ಮನೆ ರಾಜ್ಯ 150 ಸ್ಥಾನ ಯಾರಿಗೆ ಕೊಡಬೇಕೆಂದು ಜನ ತೀರ್ಮಾನ ಮಾಡುತ್ತಾರೆ: ಸಿಎಂ ಬೊಮ್ಮಾಯಿ

150 ಸ್ಥಾನ ಯಾರಿಗೆ ಕೊಡಬೇಕೆಂದು ಜನ ತೀರ್ಮಾನ ಮಾಡುತ್ತಾರೆ: ಸಿಎಂ ಬೊಮ್ಮಾಯಿ

0

ಹುಬ್ಬಳ್ಳಿ: ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ ರಕ್ತದಲ್ಲಿ ಬರೆದುಕೊಡುವ ಅವಶ್ಯಕತೆ ಇಲ್ಲ. 150 ಸ್ಥಾನ ಯಾರಿಗೆ ನೀಡಬೇಕು ಎಂಬುದು ಜನ ನಿರ್ಧಾರ ಮಾಡುತ್ತಾರೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.

Join Our Whatsapp Group

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಚುನಾವಣೆವರೆಗೂ ಅಷ್ಟೇ ಕಾಂಗ್ರೆಸ್ ಗ್ಯಾರಂಟಿ ಇರುತ್ತವೆ. ಚುನಾವಣೆ ಬಳಿಕ ಯಾವುದು ಈಡೇರುವುದಿಲ್ಲ. ಇದಕ್ಕೆ ಉದಾಹರಣೆಗೆ ಬೇರೆ ಕಾಂಗ್ರೆಸ್ ಆಡಳಿತ ರಾಜ್ಯದಲ್ಲಿ ಕೊಟ್ಟ ಭರವಸೆ ಈಡೇರಿಸಿಲ್ಲ ಎಂದು ಆರೋಪಿಸಿದರು.

ನಮಗೆ ಜನರ ಮೇಲೆ ವಿಶ್ವಾಸವಿದೆ. ಸಂಪೂರ್ಣ ಬಹುಮತ ನೀಡುತ್ತಾರೆ. ಅಲ್ಲದೆ ಬಿ.ಎಸ್.ವೈ ಅವರು ಜನರ ನಾಡಿಮಿಡಿತ ಅರಿತಿದ್ದು, ಅವರ ಅನುಭವದ ಪ್ರಕಾರ ಬಿಜೆಪಿ ಹೆಚ್ಚಿನ ಸ್ಥಾನ ಪಡೆದು ಅಧಿಕಾರಕ್ಕೆರಲಿದೆ ಎಂದು ತಿಳಿಸಿದರು.

ಚುನಾವಣೆಯಲ್ಲಿ ಜನರಿಗೆ ಮೋಸ ಮಾಡಲೆಂದೆ ಕಾಂಗ್ರೆಸ್ ಗ್ಯಾರಂಟಿ ಭರವಸೆ ನೀಡುತ್ತಿದೆ. ಕಾಂಗ್ರೆಸ್ ನಾಯಕರ ಮೇಲೆ ಜನರ ವಿಶ್ವಾಸವಿಲ್ಲ. ಅದಕ್ಕೆ ಕಾರ್ಡ್ ಕೊಡುತ್ತಿದ್ದಾರೆ. ಜನರಿಗೆ ದಾರಿತಪ್ಪಿಸುವ ಹೊಸ ತಂತ್ರವಷ್ಟೆ ಎಂದು ಕಾಂಗ್ರೆಸ್ ಗ್ಯಾರಂಟಿ ಬಗ್ಗೆ ಲೇವಡಿ ಮಾಡಿದರು.

ಪ್ರಧಾನಿ ಮೋದಿಯವರು ಸಂವಾದದಲ್ಲಿ ಬೂತ್ ಗೆಲ್ಲುವ ಮೂಲಕ ಕ್ಷೇತ್ರ ಗೆಲ್ಲುವ ಅಂಶವನ್ನು ಒತ್ತಿ ಹೇಳಿದ್ದಾರೆ. ಆ ನಿಟ್ಟಿನಲ್ಲಿ ಪಕ್ಷದಲ್ಲಿ ಸಂಘಟನೆ ಮತ್ತು ಚುನಾವಣೆ ತಂತ್ರ ಮಾಡಲಾಗಿದೆ. ಡಬಲ್ ಎಂಜಿನ ಸರ್ಕಾರ ಪೂರಕವಾಗಿದೆ ಎಂದು ಹೇಳಿದ್ದಾರೆ. ಕುರಿತು ಹೇಳಿದ್ದಾರೆ. ಮೂಲಸೌಕರ್ಯ ಸೇರಿದಂತೆ ರಾಜ್ಯದಲ್ಲಿ ನಡೆದ ಅಭಿವೃದ್ಧಿ ಕಾರ್ಯದ ಬಗ್ಗೆ ಜನರಿಗೆ ಮನವರಿಕೆ ಮಾಡಿಕೊಡಲಾಗುವುದು ಎಂದು ತಿಳಿಸಿದರು.