಯವರು ನೀಡಿದ ದೂರಿನ ಕುರಿತು ನಿಯಮಾನುಸಾರ ಪರಿಶೀಲಿಸಿ, ತುರ್ತು ಅಗತ್ಯ ಕ್ರಮವಹಿಸಲು ಪೊಲೀಸ್ ಆಯುಕ್ತರಿಗೆ ಅಪರ ಜಿಲ್ಲಾಧಿಕಾರಿ ಸೂಚನೆ ನೀಡಿದ್ದಾರೆ.