ಮನೆ ರಾಜ್ಯ ಕೃಷ್ಣಾ ನದಿಗೆ ಹರಿದು ಬರುತ್ತಿರುವ ಅಪಾರ ಪ್ರಮಾಣದ ನೀರು: ನದಿಪಾತ್ರಕ್ಕೆ ತೆರಳದಂತೆ ಸಾರ್ವಜನಿಕರಿಗೆ ಸೂಚನೆ

ಕೃಷ್ಣಾ ನದಿಗೆ ಹರಿದು ಬರುತ್ತಿರುವ ಅಪಾರ ಪ್ರಮಾಣದ ನೀರು: ನದಿಪಾತ್ರಕ್ಕೆ ತೆರಳದಂತೆ ಸಾರ್ವಜನಿಕರಿಗೆ ಸೂಚನೆ

0

ಬಾಗಲಕೋಟೆ: ಕೃಷ್ಣಾ ನದಿ ತುಂಬಿ‌ ಹರಿಯುತ್ತಿದ್ದು ಇನ್ನಷ್ಟು ನೀರು ಬರುವ ಸಾಧ್ಯತೆ ಇರುವುದರಿಂದ ನದಿ ಪಾತ್ರಕ್ಕೆ ತೆರಳದಂತೆ ಜಮಖಂಡಿ ಉಪವಿಭಾಗಾಧಿಕಾರಿ ಸಂತೋಷ ಕಾಮಗೌಡ್ರ, ಸಾರ್ವಜನಿಕರಲ್ಲಿ ಮನವಿ ಮಾಡಿದ್ದು, ಜಮಖಂಡಿ ತಾಲೂಕಿನ ವಿವಿಧ ಗ್ರಾಮಗಳಲ್ಲಿ ಡಂಗುರ ಸಾರಿದ್ದಾರೆ.

Join Our Whatsapp Group

ಮಹಾರಾಷ್ಟ್ರದಲ್ಲಿ ಸುರಿಯುತ್ತಿರುವ ಭಾರಿ ಮಳೆ ಹಿನ್ನೆಲೆ ಬಾಗಲಕೋಟೆ ಜಿಲ್ಲೆ ಜಮಖಂಡಿ, ರಬಕವಿ-ಬನಹಟ್ಟಿ ತಾಲೂಕುಗಳ ವ್ಯಾಪ್ತಿಯಲ್ಲಿ ಹರಿಯುವ ಕೃಷ್ಣಾ ನದಿಗೆ ಅಂದಾಜು 80 ಸಾವಿರ ಕ್ಯೂಸೆಕ್ ನೀರು ಹರಿದು ಬರುತ್ತಿದೆ.

ಮೂರು ಲಕ್ಷ ಕ್ಯೂಸೆಕ್ ನೀರು ಬಂದಾಗ ಮಾತ್ರ ಅಪಾಯ ಎದುರಾಗಲಿದೆ. ಅಲ್ಲಿವರೆಗೂ ಪರಿಸ್ಥಿತಿ ಹತೋಟಿಯಲ್ಲಿದೆ ಎಂದ ಎಸಿ ಸಂತೋಷ ಕಾಮಗೌಡ್ರ ತಿಳಿಸಿದ್ದಾರೆ.

ಹಿಂದಿನ ಲೇಖನಗ್ರಾಹಕರ ಅನುಮತಿಯಿಲ್ಲದೇ 1.89 ಕೋಟಿ ರೂ. ಹಣ ವರ್ಗಾವಣೆ: ಬ್ಯಾಂಕ್ ಮ್ಯಾನೇಜರ್, ಸಹಾಯಕ ಅಮಾನತು
ಮುಂದಿನ ಲೇಖನಡಿಕೆ ಶಿವಕುಮಾರ್ ವಿರುದ್ಧ ಹೆಚ್.ಡಿ.ಕುಮಾರಸ್ವಾಮಿ ಆಕ್ರೋಶ