ಮನೆ ದೇವರ ನಾಮ ಗುಮ್ಮನ ಕರೆಯದಿರೆ ಅಮ್ಮ ನೀನು

ಗುಮ್ಮನ ಕರೆಯದಿರೆ ಅಮ್ಮ ನೀನು

0

“ಗುಮ್ಮನ ಕರೆಯದಿರೆ|

ಅಮ್ಮ ನೀನು ಗುಮ್ಮನ ಕರೆಯದಿರೆ…..”.

ಗುಮ್ಮನ ಕರೆಯದಿರೆ| ಅಮ್ಮ ನೀನು

ಗುಮ್ಮನ ಕರೆಯದಿರೆ ||ಪ||

ಸುಮ್ಮನೆ ಇದ್ದೇನು| ಅಮ್ಮಿಯ ಬೇಡೆನು|

ಮಮ್ಮು ಉಣುತೇನೆ ಅಮ್ಮ ಅಳುವುದಿಲ್ಲ ||ಅ||

ಹೆಣ್ಣುಗಳಿರುವಲ್ಲಿಗೆ ಹೋಗಿ ಅವರ

ಕಣ್ಣು ಮುಚ್ಚುವುದಿಲ್ಲವೆ|

ಚಿಣ್ಣರ ಬಡಿಯೆನು|

ಅಣ್ಣನ ಬೈಯೆನು ಬೆಣ್ಣೆಯ ಬೇಡೆನು|

ಮಣ್ಣು ತಿನ್ನುವುದಿಲ್ಲ ||೧||

ಬಾವಿಗೆ ಹೋಗೆ ಕಾಣೆ| ಅಮ್ಮ ನಾನು ಹಾವಿನೊಳಾಡೆ ಕಾಣೆ|ಆವಿನ

ಮೊಲೆಯೂಡೆ| ಕರುಗಳ ಬಿಡೆ ನೋಡೆ|

ದೇವರಂತೆ ಒಂದು ಠಾವಿಗೆ ಕೂಡುವೆ ||೨||

ಮಗನ ಮಾತನು ಕೇಳುತ ಗೋಪೀದೇವಿ|

ಮುಗುಳುನಗೆಯ ನಗುತ ಜಗದೊಡೆಯ

ಶ್ರೀ ಪುರಂದರವಿಠಲನ ಬಿಗಿದಪ್ಪಿಕೊಂಡಳು ಮೋಹದಿಂದಾಗ ||೩|

ಹಿಂದಿನ ಲೇಖನಶ್ರದ್ಧಾ ವಾಲ್ಕರ್ ಹತ್ಯೆ: ಆರೋಪಪಟ್ಟಿಯಲ್ಲಿರುವ ಮಾಹಿತಿ ಪ್ರಸಾರ ಮಾಡದಂತೆ ಮಾಧ್ಯಮಗಳಿಗೆ ದೆಹಲಿ ಹೈಕೋರ್ಟ್ ನಿರ್ಬಂಧ
ಮುಂದಿನ ಲೇಖನಮಲಾಸನ ಯೋಗದ ಪ್ರಯೋಜನಗಳೇನು? ಅದನ್ನು ಮಾಡುವುದು ಹೇಗೆ?: ಇಲ್ಲಿದೆ ಮಾಹಿತಿ