ಉತ್ತರ ಕನ್ನಡ: ಮಾನಸಿಕ ಅಸ್ವಸ್ಥ ಮಗನೇ ತಂದೆಯನ್ನು ಕೊಂದಿರುವ ಘಟನೆ ಜಿಲ್ಲೆಯ ಹೊನ್ನಾವರ ತಾಲೂಕಿನ ಕರ್ಕಿ ತೊಪ್ಪಲಕೇರಿ ನಡೆದಿದೆ.
ಕಳೆದ ಏಳೆಂಟು ವರ್ಷಗಳಿಂದ ಮಗ ಭರತ್ ಮೇಸ್ತಾ ಮಾನಸಿಕ ಅಸ್ವಸ್ಥಗೊಂಡಿದ್ದು, ಚಿಕಿತ್ಸೆ ಪಡೆಯುತ್ತಿದ್ದ. ಇತ್ತೀಚೆಗಷ್ಟೇ ಕೆಲ ದಿನಗಳ ಹಿಂದೆ ಮನೆಗೆ ಬಂದಿದ್ದ. ಪೂರ್ಣ ಪ್ರಮಾಣದಲ್ಲಿ ಗುಣಮುಖನಾಗದ ಮಗನನ್ನು, ಮನೆಯಿಂದ ಆಚೆ ಬಿಡದೆ, ಮನೆಯಲ್ಲಿಯೇ ಸಮಯಕ್ಕೆ ಸರಿಯಾಗಿ ಮಾತ್ರೆ, ಔಷಧಿ ತೆಗೆದುಕೊಂಡು ವಿಶ್ರಾಂತಿ ಪಡೆಯಲು ಹೇಳುತ್ತಿದ್ದ ಅಪ್ಪನನ್ನು ಇಂದು ಹರಿತವಾದ ಅಸ್ತ್ರದಿಂದ ತಲೆಗೆ ಹೊಡೆದು, ಹತ್ಯೆ ಮಾಡಿದ್ದಾನೆ.
ಮಗ ಸಂಪೂರ್ಣ ಗುಣಮುಖನಾಗಿಲ್ಲ. ಹೊರೆಗೆ ಹೋದರೆ ಜನರೊಂದಿಗೆ ಜಗಳ ಮಾಡುತ್ತಾನೆ. ಎಲ್ಲರೂ ಹುಚ್ಚ ಎಂದು ಅಣಕಿಸುತ್ತಾರೆ. ಇದರಿಂದ ಅವನು ಮತ್ತಷ್ಟು ಕುಗ್ಗಬಹುದು ಎಂದು ತಂದೆ ಕಾಳಜಿಯನ್ನ ಲೆಕ್ಕಿಸದ ಮಗ ಕೊಟ್ಟಿಗೆಯಲ್ಲಿ ಕೆಲಸ ಮಾಡುತ್ತಿದ್ದ ತಂದೆ ಪಾಂಡುರಂಗ ಮೇಸ್ತಾನನ್ನ ಚಾಕುವಿನಿಂದ ಹಲ್ಲೆ ಮಾಡಿ, ನಂತರ ಗ್ರ್ಯಾಂಡರ್ ಸ್ಟಾಂಡ್ನಿಂದ ಭೀಕರವಾಗಿ ತಲೆಗೆ ಹೊಡೆದು ಕೊಂದಿದ್ದಾನೆ.
ಇನ್ನು ಮಾಹಿತಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ದೌಡಾಯಿಸಿದ ಹೊನ್ನಾವರ ಪೊಲೀಸರು ಪರಿಶೀಲನೆ ನಡೆಸಿ ಆರೋಪಿ ಭರತ್ ಮೇಸ್ತಾನನ್ನು ವಶಕ್ಕೆ ಪಡೆದಿದ್ದಾರೆ.














