ಮನೆ ಅಂತಾರಾಷ್ಟ್ರೀಯ ಪಾಕಿಸ್ತಾನದ ಪೊಲೀಸ್ ಠಾಣೆಯ ಮೇಲೆ ದಾಳಿ: 12 ಪೊಲೀಸರು ಸಾವು, 40ಕ್ಕೂ ಹೆಚ್ಚು ಮಂದಿಗೆ ಗಾಯ

ಪಾಕಿಸ್ತಾನದ ಪೊಲೀಸ್ ಠಾಣೆಯ ಮೇಲೆ ದಾಳಿ: 12 ಪೊಲೀಸರು ಸಾವು, 40ಕ್ಕೂ ಹೆಚ್ಚು ಮಂದಿಗೆ ಗಾಯ

0

ಇಸ್ಲಾಮಾಬಾದ್: ಪಾಕಿಸ್ತಾನದಲ್ಲಿ ದು ಪೊಲೀಸ್​ ಠಾಣೆಯ ಮೇಲೆ ಬಾಂಬ್​ ದಾಳಿ ನಡೆಸಲಾಗಿದ್ದು, 12 ಪೊಲೀಸರು ಮೃತಪಟ್ಟು, 40 ಕ್ಕೂ ಹೆಚ್ಚು ಸಿಬ್ಬಂದಿ ಗಾಯಗೊಂಡಿದ್ದಾರೆ.

Join Our Whatsapp Group

ಅಫ್ಘಾನಿಸ್ತಾನದ ಹೊಂದಿಕೊಂಡಿರುವ ಪಾಕಿಸ್ತಾನದ ಖೈಬರ್ ಪಖ್ತುಂಖ್ವಾದ ಸ್ವಾತ್ ಕಣಿವೆಯ ಕಬಲ್ ಪಟ್ಟಣದಲ್ಲಿನ ವಿಶೇಷ ಭಯೋತ್ಪಾದನಾ ನಿಗ್ರಹ ಕೇಂದ್ರದ ಮೇಲೆ ಈ ದಾಳಿ ನಡೆಸಲಾಗಿದೆ.

ಬಾಂಬ್​ ದಾಳಿಯಿಂದಾಗಿ ಇಡೀ ಕಟ್ಟಡ ನೆಲಸಮವಾಗಿದೆ. ಇದೊಂದು ಉಗ್ರ ದಾಳಿಯಾಗಿದ್ದು, ತಾಲಿಬಾನಿಗರ ಕೃತ್ಯ ಎಂದು ಪ್ರಾಥಮಿಕ ತನಿಖೆಯಲ್ಲಿ ಕಂಡುಬಂದಿದೆ. ಆದರೆ, ಪೊಲೀಸ್ ಅಧಿಕಾರಿಗಳು ಗ್ರೆನೇಡ್ ಮತ್ತು ಇತರ ಸ್ಫೋಟಕಗಳನ್ನು ಸಂಗ್ರಹಿಸುವ ನೆಲಮಾಳಿಗೆಯಲ್ಲಿ ಉಂಟಾದ ಎಡವಟ್ಟಿನಿಂದಾಗಿ ಈ ಘಟನೆ ನಡೆದಿದೆ ಎಂದು ಹೇಳಿಕೆ ನೀಡಿದ್ದಾರೆ.

ಇದು ಉಗ್ರ ದಾಳಿ ಎಂಬುದು ಸಾಬೀತಾಗಿಲ್ಲ. ಆತ್ಮಹತ್ಯಾ ಬಾಂಬರ್​​ ಕೃತ್ಯವಾಗಿರುವ ಸಾಧ್ಯತೆ ಕಡಿಮೆ ಇದೆ ಎಂದು ಪೊಲೀಸ್​ ಅಧಿಕಾರಿ ಶಾಫಿ ಉಲ್ಲಾ ತಿಳಿಸಿದ್ದಾರೆ.

ಪ್ರಧಾನಿ ಷರೀಫ್​ ಆತಂಕ: ದೇಶದಲ್ಲಿನ ಭಯೋತ್ಪಾದನೆಯ ವಿರುದ್ಧದ ಹೋರಾಟದಲ್ಲಿ ಮೊದಲ ಸಾಲಿನಲ್ಲಿ ಪೊಲೀಸರು ಇದ್ದಾರೆ. ಅವರನ್ನು ಎಂದಿಗೂ ತಡೆಯಲಾಗದು. ದಾಳಿಯನ್ನು ಎಲ್ಲಾ ಕೋನಗಳಿಂದಲೂ ತನಿಖೆ ನಡೆಸಲಾಗುವುದು ಎಂದು ಟ್ವೀಟ್​​ ಮಾಡಿದ್ದಾರೆ.