ಮನೆ ಸುದ್ದಿ ಜಾಲ ಮತದಾನದಲ್ಲಿ ಭಾಗವಹಿಸಿ ಪ್ರಜಾಪ್ರಭುತ್ವ ಬಲಗೊಳಿಸಿ: ಹೆಚ್.ಕೆ ಸತೀಶ್

ಮತದಾನದಲ್ಲಿ ಭಾಗವಹಿಸಿ ಪ್ರಜಾಪ್ರಭುತ್ವ ಬಲಗೊಳಿಸಿ: ಹೆಚ್.ಕೆ ಸತೀಶ್

0

ಮೈಸೂರು: ಮತದಾನದಲ್ಲಿ ಭಾಗವಹಿಸಿ ಪ್ರಜಾಪ್ರಭುತ್ವ ಬಲಗೊಳಿಸಿ ಎಂದು ತಾಲ್ಲೂಕು ಸ್ವೀಪ್ ಸಮಿತಿ ಅಧ್ಯಕ್ಷರು ಹಾಗೂ ಕಾರ್ಯನಿರ್ವಾಹಕಧಿಕಾರಿ ಹೆಚ್.ಕೆ ಸತೀಶ್ ಅವರು ಹೇಳಿದರು

Join Our Whatsapp Group

ಇಂದು ಸಾಲಿಗ್ರಾಮ ತಾಲೂಕಿನಲ್ಲಿ ತಾಲೂಕು ಸ್ವೀಪ್ ಸಮಿತಿ  ವತಿಯಿಂದ ಆಯೋಜಿಸಿದ್ದ ವಿಧಾನಸಭಾ ಸಾರ್ವತ್ರಿಕ ಚುನಾವಣೆ ಹಿನ್ನೆಲೆಯಲ್ಲಿ, ಸಾರ್ವಜನಿಕರಲ್ಲಿ ಮತದಾನದ ಬಗ್ಗೆ ಜಾಗೃತಿ ಮೂಡಿಸುವ ಸಲುವಾಗಿ ಬೈಕ್ ರ್ಯಾಲಿಗೆ ಚಾಲನೆ ನೀಡಿ ಅವರು ಮಾತನಾಡಿದರು.

ತಾಲ್ಲೂಕಿನಾದ್ಯಂತ ಈಗಾಗಲೇ ಕಳೆದ ಎರಡು ತಿಂಗಳಿಂದ ಗ್ರಾಮ ಪಂಚಾಯಿತಿ ಹಂತದಲ್ಲಿ ಜನರಲ್ಲಿ ಮತದಾನದ ಅರಿವು ಮೂಡಿಸಲು ಈಗಾಗಲೇ ತಾಲೂಕಿನ ಸಾರ್ವಜನಿಕ ಸ್ಥಳಗಳಲ್ಲಿ ಜರುಗುವ ಸಂತೆಗಳು, ಸಾರ್ವಜನಿಕ ಸ್ಥಳಗಳು, ಜಾತ್ರೆಗಳಲ್ಲಿ ಸ್ವೀಪ್ ಚಟುವಟಿಕೆಗಳಡಿ ವಿಭಿನ್ನವಾಗಿ ಕಾರ್ಯಕ್ರಮಗಳನ್ನು ಆಯೋಜನೆ ಮಾಡಿ,  ಹೆಚ್ಚಿನ ಪ್ರಮಾಣದಲ್ಲಿ ಮತದಾನದ ಅರಿವು ಮೂಡಿಸಲಾಗುತ್ತಿದೆ. ಮತದಾನದ ದಿವಸ ಹೆಚ್ಚಿನ ಜನರನ್ನು ಮತಗಟ್ಟೆಗೆ ಕರೆದುಕೊಂಡು ಬಂದು ಮತ ಹಾಕಿಸುವುದು ನಮ್ಮ ಗುರಿ ಎಂದು ವಿವರಿಸಿದರು.

ಬಳಿಕ ಸಾಲಿಗ್ರಾಮ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಮಂಜುನಾಥ್ ಅವರು ಮಾತನಾಡಿ ಚುನಾವಣೆಯಲ್ಲಿ 80 ವರ್ಷ ಪೂರೈಸಿದ ಹಿರಿಯ ನಾಗರಿಕರಿಗೆ ಅಂಚೆ ಮೂಲಕ ಮತದಾನದ ಅವಕಾಶವಿದ್ದು, ಇದನ್ನು ಹಿರಿಯ ನಾಗರಿಕರು ಸದುಪಯೋಗ ಪಡೆದುಕೊಂಡು ಮತದಾನ ಮಾಡುವಂತೆ ತಿಳಿಸಿದರು.

ಇದೇವೇಳೆ ಸಾಲಿಗ್ರಾಮ ಬಸ್ ನಿಲ್ದಾಣದಲ್ಲಿ ಮಾನವ ಸರಪಳಿ ನಿರ್ಮಿಸಿ ಚುನಾವಣೆ ಪ್ರತಿಜ್ಞಾವಿಧಿಯನ್ನು ಬೋಧಿಸಲಾಯಿತು.

ಸಾಲಿಗ್ರಾಮದ ಯೋಗ ನರಸಿಂಹಸ್ವಾಮಿ ದೇವಾಲಯದಿಂದ ಹೊರಟ ರ‍್ಯಾಲಿ ಲಕ್ಷ್ಮೀಪುರ. ಚಿಕ್ಕನಾಯಕನಪುರ. ಬಳ್ಳೂರು. ಕೆಡಗ. ಮಾವನೂರು. ಪಶುಪತಿ. ಗಾಯನಹಳ್ಳಿ. ಗುಮ್ಮನ ಹಳ್ಳಿ. ಲಕ್ಕಿಕುಪ್ಪೆ. ಹರದನಹಳ್ಳಿ. ಶೀಗವಾಳು. ಕಾಳಮ್ಮನಕೊಪ್ಪಲು. ಸಾಲುಕೊಪ್ಪಲು. ಕರ್ಪೂರವಳ್ಳಿ, ತಂದ್ರೆ. ಅಂಕನಹಳ್ಳಿ,ಮೂಲಕ  ಮುಕ್ತಾಯಗೊಂಡಿತು.

ಈ ಸಂದರ್ಭದಲ್ಲಿ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳಾದ ಮಂಜುನಾಥ್ ಕೆ.ಎ, ಪುಟ್ಟೇಗೌಡ, ಸಂದೀಪ್, ಗುರುಮೂರ್ತಿ,  ನವೀನ್ ಕುಮಾರ್,. ರಂಗೇಗೌಡ, ಮಹದೇವ್, ಶ್ರೀನಿವಾಸ್, ನಾಗೇಶ್ , ಮಂಜುನಾಥ್, ಗ್ರಾಮ ಪಂಚಾಯಿತಿ ಕಾರ್ಯದರ್ಶಿ. ಐಇಸಿ ಸಂಯೋಜಕ ಸಂಜಯ್ ಬಿ.ಸಿ ಹಾಗೂ ಗ್ರಾಮ ಪಂಚಾಯಿತಿ ಸಿಬ್ಬಂದಿಗಳು ಹಾಜರಿದ್ದರು.