ಮನೆ ರಾಜ್ಯ ರಾಜ್ಯವನ್ನು ಸುಡುತ್ತಿರುವ ರಣಬಿಸಿಲು: ಕಲಬುರಗಿಯಲ್ಲಿ ಗರಿಷ್ಟ 40.6 ಉಷ್ಣಾಂಶ ದಾಖಲು

ರಾಜ್ಯವನ್ನು ಸುಡುತ್ತಿರುವ ರಣಬಿಸಿಲು: ಕಲಬುರಗಿಯಲ್ಲಿ ಗರಿಷ್ಟ 40.6 ಉಷ್ಣಾಂಶ ದಾಖಲು

0

ಹವಾಮಾನ ಅಸಮತೋಲನದಿಂದ ರಾಜ್ಯದೆಲ್ಲೆಡೆ ವಾತಾವರಣದಲ್ಲಿ ದಿಢೀರ್‌ ಬದಲಾವಣೆಯಾಗಿದೆ. ತೇವಾಂಶ ಕೊರತೆಯಿಂದ ಕಲಬುರಗಿ, ರಾಯಚೂರು, ಬಳ್ಳಾರಿ, ವಿಜಯಪುರ, ಮಂಗಳೂರು, ಚಿತ್ರದುರ್ಗ, ಬೆಂಗಳೂರು, ಮೈಸೂರು, ಮಂಡ್ಯ, ಗೋಕರ್ಣ, ಗದಗ, ಮತ್ತು ಕಾರವಾರ ಸೇರಿ ಹಲವೆಡೆ ಬೆಳ್ಳಗ್ಗೆ 8 ಗಂಟೆಗೆ ರಣಬಿಸಿಲು ಸುಡಲಾರಂಭಿಸಿದೆ. ಕೆಲವೆಡೆ ಬಿಸಿಗಾಳಿ ಬೀಸತೊಡಗಿದೆ.

Join Our Whatsapp Group

ಬುಧವಾರ ಕಲಬುರಗಿಯಲ್ಲಿ ಗರಿಷ್ಟ 40.6 ಉಷ್ಣಾಂಶ ದಾಖಲಾಗಿದೆ. ಪೂರ್ವ ಮುಂಗಾರು ಮಳೆ ಕುಂಠಿತ ಪರಿಣಾಮದಿಂದ ವಾತಾವರಣದಲ್ಲಿ ತೇವಾಂಶ ಕೊರತೆ ಉಂಟಾಗಿದೆ. ನವೆಂಬರ್ ನಲ್ಲಿ ಸುರಿದ ಧಾರಾಕಾರ ಮಳೆಯಿಂದಾಗಿ ಕಳೆದ ವರ್ಷ ಚಳಿಗಾಲದ ಅವಧಿ ಇಳಿಮುಖವಾಗಿತ್ತು. ಆದ್ದರಿಂದ, ವಾಡಿಕೆಗಿಂತ ಮುನ್ನವೇ ಬೇಸಿಗೆ ಆರಂಭವಾಯಿತು. ಸಾಮಾನ್ಯವಾಗಿ ಮೂರು ತಿಂಗಳು ಇರುತ್ತಿದ್ದ ಬೇಸಿಗೆ ಈ ವರ್ಷ 4 ತಿಂಗಳು ಇರಲಿದೆ.

2 ಡಿಗ್ರಿ ಸೆಲ್ಸಿಯಸ್‌ ಹೆಚ್ಚಳ ? :  ಕರ್ನಾಟಕ ರಾಜ್ಯ ನ್ಯೆಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ ವತಿಯಿಂದ ರಾಜ್ಯದಲ್ಲಿ ಹವಾಮಾನ ಬದಲಾವಣೆಯಾಗುತ್ತಿರುವ ಕುರಿತು ವಿಶೇಷ ಅಧ್ಯಯನ ನಡೆಸಲಾಗಿತ್ತು.

1960 ರಿಂದ 1990ರವರೆಗೆ ಹಾಗೂ 1997 ರಿಂದ 2017ರವರೆಗೆ ಹನಾಮಾನದಲ್ಲಿ ಏನೆಲ್ಲ ಬದಲಾವಣೆಗಳಾಗಿವೆ ಎಂಬುದರ ಬಗ್ಗೆ 2 ಭಾಗಗಳಾಗಿ ವಿಂಗಡಿಸಿ ಉಸ್ತುವಾರಿ ಕೇಂದ್ರ ಅಧ್ಯಯನ ನಡೆಸಿತ್ತು. ಮೊದಲ 30 ವರ್ಷಗಳಲ್ಲಿ ಹವಾಮಾನ ಹೇಗಿತ್ತು?    ನಂತರದ 30 ವರ್ಷ ಹವಾಮಾನಗಳಲ್ಲಿ ಏನೆಲ್ಲಾ ಬದಲಾವಣೆಗಳಾಗಿವೆ. ಎಂಬ ಈ ಅಧ್ಯಯಾನದಲ್ಲಿ ವಾಡಿಕೆಗಿಂತ ಬಿಸಿಲು, ಮಳೆ, ಚಳಿ, ಗರಿಷ್ಠ ಮತ್ತು ಕನಿಷ್ಠ ತಾಪಮಾನದ ಉಷ್ಣಾಂಶ ಹೆಚ್ಚಳವಾಗಿರುವುದು ತಿಳಿದುಬಂದಿದೆ.  ಮುಂದಿನ ಕೆಲ ವರ್ಷಗಳಲ್ಲಿ ಸರಾಸರಿ 2 ಡಿಗ್ರಿ ಸೆಲ್ಸಿಯಸ್‌ ಉಷ್ಣಾಂಶ ಹೆಚ್ಚಳವಾಗುವ ಸಾಧ್ಯತೆ ಇದೆ. ಎಂದು ಮೂನ್ಸೂಚನೆ ನೀಡಿತ್ತು. ಈಗಿನ ಹವಾಮಾನ ಬದಲಾವಣೆಯನ್ನು ಜಾಗತಿಕ ತಾಪಮಾನ ಏರಿಕೆ ವ್ಯಾಪ್ತಿಯಲ್ಲಿ  ಪರಿಗಣೆಸಲಾಗಿದೆ.