ಮನೆ ಯೋಗಾಸನ ಮಲಾಸನ ಯೋಗದ ಪ್ರಯೋಜನಗಳೇನು? ಅದನ್ನು ಮಾಡುವುದು ಹೇಗೆ?: ಇಲ್ಲಿದೆ ಮಾಹಿತಿ

ಮಲಾಸನ ಯೋಗದ ಪ್ರಯೋಜನಗಳೇನು? ಅದನ್ನು ಮಾಡುವುದು ಹೇಗೆ?: ಇಲ್ಲಿದೆ ಮಾಹಿತಿ

0

ಮಲಾಸನ ಮಾಡುವುದರಿಂದ ಸೊಂಟದ ಸ್ನಾಯುಗಳು ಬಲವಾಗುತ್ತದೆ. ಈ ಆಸನವು ಜೀರ್ಣಾಂಗ ವ್ಯವಸ್ಥೆಯನ್ನು ಸುಧಾರಿಸಲು ತುಂಬಾ ಉಪಯುಕ್ತವಾಗಿದೆ.

Join Our Whatsapp Group

ಯೋಗವು ವೈಜ್ಞಾನಿಕ ಜೀವನ ವಿಧಾನವಾಗಿದೆ. ಕ್ರಿ.ಪೂ 200 ವರ್ಷಗಳ ಕೆಳಗೆ ಪತಂಜಲಿ ಬರೆದ ಯೋಗ ಈಗ ವಿಶ್ವವ್ಯಾಪಿಯಾಗಿದೆ. ದೇಹವನ್ನು ಸದೃಢವಾಗಿ ಮತ್ತು ಆರೋಗ್ಯವಾಗಿಡಲು ಯೋಗಾಸನಗಳು ಉತ್ತಮವಾಗಿವೆ. ಆಧುನಿಕ ಯೋಗದಲ್ಲಿ ಮಲಾಸನವು ಅನೇಕ ಪ್ರಯೋಜನಗಳನ್ನು ಹೊಂದಿದೆ.

ಈ ಯೋಗ ಮಾಡುವುದರಿಂದ ಪೃಷ್ಠ, ಮೊಣಕಾಲು ಮತ್ತು ಪಾದಗಳು ಬಲಗೊಳ್ಳುತ್ತವೆ. ಸ್ನಾಯುವಿನ ಶಕ್ತಿಯೂ ಉತ್ತಮವಾಗಿರುತ್ತದೆ. ಯೋಗ ತಜ್ಞರ ಪ್ರಕಾರ ಮಲಸಾನ ಯೋಗದಿಂದ ಹಲವಾರು ಪ್ರಯೋಜನಗಳಿವೆ. ಈ ಯೋಗವನ್ನು ನಿಮ್ಮ ದಿನಚರಿಯ ಭಾಗವನ್ನಾಗಿ ಮಾಡಿಕೊಂಡರೆ ಪರಿಣಾಮಕಾರಿ ಫಲಿತಾಂಶ ದೊರೆಯುತ್ತದೆ.

ಮಲಾಸನ

ಮೊದಲು ಕೈ ಜೋಡಿಸಿ ನಿಲ್ಲಬೇಕು. ನಂತರ ಕಾಲುಗಳನ್ನು ಅಗಲವಾಗಿ ಹರಡಿ ಮತ್ತು ಪಾದದ ಮೇಲೆ ಭಾರವನ್ನು ಇರಿಸಿ ಕುಳಿತುಕೊಳ್ಳಬೇಕು. ಈ ಆಸನದಲ್ಲಿ ಪಾದವನ್ನು ಯಾವುದೇ ರೀತಿಯಲ್ಲಿ ಚಲಿಸಬಾರದು. ಮೊಣಕಾಲುಗಳು ಸಾಧ್ಯವಾದಷ್ಟು ಅಗಲ ಮಾಡಬೇಕು. ಈ ಆಸನ ಮಾಡಲು ಕಷ್ಟವಾದರೆ ಇದ್ದರೆ ಗೋಡೆಯ ಸಪೋರ್ಟ್ ತೆಗೆದುಕೊಳ್ಳಬಹುದು.

ಮಲಾಸನದ ಪ್ರಯೋಜನಗಳು

ಈ ಯೋಗಾಸನದ ಮೂಲಕ ಸೊಂಟದ ಸ್ನಾಯುಗಳು ಬಲವಾಗುತ್ತದೆ. ಈ ಆಸನವು ಜೀರ್ಣಾಂಗ ವ್ಯವಸ್ಥೆಯನ್ನು ಸುಧಾರಿಸಲು ತುಂಬಾ ಉಪಯುಕ್ತವಾಗಿದೆ. ಮಲಾಸನ ಯೋಗವು ಮಹಿಳೆಯರಿಗೆ ತುಂಬಾ ಪ್ರಯೋಜನಕಾರಿಯಾಗಿದೆ. ಇದು ಶ್ರೋಣಿಯ ಸ್ನಾಯುಗಳನ್ನು ಬಲಪಡಿಸುತ್ತದೆ. ಸಾಮಾನ್ಯ ಹೆರಿಗೆಗಾಗಿ ಮಹಿಳೆಯರು ಈ ಯೋಗಾಸನವನ್ನು ಆರಿಸಿಕೊಳ್ಳಬಹುದು. ಇದು PCOS ನಿರ್ವಹಣೆಯಲ್ಲಿ ಸಹ ಸಹಾಯ ಮಾಡುತ್ತದೆ.