ಮನೆ ಪ್ರವಾಸ ಕಡಿಮೆ ಬೆಲೆಯಲ್ಲಿ ಉತ್ತರ ಭಾರತದ ಪ್ರವಾಸ

ಕಡಿಮೆ ಬೆಲೆಯಲ್ಲಿ ಉತ್ತರ ಭಾರತದ ಪ್ರವಾಸ

0

ಬಜೆಟ್ ಸ್ನೇಹಿ ಪ್ರವಾಸ ಮಾಡಲು ನೀವು ಬಯಸಿದರೆ ಈ ಬೇಸಿಗೆಯಲ್ಲಿಯು ಪ್ಲಾನ್ ಮಾಡಬಹುದು. ಅದರಲ್ಲೂ ಉತ್ತರ ಭಾರತದ ಕೆಲವು ಸ್ಥಳಗಳು ನಿಮ್ಮ ಬಜೆಟ್ ಗೆ ಅನುಗುಣವಾಗಿರುತ್ತದೆ. ತಂಪಾದ ವಾತಾವರಣವನ್ನು ಹೊಂದಿರುವ ತಾಣಗಳ ಬಗ್ಗೆ ಲೇಖನದಲ್ಲಿ ಮಾಹಿತಿ ನೀಡಲಾಗಿದೆ.

Join Our Whatsapp Group

ಕುಟುಂಬ ಅಥವಾ ಸ್ನೇಹಿತರೊಟ್ಟಿಗೆ ಅಥವಾ ಏಕಾಂತವಾಗಿ ಕೂಡ ಈ ಕೆಳಗಿನ ತಾಣಗಳಿಗೆ ಪ್ರವಾಸ ಯೋಜಿಸಬಹುದು. ಹಾಗಾದರೆ ಯಾವೆಲ್ಲಾ ತಾಣಗಳು? ಎಂಬುದನ್ನು ಇಲ್ಲಿ ಮಾಹಿತಿ ನೀಡಲಾಗಿದೆ ಓದಿ.

ರಿಷಿಕೇಶ

ಬಜೆಟ್ ಸ್ನೇಹಿ ಪ್ರವಾಸ ಮಾಡಲು ಉತ್ತರಾಖಂಡ ರಾಜ್ಯದ ರಿಷಿಕೇಶಕ್ಕೆ ನೀವು ಹೋಗಲು ಪ್ಲಾನ್ ಮಾಡಿ. ರಿಷಿಕೇಶ ಒಂದು ಅತ್ಯುತ್ತಮವಾದ ಆಧ್ಯಾತ್ಮಿಕ ಹಾಗು ಸಾಹಸ ತಾಣವಾಗಿದೆ. ಇಲ್ಲಿ ವಾಸ್ತವ್ಯ ಹಾಗು ಆಹಾರ ಕಡಿಮೆ ಬೆಲೆಯಲ್ಲಿ ದೊರೆಯುತ್ತವೆ. ರಿಷಿಕೇಶವು ಯೋಗಾಭ್ಯಾಸ ಹಾಗು ಸಾಹಸ ಮಾಡುವವರಿಗೆ ಒಂದೊಳ್ಳೆ ತಾಣವಾಗಿದೆ.

ಇದು ತನ್ನ ರಮಣೀಯವಾದ ಸೌಂದರ್ಯದಿಂದ ಹಾಗು ಎತ್ತರದ ಗರ್ವಾಲ್ ಹಿಮಾಲಯದ ತಪ್ಪಲಿನ ಪ್ರಬಲವಾದ ಸೊಬಗಿನಿಂದ ಪ್ರಕೃತಿ ಪೇಮಿಗಳನ್ನು ಆಕರ್ಷಿಸುತ್ತದೆ. ನೀವು ಅನ್ವೇಷಣೆ ಮಾಡಲು ಇಲ್ಲಿ ಸಾಕಷ್ಟು ಪ್ರವಾಸಿ ಸ್ಥಳಗಳಿವೆ.

ಮೇಘಾಲಯ

ಮೋಡಗಳ ವಾಸಸ್ಥಾನ ಎಂದೇ ಕರೆಯಲಾಗುವ ಮೇಘಾಲಯ ಪ್ರಕೃತಿ ಪ್ರೇಮಿಗಳ ಸ್ವರ್ಗವಾಗಿದೆ. ಇಲ್ಲಿ ಸಮ್ಮೋಹನಗೊಳಿಸುವ ಸ್ಥಳಗಳು ಬಹುಶಃ ಪ್ರಪಂಚದ ಪ್ರವಾಸಿಗರನ್ನು ಆಕರ್ಷಿಸುತ್ತದೆ. ಬೃಹತ್ ಬೆಟ್ಟಗಳು, ಕಣಿವೆಗಳು, ಹಲವಾರು ಸರೋವರಗಳು, ಮನಮೋಹಕ ಜಲಪಾತಗಳು, ಪಿಚ್ ಡಾರ್ಕ್ ಗುಹೆಗಳು ಮತ್ತು ಪವಿತ್ರ ಕಾಡುಗಳನ್ನು ಮೇಘಾಲಯದಲ್ಲಿ ನೋಡಬಹುದು.

ಉತ್ತರ ಭಾರತದಲ್ಲಿ ನೀವು ಬಜೆಟ್ ಸ್ನೇಹಿ ಪ್ರವಾಸ ಕೈಗೊಳ್ಳಲು ಈ ರಾಜ್ಯ ಬೆಸ್ಟ್ ಎಂದೇ ಹೇಳಬಹುದು. ಕುಟುಂಬದ ಜೊತೆ ಅಥವಾ ಏಕಾಂಗಿಯಾಗಿ ಪ್ರಕೃತಿಯ ಮಡಿಲಿನಲ್ಲಿ ಉಳಿಯಲು ಮೇಘಾಲಯಕ್ಕೆ ಹೋಗಬಹುದು.

ಡಾರ್ಜಿಲಿಂಗ್

ಡಾರ್ಜಿಲಿಂಗ್ ಭಾರತದ ಸುಂದರವಾದ ಗಿರಿಧಾಮಗಳಲ್ಲಿ ಒಂದಾಗಿದೆ. ವಿಸ್ತಾರವಾದ ಚಹಾದ ತೋಟಗಳು, ಬ್ರಿಟಿಷ್ ಬಂಗಲೆ ಮಂತ್ರಮುಗ್ದರನ್ನಾಗಿಸುತ್ತವೆ. ಇಲ್ಲಿ ನಂಬಲಾಗದ ವಿಹಂಗಮ ನೋಟಗಳನ್ನು ಹೊಂದಿದೆ. ಕಾಂಚನಜುಂಗಾ ಹಿಮ ಶಿಖರಗಳು, ಮಹಲುಗಳು, ಚರ್ಚುಗಳು ಸೇರಿದಂತೆ ಸುಂದರವಾದ ವಸಾಹತುಶಾಹಿ ವಾಸ್ತುಶಿಲ್ಪ, ಭವ್ಯವಾದ ಪ್ರಾಕೃತಿ ನೋಟಗಳನ್ನು ಇಲ್ಲಿ ನೋಡಬಹುದಾಗಿದೆ. ಡಾರ್ಜಿಲಿಂಗ್ ಕೇವಲ ದಂಪತಿಗಳಿಗೆ ಮಾತ್ರವಲ್ಲ, ಏಕಾಂಗಿಯಾಗಿ ಪ್ರವಾಸ ಮಾಡುವವರಿಗೂ ಸೂಕ್ತವಾಗಿದೆ.

ಕಸೋಲ್

ಹಿಮಾಚಲ ಪ್ರದೇಶದ ಕಸೋಲ್ ಪ್ರಶಾಂತ ಹಾಗು ಸಾಹಸಮಯ ತಾಣವಾಗಿದೆ. ನೀವು ಈ ಬೇಸಿಗೆಯಲ್ಲಿ ತಪ್ಪದೇ ಭೇಟಿ ನೀಡಲೇಬೇಕಾದ ಸ್ಥಳಗಳಲ್ಲಿ ಕಸೋಲ್ ಕೂಡ ಒಂದಾಗಿದೆ. ಇದು ಅನೇಕ ಕಾರಣಗಳಿಂದಾಗಿ ಹೆಸರುವಾಸಿಯಾಗಿದೆ. ಭಾರತದ ಹಲವಾರು ಭಾಗಗಳಿಂದಲೇ ಅಲ್ಲದೇ ವಿದೇಶಿಗರು ಕೂಡ ಕಸೋಲ್ನ ರಮಣೀಯ ವಾತಾವರಣವನ್ನು ಆನಂದಿಸಲು ಬರುತ್ತಾರೆ.

ಬ್ಯಾಕ್ಪ್ಯಾಕರ್ಗಳು ಮತ್ತು ಬಜೆಟ್ ಪ್ರಯಾಣಿಕರಿಗೆ ಆಶ್ರಯ ತಾಣವಾಗಿ ಹೆಸರುವಾಸಿಯಾಗಿದೆ. ಆಳವಾದ ಕಣಿವೆಗಳು, ಹಸಿರಿನಿಂದ ಕೂಡಿದ ಬೆಟ್ಟಗಳನ್ನು ನೀವು ಇಲ್ಲಿ ನೋಡುತ್ತೀರಿ.

ಈ ತಾಣಗಳಿಗೂ ಹೋಗಬಹುದು

ಪುಷ್ಕರ್

ನೈನಿತಾಲ್

ಮೆಕ್ಲಿಯೋಡ್ಗಂಜ್

ಇಟಾನಗರ

ಖಜುರಾಹೊ